Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಈ ಬಾರಿಯೂ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಇಲ್ಲ

ಶಿವಮೊಗ್ಗ ನಗರದಲ್ಲಿ ಈ ಬಾರಿಯೂ ಎಂದಿನಂತೆಯೇ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ ಎಂದು ಹಿಂದೂ ಮಹಾ ಮಂಡಳಿ ತಿಳಿಸಿದೆ. ಪ್ರತಿವರ್ಷದಂತೆ ಈ ಬಾರಿಯೂ ಹಿಂದೂ ಮಹಾಸಭಾ ಗಣಪತಿಯನ್ನು ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿ, ನಂತರ ತುಂಗಾನದಿಯಲ್ಲಿ ವಿಸರ್ಜಿಸಲು ಮಂಡಳಿಯು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತಿದ್ದ ಹಿಂದೂ ಮಹಾಸಭಾ ಗಣಪತಿಯ ಭವ್ಯ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ವರ್ಷದಂತೆ ಈ ಬಾರಿ ಸಹಾ ರದ್ದು ಮಾಡಲಾಗಿದೆ. ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಸಂಬಂಧ ಹಬ್ಬಗಳ ಆಚರಣೆಗೆ ಮಾರ್ಗಸೂಚಿ ಹೊರಡಿಸಿರುವ ಹಿನ್ನೆಲೆಯಲ್ಲಿ ಇಂದು ನಡೆದ ಹಿಂದೂ ಮಹಾ ಮಂಡಳಿಯ ಸಭೆಯಲ್ಲಿ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಶಿವಮೊಗ್ಗ ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಎಂದರೆ ಜಿಲ್ಲೆಯ ಯುವಜನರು ಹಾಗೂ ಭಕ್ತರಿಗೆ ಸಂಭ್ರಮದ ದಿನವಾಗಿತ್ತು. ಈ ರಾಜಬೀದಿ ಉತ್ಸವದಂದು ಪೊಲೀಸ್ ಬಿಗಿ ಭದ್ರತೆ ಮಾಡುವುದೂ ಒಂದು ಸವಾಲಿನ ಪ್ರಶ್ನೆಯಾಗಿರುತ್ತಿತ್ತು. ಮೆರವಣಿಗೆ ವೇಳೆ ಗಲಾಟೆ ಆ ಬಳಿಕ ಅದು ಕೋಮು ಸಂಘರ್ಷ ಬಣ್ಣಕ್ಕೆ ತಿರುಗಿದ ಇತಿಹಾಸವೇ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಯುತಿತ್ತು. ಕೊರೊನ ಕಾರಣಕ್ಕೆ ಈ ವರ್ಷವೂ ರಾಜಬೀದಿ ಉತ್ಸವ ರದ್ದು ಮಾಡಲು ಮಂಡಳಿ ನಿರ್ಣಯಿಸಿದೆ.

ಸಭೆಯಲ್ಲಿ ಹಿಂದೂ ಮಹಾಸಭಾ ಮಂಡಳಿ ಅಧ್ಯಕ್ಷರಾದ ಎಂ ಕೆ ಸುರೇಶ್ ಕುಮಾರ್, ಸತ್ಯನಾರಾಯಣ, ಗೋಪಾಲಸ್ವಾಮಿ, ನಿರಂಜನ್, ದತ್ತಾತ್ರೇಯ ರಾವ್ ಹಾಗೂ ಮಂಡಳಿಯವರು ಉಪಸ್ಥಿತರಿದ್ದರು.

Ad Widget

Related posts

ಜೋಕಾಲಿ ದುರಂತಕ್ಕೆ ಮತ್ತೊಬ್ಬ ಬಾಲಕಿ ಬಲಿ

Malenadu Mirror Desk

ಆನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

Malenadu Mirror Desk

ಸರಕಾರದ ಜನವಿರೋಧಿ ನಡೆ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ, ಡಿ.ಕೆ ಶಿವಕುಮಾರ್ ಭಾಗಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.