ಶಿವಮೊಗ್ಗ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಜನಾಶಿರ್ವಾದ ಯಾತ್ರೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಂಗಳವಾರ ನಗರದ ವಿವಿಧೆಡೆ ಭೇಟಿ ನೀಡಿದರು
ಕೋಟೆ ಸೀತಾರಾಮಾಂಜನೇಯ ದೇವಾಲಯ
ಮೊದಲಿಗೆ ಕೋಟೆ ಶ್ರೀ ಸೀತಾರಾಂಜನೇಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆವಣದಲ್ಲಿ ಗೋ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಸಂಜೀವ ಮಠಂದೂರು, ಎಸ್.ಎಸ್. ಜ್ಯೋತಿ ಪ್ರಕಾಶ್, ದೀನ ದಯಾಳ್, ಚೆನ್ನಬಸಪ್ಪ ಮೊದಲಾದವರಿದ್ದರು.
ಕೊರೋನಾ ವಾರಿಯರ್ಸ್ ಭೇಟಿ:
ಬಳಿಕ ಅಶೋಕ ರಸ್ತೆಯಲ್ಲಿರುವ ಕೋವಿಡ್ ವಾರಿಯರ್ಸ್ ನಾಗೇಶ್ ಮನೆಗೆ ಭೇಟಿ ನೀಡಿ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವ ಲೆಕ್ಕಿಸದೇ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಿದ್ದ ೬ ಜನ ವಾರಿಯರ್ಸ್ ಗಳನ್ನು ಸನ್ಮಾನಿಸಿ ಅವರಿಂದ ಮಾಹಿತಿ ಪಡೆದರು.
ಬೆಕ್ಕಿನ ಕಲ್ಮಠಕ್ಕೆ ಭೇಟಿ:
ನಂತರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬೆಕ್ಕಿನ ಕಲ್ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಸ್ವಾಮೀಜಿಗಳೊಂದಿಗೆ ದೇಶದ ಪ್ರಸಕ್ತ ವಿದ್ಯಮಾನಗಳ ಸಮಾಲೋಚನೆ ನಡೆಸಿ ಶ್ರೀಗಳಿಂದ ಸಲಹೆ ಪಡೆದರು. ಈ ಸಂದರ್ಭದಲ್ಲಿ ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಶ್ರೀಗಳು, ಬಸವಕೇಂದ್ರ ಬಸವ ಮರುಳಸಿದ್ಧ ಸ್ವಾಮೀಜಿ, ಜಡೇ ಮಠದ ಶ್ರೀಗಳು ಸೇರಿ ೧೪ ವಿವಿಧ ಮಠಾಧೀಶರು ಇದ್ದರು. ಅವರೆಲ್ಲರಿಗೂ ರಾಜೀವ್ ಚಂದ್ರಶೇಖರ್ ಸನ್ಮಾನಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಜನಾಶೀರ್ವಾದ ಯಾತ್ರೆಯ ಸಂಚಾಲಕ, ಶಾಸಕ ಸಂಜೀವ ಮಠಂದೂರು ಮತ್ತು ಕೇಶವ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಸ್. ರುದ್ರೇಗೌಡ ಸೇರಿದಂತೆ ಹಲವರಿದ್ದರು.
ರಸಗೊಬ್ಬರ ಅಂಗಡಿಯಲ್ಲಿ ರೈತರಿಂದ ಮಾಹಿತಿ:
ನಂತರ ರಾಜೀವ್ ಚಂದ್ವರಶೇಖರ್ ಅವರು ಶಂಕರ ಮಠ ರಸ್ತೆಯಲ್ಲಿರುವ ಶ್ರೀಕಾಂತ್ ಅವರ ರಸಗೊಬ್ಬರ ಅಂಗಡಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ರಸಗೊಬ್ಬರ ಸಬ್ಸಿಡಿಯ ಬಗ್ಗೆ ಮಾಹಿತಿ ನೀಡಿ ರೈತರಿಂದ ಮಾಹಿತಿ ಪಡೆದು ಸರ್ಕಾರದ ಯೋಜನೆಯ ಲಾಭ ಪಡೆಯುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ರಸಗೊಬ್ಬರದ ಅಂಗಡಿಗಳ ಸಮಸ್ಯೆಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರದ ರಸಗೊಬ್ಬರ ಸಬ್ಸಿಡಿಗಳ ಬಗ್ಗೆ ಮತ್ತು ರೈತರ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.
ಶಂಕರ ಮಠಕ್ಕೆ ಭೇಟಿ:
ರಸಗೊಬ್ಬರ ಅಂಗಡಿಯಿಂದ ಸಚಿವ ರಾಜೀವ್ ಚಂದ್ರಶೇಖರ್ ಶಂಕರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಪ್ರ ಸಮಾಜದ ಪ್ರಮುಖರಾದ ಡಾ. ನಾರಾಯಣ್, ಎಸ್. ದತ್ತಾತ್ರಿ, ಕೇಶವಮೂರ್ತಿ ಇದ್ದರು.
ಶಿವಪ್ಪನಾಯಕ, ಅಂಬೇಡ್ಕರ್, ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ;
ಶಂಕರಮಠದಿಂದ ಸಚಿವರು ಶಿವಪ್ಪ ನಾಯಕ ವೃತ್ತಕ್ಕೆ ಭೇಟಿ ನೀಡಿ ಶಿವಪ್ಪನಾಯಕ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಗಾಂಧಿ ಪಾರ್ಕ್ ಮುಂಭಾಗದ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಣ್ಯರೊಂದಿಗೆ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರು ಇದ್ದರು.
ಫಲಾನುಭವಿಗಳ ಭೇಟಿ:
ನಂತರ ರಾಜೀವ್ ಚಂದ್ರಶೇಖರ್ ಗಾಡಿಕೊಪ್ಪದ ಮನೆಯೊಂದಕ್ಕೆ ತೆರಳಿ ಕೇಂದ್ರ ಸರ್ಕಾರದ ಮಹತ್ವ ಯೋಜನೆಯಾದ ಫಸಲ್ ಭಿಮಾ, ಕಿಸಾನ್ ಸಮ್ಮಾನ್ ಹಾಗೂ ಉಜ್ವಲ ಯೋಜನೆ ಫಲಾನುಭವಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಗಣ್ಯರೊಂದಿಗೆ ಸಂವಾದ
ರಾಜೀವ್ ಚಂದ್ರಶೇಖರ್ ಹರ್ಷ ದಿ ಫರ್ನ್ ಹೋಟೆಲ್ ಗೆ ಭೇಟಿ ನೀಡಿ ಗಣ್ಯರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಅವರಿಂದ ಸಲಹೆ ಪಡೆದರು. ಈ ಸಂದರ್ಭದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್. ರುದ್ರೇಗೌಡ, ಕುಮಾರ್ ಬಂಗಾರಪ್ಪ, ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಭಾರತಿಶೆಟ್ಟಿ ಮೊದಲಾದವರಿದ್ದರು.
ಜನಾಶೀರ್ವಾದ ಯಾತ್ರೆ ಸಭಾ ಕಾರ್ಯಕ್ರಮ;
ಸಚಿವರು ಶುಭ ಮಂಗಳ ಸಮುದಾಯ ಭವನದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ನಂತರ ಬಿಜೆಪಿ ಹಿರಿಯ ಕಾರ್ಯಕರ್ತರ ಮನೆಗೆ ಭೇಟಿ ನೀಡಿದರು.
ಜನಶಿಕ್ಷಣ ಸಂಸ್ಥೆಗೆ ಭೇಟಿ
ಬಳಿಕ ರಾಜೀವ್ ಚಂದ್ರಶೇಖರ್ ಅವರು ಜನಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಯಶಸ್ವಿ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಕೌಶಲ್ಯ ತರಬೇತಿ ಉದ್ಘಾಟನೆ ನೆರವೇರಿಸಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಎಸ್.ವೈ. ಅರುಣಾದೇವಿ ಮೊದಲಾದವರಿದ್ದರು.