Malenadu Mitra
ರಾಜ್ಯ ಶಿವಮೊಗ್ಗ

ಆಧುನಿಕ ಭಾರತ ನಿರ್ಮಾಣದಲ್ಲಿ ರಾಜೀವ್ ಗಾಂಧಿ ಅವರ ಕೊಡುಗೆ ಮಹತ್ತರವಾಗಿದೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ೭೭ ನೇ ಜನ್ಮ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ “ರನ್ ಫಾರ್ ರಾಜೀವ್” ೫ ಕೆ ರನ್ ಮ್ಯಾರಥಾನ್ ಓಟವನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆಧುನಿಕ ಭಾರತ ನಿರ್ಮಾಣ ಆಗುವಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕೊಡುಗೆ ಮಹತ್ತರವಾಗಿದೆ. ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಯೋಜನೆಗಳು ದೂರದೃಷ್ಠಿಯಿಂದ ಕೂಡಿದ್ದವು ಎಂದು ಹೇಳಿದರು.
ದೇಶದಲ್ಲಿ ಐಟಿ ಉದ್ಯಮ, ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡುವ ಜತೆಯಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದರು. ರೈತರು, ಬಡವರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರಿಗೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದರು ಎಂದು ತಿಳಿಸಿದರು.


ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸುವಲ್ಲಿ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ಅವಧಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಕಾರಣವಾಗಿವೆ. ೧೮ ವರ್ಷ ಮೇಲ್ಪಟ್ಟ ಯುವ ಸಮೂಹಕ್ಕೆ ಮತದಾನದ ಹಕ್ಕು ಸಿಗುವಂತೆ ಮಾಡಿದರು. ವಿಶೇಷವಾಗಿ ಯುವಜನತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದರು. ಅವರು ನೀಡಿದ ಕೊಡುಗೆಗಳು ಇಂದಿಗೂ ಮಾದರಿ ಎಂದರು.
ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ಬಗ್ಗೆ ಯುವ ಸಮೂಹ ಅರಿತುಕೊಳ್ಳಲು ಮುಂದಾಗಬೇಕು. ಭಾರತದ ಐಟಿ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಕಾರಕ ಬದಲಾವಣೆಗಳಿಂದ ದೇಶವು ವಿಶ್ವಮಟ್ಟದಲ್ಲಿ ಬಲಿಷ್ಠಗೊಳ್ಳತೊಡಗಿತು ಎಂದು ಹೇಳಿದರು.

ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ರಾಜೀವ್ ಗಾಂಧಿ ಜನ್ಮ ದಿನದ ಪ್ರಯುಕ್ತ ರನ್ ಫಾರ್ ರಾಜೀವ್ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಅಭಿನಂದನೀಯ ಕಾರ್ಯ. ಇದರಿಂದ ಯುವ ಜನರಲ್ಲಿ ರಾಜೀವ್ ಗಾಂಧಿ ಅವರ ಆದರ್ಶ ಹಾಗೂ ಆಲೋಚನೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಶಿವಮೊಗ್ಗ ಯುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು.


ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ಭದ್ರಾವತಿಯ ಯುವ ಮುಖಂಡ ಗಣೇಶ್, ಹೆಚ್.ಸಿ.ಯೋಗೇಶ್, ರಮೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತು, ಕಾಶಿ ವಿಶ್ವನಾಥ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಚೇತನ್, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ಮಹಮದ್ ನಿಹಾಲ್, ಎನ್‌ಎಸ್ಯುಐ ಜಿಲ್ಲಾಧ್ಯಕ್ಷ ಬಾಲಾಜಿ, ವಿಜಯ್ಕುಮಾರ್, ಶ್ರೀನಿವಾಸ್ ಕರಿಯಣ್ಣ, ವಿಶ್ವನಾಥ್ ಕಾಶಿ, ರವಿಕುಮಾರ್, ಹನುಮಂತು, ವಿಜಯ್, ವಿನಯ್, ಮಂಜುನಾಥ್ ಮತ್ತಿತರರು ಇದ್ದರು.

ರನ್ ಫಾರ್ ರಾಜೀವ್

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ೭೭ನೇ ಜನ್ಮ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಿದ್ದ ‘ರನ್ ಫಾರ್ ರಾಜೀವ್’ ೫ಕೆ ರನ್ ಮ್ಯಾರಥಾನ್ ಬೆಂಗಳೂರಿನ ಪ್ರಥಮ ಸ್ಥಾನ ಗಳಿಸಿ ೨೫ ಸಾವಿರ ರೂ. ಬಹುಮಾನ ಪಡೆದರು. ಹುಬ್ಬಳ್ಳಿಯ ಸುನೀಲ್ ಎಂ.ಡಿ. ದ್ವೀತಿಯ ಸ್ಥಾನ ಪಡೆದು ೧೫ ಸಾವಿರ ರೂ. ಹಾಗೂ ಹುಬ್ಬಳ್ಳಿಯ ನಾಗರಾಜ್ ತೃತೀಯ ಸ್ಥಾನ ಪಡೆದು ೧೦ ಸಾವಿರ ರೂ. ಬಹುಮಾನ ಪಡೆದರು.

Ad Widget

Related posts

ಪಶು ಆಹಾರ ಮತ್ತು ಮೇವಿನ ಅಚ್ಚು ತಯಾರಿಕಾ ಘಟಕ ಉದ್ಘಾಟನೆ

Malenadu Mirror Desk

ಅರಣ್ಯ ಇಲಾಖೆ ದೌರ್ಜನ್ಯ ನಿಲ್ಲಬೇಕು: ಕಾಗೋಡು ತಿಮ್ಮಪ್ಪ
ಬಿಳಿಗಾರಿನಿಂದ ಕಾರ್ಗಲ್‌ವರೆಗೆ ಬೃಹತ್ ಪಾದಯಾತ್ರೆ

Malenadu Mirror Desk

ಗೋವಿಂದಪುರದಲ್ಲಿ 3ಸಾವಿರ ಆಶ್ರಯ ಮನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.