Malenadu Mitra
ರಾಜ್ಯ ಶಿವಮೊಗ್ಗ

ಸಂಘಟನೆಗೆ ಆದ್ಯತೆ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಊರಗಡೂರಿನ ಗುಡ್ಡೇಮರಡಿಯ ಮಲ್ಲೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಹಾಗೂ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪತ್ನಿ ಜಯಲಕ್ಷ್ಮೀಯವರೊಂದಿಗೆ ಸಭೆಗೆ ಅಗಮಿಸಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮಹಿಳಾ ಮೋರ್ಛಾವನ್ನು  ಮತ್ತಷ್ಟು ಬಲಗೊಳಿಸಲಾಗುವುದು. ಸಂಘಟನೆಗೆ ಆದ್ಯತೆ ನೀಡಲಾಗುವುದು. ಮಹಿಳಾ ಕಾರ್ಯಕರ್ತೆಯರು ಮತ್ತಷ್ಟು ಕ್ರಿಯಾಶೀಲಾರಾಗುವಂತೆ ಕರೆ ನೀಡಿದರು.
ಚೆನ್ನಬಸಪ್ಪರವರು ಪಕ್ಷದ ಇತಿಹಾಸ, ನಡೆದು ಬಂದ ದಾರಿ, ಕಾರ್ಯಕರ್ತರ ಜವಾಬ್ದಾರಿ ಬಗ್ಗೆ ಭೌದ್ಧಿಕ್ ನಡೆಸಿಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮೋರ್ಛಾ ನಗರಾಧ್ಯಕ್ಷೆ ಸುರೇಖಾ ಮುರಳೀಧರ್ ವಹಿಸಿದ್ದರು. ನಗರಾಧ್ಯಕ್ಷ ಜಗದೀಶ್, ನಿಕಟಪೂರ್ವ ನಗರಾಧ್ಯಕ್ಷ ನಾಗರಾಜ್, ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ವಿದ್ಯಾ ಲಕ್ಷ್ಮೀಪತಿ, ರಾಧಾ ರಾಮಚಂದ್ರ, ರಶ್ಮಿ ಶ್ರೀನಿವಾಸ್, ಆರತಿ ಪ್ರಕಾಶ್, ಮಹಿಳಾ ಮೋರ್ಛಾ ಪದಾಧಿಕಾರಿಗಳು, ಸದಸ್ಯರು, ವಿವಿಧ ವಾರ್ಡ್ನ ಮಹಿಳಾ ಮೋರ್ಛಾ ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Ad Widget

Related posts

ಕಾರ್‍ಯಕರ್ತರ ಶ್ರಮಕ್ಕೆ ಬೆಲೆ

Malenadu Mirror Desk

ಮೈತ್ರಿ ಅಭ್ಯ ರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸೋಣ : ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕರೆ

Malenadu Mirror Desk

ಬೆಳಗಲು ಗ್ರಾಮದ ಕತ್ತಲ ಬದುಕು,ಸರಕಾರಿ ಸೌಲಭ್ಯಗಳೇ ಕಾಣದ ಕುಗ್ರಾಮ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.