ಕಾಂಗ್ರೆಸ್ ವರಿಷ್ಠರ ಬಗ್ಗೆ ಮತ್ತು ಬುದ್ದಿಜೀವಿಗಳ ಬಗ್ಗೆ ಅಸಂಬದ್ದವಾಗಿ, ಅವಹೇಳನಕಾರಿಯಾಗಿ ಮಾತನಾಡಿರುವ ಅವಿವೇಕಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಿವಮೊಗ್ಗ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಪ್ಪನಾಯಕ ಪ್ರತಿಮೆ ಬಳಿ ಯತ್ನಾಳ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ತಾಲಿಬಾನ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ತಮ್ಮ ಬಾಯಿ ಚಪಲಕ್ಕಾಗಿ ಹೊಲಸು ಮಾತುಗಳನ್ನಾಡಿದ್ದಾರೆ. ಆತನ ನಾಲಿಗೆಯೇ ಅವನ ಗುಣವನ್ನು ತಿಳಿಸುತ್ತದೆ. ಈಗಾಗಲೇ ರಾಜಕಾರಣದಿಂದ ಮಾನಸಿಕ ಹಿಡಿತ ಕಳೆದುಕೊಂಡಿರುವ ಯತ್ನಾಳ್ ಒಬ್ಬ ಹುಚ್ಚನಂತೆ ಮಾತನಾಡುತ್ತಿದ್ದಾನೆ. ಬುದ್ದಿ ಜೀವಿಗಳ ವಿರುದ್ಧವು ಮಾತನಾಡಿದ್ದಾನೆ. ಈತನ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಬಿಜೆಪಿಯಲ್ಲಿ ಕಸಕ್ಕಿಂತ ಕಡೆಯಾಗಿರುವ ಯತ್ನಾಳ್ ಮೋದಿಯನ್ನು ಮೆಚ್ಚಿಸಲು ಹುಚ್ಚುಚ್ಚಾಗಿ ಮಾತನಾಡುವುದನ್ನು ಕಲಿತಿದ್ದಾರೆ. ಪಕ್ಷದಲ್ಲಿಯೇ ಈತನಿಗೆ ಬೆಲೆ ಇಲ್ಲ. ನಿಜಕ್ಕೂ ಈತನಿಗೆ ಬುದ್ಧಿ ಭ್ರಮಣೆಯಾಗಿದೆ. ಬಿಜೆಪಿ ಪಕ್ಷದ ವಿಚಾರವಾಗಿ ಆತ ಏನಾದರೂ ಮಾತನಾಡಲಿ. ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದರು.
ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನ ಪಾದದ ಧೂಳಿಗೂ ಸಮನಲ್ಲದ ಈ ಯತ್ನಾಳ್ ಕನ್ನಡನಾಡಿನಲ್ಲಿ ಇರುವುದೇ ಒಂದು ಅಸಂಬದ್ದವಾಗಿದೆ. ಆತನಿಗೆ ಭಾಷೆಯೂ ಗೊತ್ತಿಲ್ಲ. ಭಾವವೂ ಗೊತ್ತಿಲ್ಲ. ಮನುಷ್ಯತ್ವವು ಮೊದಲಿಲ್ಲ. ಆತನ ಮಾತಿನಲ್ಲಿ ಕೊಲೆಗಾರ ಆಡಬಹುದಾದ ಮಾತುಗಳಿವೆ. ಇತನನ್ನು ಕರ್ನಾಟಕದಿಂದಲೇ ಓಡಿಸಬೇಕಾಗಿದೆ. ಈತ ಮೊದಲು ತನ್ನ ಮಾತನ್ನು ತಿದ್ದುಕೊಳ್ಳಬೇಕು. ಕನ್ನಡಿಗರ ಕ್ಷಮೇ ಕೇಳಬೇಕು ಮತ್ತು ಧರ್ಮಗಳ ನಡುವೆ ಮಾತನಾಡಿ, ಶಾಂತಿ ಕದಡಿದ ಆರೋಪದ ಮೇರೆಗೆ ಪೊಲೀಸರು ಸ್ವಯಂ ಕೇಸು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ರಮೇಶ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್.ಕುಮರೇಶ್ , ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕುಮಾರ್ ಸಿರಿಗೆರೆ , ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲೀಮ್ ಅಹಮ್ಮದ್ ಸಿರಿಗೆರೆ, ಪದಾಧಿಕಾರಿಗಳಾದ ಅರುಣ್ ನವುಲೆ , ವೆಂಕಟೇಶ್ ಕಲ್ಲೂರು , ಪವನ್ , ಮಸ್ತಾನ್ ,ಸುಹಾಸ್ ಗೌಡ , ಶ್ರೀನಿವಾಸ್ , ರಾಹುಲ್ ಸಿಗೇಹಟ್ಟಿ, ಪ್ರಶಾಂತ್ , ದೇವರಾಜ್ , ನಾಗರಾಜ್ , ವೆಂಕಟೇಶ್, ಅಭಿ, ಚೇತನ್ , ನಂದಕುಮಾರ್ , ರಾಖಿ ಇತರರು ಇದ್ದರು