ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದರು. ಪಕ್ಷದ ಕಾರ್ಯಕರ್ತರು ಮುಖಂಡರುಗಳನ್ನು ಭೇಟಿ ಮಾಡಿದ್ದ ಅವರು, ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದರು. ತಾಲೂಕಿನಲ್ಲಿ ನಡೆಯುತ್ತಿರುವ ಯೋಜನೆ ಅವುಗಳ ಸ್ಥಿತಿಗತಿ ಮತ್ತು ಅಗತ್ಯವಿರುವ ಅನುದಾನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಂಸದ ಬಿ.ವೈ ರಾಘವೇಂದ್ರ ಅವರು ಜತೆಗಿದ್ದು, ಎಲ್ಲಾ ಮಾಹಿತಿ ಒದಗಿಸಿದರು.
ಪ್ರಧಾನಮಂತ್ರಿ ಅವರ ಮನ್‌ಕಿಬಾತ್ ಕಾರ್ಯಕ್ರಮವನ್ನು ಪುತ್ರ ರಾಘವೇಂದ್ರ ಅವರೊಡಗೂಡಿ ಯಡಿಯೂರಪ್ಪ ವೀಕ್ಷಿಸಿದರು.
ಶಾಸಕ ಹರತಾಳು ಹಾಲಪ್ಪ ಭೇಟಿ:
ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು, ಶಿವಮೊಗ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿರುವ ಹಾಲಪ್ಪ ಅವರು, ಬಿಜೆಪಿ ಸೇರಿದ ಮೇಲೆ ಯಡಿಯೂರಪ್ಪ ಅವರಿಗೆ ಅತ್ಯಂತ ಆಪ್ತರಾಗಿದ್ದಾರೆ. ಭಾನುವಾರ ಬೆಳಗ್ಗೆ ಶಿಕಾರಿಪುರಕ್ಕೆ ಬಂದಿದ್ದ ಅವರು, ಯಡಿಯೂರಪ್ಪ ಅವರೊಂದಿಗೆ ಕುಶಲೋಪರ ಮಾತನಾಡಿದರು. ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಹಾಲಪ್ಪರಿಗೆ ಸಚಿವರಾಗುವ ಅವಕಾಶ ಸಿಗಲಿದೆ ಎಂದೇ ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರು ಹಾಲಪ್ಪರನ್ನು ಕೈಬಿಡುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಹಾಲಪ್ಪರಿಗೆ ಅನ್ಯಾಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
previous post