ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಶಿವಮೊಗ್ಗದ ಖ್ಯಾತ ಖೋ ಖೋ ಆಟಗಾರ ನವೀನ್ (29) ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ನಗರದ ದ್ರೌಪದಮ್ಮ ವೃತ್ತದ ಬಳಿ ತಡರಾತ್ರಿ ಅಪಘಾತ ಘಟನೆ ನಡೆದಿದ್ದು.ಸಿಸಿ ಟಿವಿಯಲ್ಲಿ ಅಪಘಾತದ ಭಯಾನಕ ದೃಶ್ಯ ಸೇರೆಯಾಗಿದೆ.
ಶಿವಮೊಗ್ಗದ ಆಶೋಕ ನಗರದ ನಿವಾಸಿಯಾಗಿದ್ದ ನವೀನ್.೧೦ ಕ್ಕೂ ಹೆಚ್ಚು ಬಾರಿ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಇನ್ನೋರ್ವ ಬೈಕ್ ಸವಾರ ನವೀನ್ ( ೩೨)ಗೂ ಸಹ ಗಂಭೀರ ಗಾಯವಾಗಿದ್ದು ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಂತಾಪ
ನವೀನ್ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಭಗವಂತ ಕರುಣಿಸಲಿ ಎಂದು ಮಾಜಿ ಶಾಸಕರಾದ ಕೆ .ಬಿ. ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಹೆಚ್ .ಎಸ್ .ಸುಂದರೇಶ್ ಗೋಪಾಲಗೌಡ ಬಡಾವಣೆ ನಾಗರೀಕ ಹಿತರಕ್ಷಣಾ ವೇದಿಕೆಯ ಜಿ.ಡಿ .ಮಂಜುನಾಥ್, R.ರಾಜಶೇಖರ್, ಟಿ. ಮಂಜಪ್ಪ ,ಮೃತ್ಯುಂಜಯ ಯುವಕ ಸಂಘದ ಗಿತೇಂದ್ರಗೌಡ ,ಶಿವಕುಮಾರ್ ‘ವಿಕ್ರಂ ಶೆಟ್ಟಿ ,ಸಂತೋಷ್ .ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.