Malenadu Mitra
ರಾಜ್ಯ ಸೊರಬ

ಈಡಿಗ ಸಮಾಜದ ಸಂಘಟನೆ ಅಗತ್ಯ: ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್

ಈಡಿಗ ಸಮಾಜವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮೇಲೆತ್ತುವ ದೃಷ್ಟಿಯಿಂದ ಈಡಿಗ ಜಾತಿ ಅಡಿಯಲ್ಲಿ ಬರುವ ೨೬ ಉಪ ಪಂಗಡಗಳನ್ನು ಸೇರಿಸಿಕೊಂಡು ಸಂಘಟನೆ ಮಾಡಲು ಸಿದ್ಧರಾಗಿದ್ದೇವೆ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಹೇಳಿದರು.
ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಸೊರಬ ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಈಡಿಗ(ದೀವರ) ಸಮಾಜ ಮುಖಂಡರ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು ೫೦ ಲಕ್ಷ ಜನಸಂಖ್ಯೆ ಹೊಂದಿದ ಈಡಿಗ ಸಮಾಜದ ಅಭಿವೃದ್ಧಿಗೆ ನಿಗಮ ಮಂಡಳಿ ಮಾಡಲು ಸರಕಾರ ಮೀನಾಮೇಷ ಮಾಡುತ್ತಿದೆ. ಹಲವು ಪ್ರಮುಖ ಜಾತಿಗಳ ನಾಯಕತ್ವವನ್ನು ವಹಿಸಿಕೊಂಡು ಸಂಘಟನೆ ಮಾಡುವವರಿಗೆ ಜಾತಿ ಲೇಪ ಹಚ್ಚದವರು ಈಡಿಗ ಜಾತಿ ಸಂಘಟನೆ ನಾಯಕತ್ವ ವಹಿಸಿಕೊಂಡವರಿಗೆ ಜಾತಿ ಲೇಪ ಹಚ್ಚುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವೈಯಕ್ತಿ ಭಿನ್ನಾಭಿಪ್ರಾಯಗಳನ್ನು ಬಿದಿಗೊತ್ತಿ ಸಾಮಾಜಿಕ ನಾಯಕತ್ವ ಪಡೆಯುವ ಅಗತ್ಯವಿದೆ. ಒಂದೇ ಸೂರಿನಲ್ಲಿ ಸಂಘಟಕರಾಗದಿದ್ದರೆ ಸಮಾಜದ ಬೆಳವಣಿಗೆ ಕನ್ನಡಿಗೊಳಗಿನ ಗಂಟಾಗುತ್ತದೆ. ಸಮಾಜದ ನಾಯಕತ್ವದ ಉಳಿವು, ಅಳಿವಿನ ಪ್ರಶ್ನೆ ಎದುರಾದಾಗ ಪಕ್ಷ ಭೇದ ಮರೆತು ಹೇಳಿಕೆ ನೀಡುವವರಿರುವಾಗ ಕೀಳರಿಮೆ ತೊರೆದು ಗ್ರಾಮ ಮಟ್ಟದಿಂದ ಸಮಾಜ ಸಂಘಟನೆಗೆ ಒತ್ತು ನೀಡುವ ಅಗತ್ಯವಿದೆ. ಈ ಕೆಲಸಕ್ಕೆ ಸಮಾಜ ಬಾಂಧವರು ಕೈಜೋಡಿಸುವ ಅಗತ್ಯವಿದೆ ಎಂದರು.

ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಮುಡುಬಾ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಸುಂಟರಹಳ್ಳಿ ರಾಘವೇಂದ್ರ, ಗಣೇಶ್ ಬಾಡದಬೈಲು, ಸಂತೋಷ್, ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ತಾಲೂಕು ಅಧ್ಯಕ್ಷ ಶಿವಕುಮಾರ್ ಬೀಳವಗೋಡು, ಜಿಲ್ಲಾ ಸಲಹೆಗಾರ ನಾಗರಾಜ್ ಹಳೇಸೊರಬ, ಸೊರಬ ತಾಲೂಕು ಆರ್ಯ ಈಡಿಗ(ದೀವರ) ಸಂಘದ ಅಧ್ಯಕ್ಷ ಕೆ.ಅಜ್ಜಪ್ಪ, ಮಾಜಿ ಅಧ್ಯಕ್ಷ ಹನುಮಂತಪ್ಪ ಯಲಸಿ, ಮಹಾದೇವಪ್ಪ, ಸಣ್ಣಬೈಲು ಪರಶುರಾಮ್ಪ, ಬಂಗಾರಪ್ಪ ಸೇರಿದಂತೆ ಸೊರಬ, ಸಾಗರ, ತೀರ್ಥಹಳ್ಳಿ, ಹೊಸನಗರದ ಪ್ರಮುಖರಿದ್ದರು.

Ad Widget

Related posts

ಅಪಘಾತದ ಗಾಯಾಳುಗೆ ಆಪದ್ಭಾಂದವ ಬೇಳೂರು

Malenadu Mirror Desk

ಜನಾಶೀರ್ವಾದ ಯಾತ್ರೆ: ಕೋವಿಡ್ ಮಾರ್ಗಸೂಚಿ ಉಲ್ಲಂಘನೆ

Malenadu Mirror Desk

ಕುವೆಂಪು ವಿವಿವಿದ್ಯಾರ್ಥಿಗಳ ನೆರವಿಗೆ ಡಿಸಿಎಂ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.