Malenadu Mitra
ರಾಜ್ಯ ಶಿವಮೊಗ್ಗ

ಕೊರೊನ ಆರ್ಥಿಕ ಸಂಕಷ್ಟ:ತಾಯಿ ಮಗಳು ಸಾವು

ಕೊರೋನ ಸಂಕಷ್ಟದಿAದ ಕುಟುಂಬಕ್ಕಾದ ಆರ್ಥಿಕ ಹೊರೆಯ ಕಾರಣಕ್ಕೆ ತಾಯಿ ಮತ್ತು ಮಗಳು ಬಲಿಯಾಗಿದ್ದಾರೆ. ಭದ್ರಾವತಿಯಲ್ಲಿ ಕೊರೊನ ಕಾರಣಕ್ಕೆ ವ್ಯಾಪಾರ ಮಾಡುತ್ತಿದ್ದ ಧನಶೇಖರ್‌ಗೆ ತೀವ್ರ ನಷ್ಟವಾಗಿತ್ತು. ಪತಿಯ ಈ ಸ್ಥಿತಿ ನೋಡಿದ ಪತ್ನಿ ಸಂಗೀತಾ(೩೫) ಮಗಳ ಮಧುಶ್ರೀಗೆ ನೇಣಿನ ಕುಣಿಕೆ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಂದೇ ಸೀರೆಗೆ ಮೊದಲು ಮಗಳನ್ನ ನೇಣುಹಾಕಿ ಅದರ ಇನ್ನೊಂದು ತುದಿಗೆ ತಾಯಿ ಸಂಗೀತ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊರೋನ ಪೂರ್ವದಲ್ಲಿ ಹೋಲ್ ಸೇಲ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಧನಶೇಖರ್ ಸೋಮವಾರ ವ್ಯವಹಾರದ ಮೇಲೆ ಹೊರಗೆ ಹೋಗಿದ್ದಾರೆ, ಮನೆಯಿಂದ ಹೊರ ಹೋಗುವಾಗ ತಾಯಿ ಮಗಳು ಬೈ ಹೇಳಿ ಕಳುಹಿಸಿದ್ದಾರೆ. ಈ ವಿದಾಯವೇ ಧನಶೇಖರ್ ಗೆ ಕೊನೆಯಾಗಿದೆ.

Ad Widget

Related posts

ಡಿಜಿಟಲ್ ಮೀಡಿಯಾದಿಂದ ಯುವಕರಿಗೆ ಉತ್ತಮ ಭವಿಷ್ಯ , ಮುಖ್ಯಮಂತ್ರಿ ಸಲಹೆಗಾರ ಪ್ರಶಾಂತ್ ಪ್ರಕಾಶ್ ಅಭಿಪ್ರಾಯ

Malenadu Mirror Desk

ಸಾವಿರ ದಾಟಿದ ಸೋಂಕು,10 ಸಾವು

Malenadu Mirror Desk

ಸೂಡೂರು ಗೇಟ್ ಬಳಿ ಅಪಘಾತ : ಯುವಕ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.