ರಾಷ್ಟ್ರೀಯ ಕೂಡೊ (ಸಮರಕಲೆ) ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಅತ್ಯುತ್ತಮ ಸಾಧನೆ ಮಾಡಿದ್ದು, ೧ ಚಿನ್ನ, ೧೦ ಬೆಳ್ಳಿ ಹಾಗೂ ೧೮ ಕಂಚಿನ ಪದಕವನ್ನು ರಾಜ್ಯದ ಕ್ರೀಡಾಳುಗಳು ಪಡೆದು ಕೀರ್ತಿ ತಂದಿದ್ದಾರೆ.
ಹಿಮಾಚಲ ಪ್ರದೇಶದ ಸೊಲನ್ ಜಿಲ್ಲೆಯ ಗ್ರೀನ್ ಹಿಲ್ಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ೧೧ ನೇ ರಾಷ್ಟ್ರೀಯ ಕೂಡೊ ಕ್ರಿಡಾಕೂಟ ನಡೆದಿತ್ತು. ಇದೇ ಸಂದರ್ಭ ನಡೆದ ಫೆಡರೇಷನ್ ಕಪ್ ಪಂದ್ಯದಲ್ಲಿಯೂ ೫ ಚಿನ್ನ, ೮ ಬೆಳ್ಳಿ ಹಾಗೂ ೧೩ ಕಂಚಿನ ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕರ್ನಾಟಕ ಕೂಡೊ ಸಂಸ್ಥೆಯ ಅಧ್ಯಕ್ಷರಾದ ರೆನ್ಷೀ ಶಬ್ಬೀರ್ ಅಹ್ಮದ್ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಯ ೫೭ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕೂಡೊ ಜಪಾನಿನ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಆಗಿದೆ ಅಂದರೆ ಜಪಾನಿನ ಒಂದು ಸಮರ ಕಲೆಯಗಿದೆ. ಈ ಕ್ರೀಡೆಯ ನಿಯಮಗಳು, ಶಿಸ್ತ ಹಾಗೂ ಭಾರತದಲ್ಲಿ ಈ ಕ್ರೀಡೆಯು ಅತಿ ವೇಗವಾಗಿ ಬೆಳವಣಿಗೆಯನ್ನು ಗಮನಿಸಿ ಭಾರತ ಸರ್ಕಾರವು ಈ ಕ್ರೀಡೆಗೆ ಮಾನ್ಯತೆ ನೀಡಿದೆ.
ಆದಿತ್ಯಗೆ ಚಿನ್ನದ ಪದಕ
ಶಿವಮೊಗ್ಗ ಸ್ವಾಮಿವಿವೇಕಾನಂದ ಬಡಾವಣೆಯ ಶಶಿಧರ್ ಮತ್ತು ರಾಜೀವಿ ದಂಪತಿ ಪುತ್ರ ಆದಿತ್ಯ ಎಸ್ ಕುಂದರ್ ರಾಷ್ಟಿçÃಯ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಕೀರ್ತಿ ತಂದಿರುತಾನೆ. ಈತ ಶಿವಮೊಗ್ಗ ನಗರದ ಅಪೂರ್ವ ಪಿ ಯು ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆದಿತ್ಯಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಿದೆ.