Malenadu Mitra
ರಾಜ್ಯ

ಶರಾವತಿ ಮುಳುಗಡೆ ಸಂತ್ರಸ್ಥರ ಭೂಹಕ್ಕಿಗಾಗಿ ಸೆ,20ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ

ಶರಾವತಿ ಮುಳುಗಡೆ ಸಂತ್ರಸ್ಥರ ಭೂಹಕ್ಕಿಗಾಗಿ ಪಕ್ಷಾತೀತವಾಗಿ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಸೋಮವಾರ ಆಯನೂರಿನಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಶರಾವತಿ ಮುಳುಗಡೆ ಸಂತ್ರಸ್ತರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷರಾದ ತೀ.ನಾ ಶ್ರೀನಿವಾಸ್,ನಾಡಿಗೆ ಬೆಳಕು ನೀಡಿದ ಬದುಕು ಇಂದಿಗೂ ಕತ್ತಲಲ್ಲಿದೆ.ಶರಾವತಿ ಮುಳುಗಡೆ ಸಂತ್ರಸ್ತರ ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಎಲ್ಲಾ ಕುಟುಂಬಗಳಿಗೂ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಹಿಂದಿನ  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿಯ ಹಕ್ಕು ನೀಡಲು ಡಿನೋಟಿಫಿಕೇಷನ್ ಮಾಡಲಾಗಿತ್ತು.ಆದರೆ ಕೆಲವರು ರಾಜ್ಯ ಉಚ್ಚನ್ಯಾಯಾಲಯದಲ್ಲಿ ರಿಟ್ ಹಾಕಿ ಡಿನೋಟಿಫಿಕೇಷನ್ ರದ್ದು ಮಾಡಿದೆ.ಡಿನೋಟಿಫಿಕೇಷನ್ ವಜಾ ಆಗಿದ್ದರೂ ಕೂಡ ಸಂತ್ರಸ್ಥರ ಪರವಾಗಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸದೆ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ನ್ಯಾಯಯುತವಾದ ಬೇಡಿಕೆ ಈಡೇರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದ ಅವರು ಸೆ.೨೦ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗಿದೆ.ಪಕ್ಷಾತೀತವಾಗಿ ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ವಕೀಲರಾದ ಧರ್ಮರಾಜ್. ಟೀಕಪ್ಪ ರಿಪ್ಪನ್ ಪೇಟೆ. ರಾಜಣ್ಣ ಶೆಟ್ಟಿಕೆರೆ. ಸುಧಾಕರ್ ಸೂಡೂರು,ಶಿವಣ್ಣ ಸೂಡೂರು, ದಿನೇಶ್ ಚೊಡನಾಳ್ ಸೇರಿದಂತೆ ಹಲವರಿದ್ದರು.

Ad Widget

Related posts

ಸಿಗಂದೂರು ದೇಗುಲ ಮುಜರಾಯಿಗೆ ಬೇಡ: ಈಡಿಗರ ಸಂಘದಿಂದ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ

Malenadu Mirror Desk

ಮದುವೆಯಾಗಿ ನಾಲ್ಕು ದಿನಕ್ಕೇ ಯುವತಿ ಕೊರೊನಕ್ಕೆ ಬಲಿ

Malenadu Mirror Desk

ಜೀವ ಕಾಯ್ವ ವೈದ್ಯರೇ ನಿಮಗೆ ನಮೋ..ನಮಃ…

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.