Malenadu Mitra
ರಾಜ್ಯ ಶಿವಮೊಗ್ಗ

ಪ್ರಧಾನಿ ಮೋದಿ ಒಬ್ಬ ಪುಣ್ಯಾತ್ಮ:ಬಿ.ವೈ. ವಿಜಯೇಂದ್ರ

 ಪ್ರಧಾನಿ ಮೋದಿ ಒಬ್ಬ ಪುಣ್ಯಾತ್ಮ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ್ಣಿಸಿದರು.
ಶುಕ್ರವಾರ  ಬಿಜೆಪಿ ಕಚೇರಿಯಲ್ಲಿ ಮೋದಿ ಅವರ 71 ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶೇಷ ಬಿಜೆಪಿ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು  ಮಾತನಾಡಿದರು.
ಮೋದಿ ಪ್ರಧಾನಿಯಾಗಿರುವುದು ಬಹುಜನರ ತಪ್ಪಸ್ಸೇ ಎಂದು ನಾನು ಭಾವಿಸಿದ್ದೇನೆ. ಅವರು ಪ್ರಧಾನಿಯಾದ ಮೇಲೆ ಬದಲಾವಣೆಗಳ ಮಹಾಪೂರವೇ ಆಗಿದೆ. ಅಭಿವೃದ್ಧಿ ಹೆಚ್ಚಾಗಿದೆ. ಬಹಳ ಮುಖ್ಯವಾಗಿ ಶ್ರೀರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ ಉಗ್ರರ ಭಯ ತಪ್ಪಿಸಿದ್ದು, ೩೭೦ ನೇ ವಿಧಿ ತೆಗೆದು ಹಾಕಿದ್ದು, ಮತ್ತು ಅಭಿವೃದ್ಧಿಗೆ ಒತ್ತು ಕೊಟ್ಟಿದ್ದು, ಕೊರೋನಾದಂತಹ ಸಂದರ್ಭದಲ್ಲಿ ಜಗತ್ತೇ ಅಚ್ಚರಿಪಡುವಷ್ಟು ಉಚಿತವಾಗಿ ಲಸಿಕೆ ನೀಡಿರುವುದು ಇವೆಲ್ಲವೂ ಅವರ ಆಡಳಿತದಲ್ಲಿ ಒಂದು ವಿಸ್ಮಯವನ್ನೇ ಮೂಡಿಸಿವೆ. ಹಾಗಾಗಿ ಮೋದಿ ಒಬ್ಬ ಸಂತ ಎಂದರು.
ಮೋದಿಯವರ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಕಾಂಗ್ರೆಸ್ ನವರು ವಿನಾಕಾರಣ ದೂಷಣೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರಂತೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯವರದು ನಾಟಕದ ಹಿಂದುತ್ವ ಎಂದು ಹೇಳಿದ್ದಾರೆ. ಈ ದೇಶದ ಜನರಿಗೆ ಯಾರು ನಾಟಕ ಮಾಡುತ್ತಾರೆ ಎಂದು ಗೊತ್ತಿದೆ. ಅಧಿಕಾರ ಕಳೆದುಕೊಂಡು ಹಪಹಪಿಸುತ್ತಿರುವ ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ. ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯುವುದನ್ನು ಅವರ ಕೈಲಿ ಸಹಿಸಲು ಆಗುತ್ತಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಇಂದು ಇಡೀ ದಿನ ಕಾರ್ಯಕ್ರಮ ಆಯೋಜಿಸಿದೆ. ಬೆಳಗ್ಗೆ ಗಣಪತಿ ದೇವಾಲಯದಲ್ಲಿ ಅವರ ಜನ್ಮದಿನಕ್ಕೆ ಶುಭಾಶಯ ಕೋರಿ ವಿಶೇಷ ಪೂಜೆ ನೆರವೇರಿಸುವುದರಿಂದ ಹಿಡಿದು ಸಂಜೆಯವರೆಗೆ ಸೇವಾ ಕಾರ್ಯಕ್ರಮಗಳು ಮುಂದುವರೆಯಲಿವೆ. ಹಾಗೆಯೇ ಮೋದಿ ಅವರ ಸಾಧನೆಗಳ ಬಗ್ಗೆ ತಿಳಿಸುವುದು ಮತ್ತು ಕಾರ್ಯಕರ್ತರಲ್ಲಿ ಸಂಘಟನೆ ಮನೋಭಾವ ಬೆಳೆಸುವುದು, ಅಭಿವೃದ್ಧಿಯ ಅನುಕರಣೆ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಇಡೀ ಜಿಲ್ಲಾದ್ಯಂತ ಕಾರ್ಯಕ್ರಮ ಮುಂದುವರೆಯಲಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಪ್ರಮುಖರಾದ ಆರ್.ಕೆ. ಸಿದ್ಧರಾಮಣ್ಣ, ಗಿರೀಶ್ ಪಟೇಲ್, ಜ್ಯೋತಿಪ್ರಕಾಶ್, ಎಸ್. ರುದ್ರೇಗೌಡ, ಪವಿತ್ರಾರಾಮಯ್ಯ, ದತ್ತಾತ್ರಿ, ಡಿ.ಎಸ್. ಅರುಣ್, ಸುನಿತಾ ಅಣ್ಣಪ್ಪ ಸೇರಿದಂತೆ ಹಲವರಿದ್ದರು.

Ad Widget

Related posts

ಶಿಕಾರಿಪುರ ಮತದಾರನ ನಿಲುವು ನಿಗೂಢ
ಕಾಂಗ್ರೆಸ್ ಮಂಕು, ಗೌಡರ ಗರ್ಜನೆಗೆ ಬೆದರೀತೆ ಬಿಜೆಪಿ

Malenadu Mirror Desk

ಶಿಕ್ಷಕರ ಸಾಹಿತ್ಯ ಪರಿಷತ್‌ನಿಂದ ಅರ್ಥಪೂರ್ಣ ಮಹಿಳಾದಿನಾಚರಣೆ, ಸಾಧಕಿಯರಿಗೆ ಗೌರವ ಸಮರ್ಪಣೆ

Malenadu Mirror Desk

ಹಗಲಲ್ಲೇ ಆನೆ ಹಿಂಡು ಸಂಚಾರ : ಮತ್ತೆ ಕಾಡಾನೆ ಹಾವಳಿ ಪ್ರಾರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.