ಶಿವಮೊಗ್ಗ ಟಿಪ್ಪುನಗರ ಕೆಕೆಸೆಡ್ ಬಳಿ ಚರಂಡಿಯಲ್ಲಿ ಶನಿವಾರ ರಾತ್ರಿ ಯುವಕನ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಶವವನ್ನು ಚರಂಡಿಯಲ್ಲಿ ಹಾಕಲಾಗಿದೆ ಎನ್ನಲಾಗಿದೆ.
ಇರ್ಫಾನ್ ಎಂಬ ಯುವಕನೇ ಹತ್ಯೆಗೀಡಾಗಿದ್ದು, ಕೊಲೆ ಆರೋಪಿಗಳೂ ಯಾರೆಂದು ತಕ್ಷಣಕ್ಕೆ ಮಾಹಿತಿ ಇಲ್ಲ. ದೊಡ್ಡ ಪೇಟೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಳೆಯ ದ್ವೇಷಕ್ಕೆ ಕೊಲೆ ನಡೆದಿರುವ ಶಂಕೆಯಿದ್ದು, ತನಿಖೆಯಿಂದ ಮಾಹಿತಿ ಹೊರಬರಬೇಕಿದೆ.