Malenadu Mitra
ರಾಜ್ಯಶಿವಮೊಗ್ಗ

ಪರೀಕ್ಷಾ ಶುಲ್ಕ ಹೆಚ್ಚಳ : ಕುಲಪತಿಗಳಿಗೆ ಮನವಿ

ಪರೀಕ್ಷಾ ಶುಲ್ಕ ಹೆಚ್ಚಳ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಶಂಕರಘಟ್ಟದಲ್ಲಿ ಕು.ವಿ.ವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳವಾಗಿರುತ್ತದೆ. ಕರೋನಾದ ಈ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯವಾಗಿರುತ್ತದೆ. ಇದಷ್ಟೇ ಅಲ್ಲದೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕ್ರಮವಾಗಿ ೨,೪ ಮತ್ತು ೨ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕರೋನಾದ ಸಂದರ್ಭದಲ್ಲಿ ಪ್ರಮೋಟ್ ಆಗಿರುತ್ತಾರೆ. ಆದ್ದರಿಂದ ಈ ಸೆಮಿಸ್ಟರ್ ನ ಪರೀಕ್ಷೆಗಳು ನಡೆಯುತ್ತಿಲ್ಲವಾದ್ದರಿಂದ ವಿಶ್ವವಿದ್ಯಾಲಯವು ಇದನ್ನು ಪರಿಗಣಿಸಿ ಪಡೆದ ಪೂರ್ಣಪ್ರಮಾಣದ ಪರೀಕ್ಷಾ ಶುಲ್ಕವನ್ನು ಮುಂದಿನ ಸೆಮಿಸ್ಟರ್ ನ ಪರೀಕ್ಷೆಗಳಿಗೆ ಪರಿಗಣಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ.
ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಅಂಕಗಳು ಸಮಾಧಾನ ಇಲ್ಲದ ಪಕ್ಷದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿರುತ್ತಾರೆ. ಆದರೆ ಮರುಮೌಲ್ಯಮಾಪನದ ಫಲಿತಾಂಶವನ್ನು ಪ್ರಕಟಿಸದೆ ಮುಂದಿನ ಸೆಮಿಸ್ಟರ್ ನ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತಿರುವುದು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡುಮಾಡಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಜಾಗೃತಗೊಂಡು ಆದಷ್ಟು ಬೇಗನೆ ಮರುಮೌಲ್ಯಮಾಪನದ ಫಲಿತಾಂಶವನ್ನು ಪ್ರಕಟಿಸಬೇಕೆಂದು ಮತ್ತು ಪಾಸಾದ ವಿದ್ಯಾರ್ಥಿಗಳ ಕಟ್ಟಿದ ಪರೀಕ್ಷಾ ಶುಲ್ಕವನ್ನು ಪುನಃ ಭರಿಸಬೇಕೆಂದು ಈ ನಿಟ್ಟಿನಲ್ಲಿ ಆಗ್ರಹಿಸಿದರು.

ಕೊರೋನಾ ಕಾರಣದಿಂದಾಗಿ ಬಹುತೇಕ ಪಠ್ಯಕ್ರಮದ ಪಾಠಗಳು ಆನ್ಲೈನ್ ನಲ್ಲೆ ನಡೆದಿದ್ದು, ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿಗಳು ಕೆಲವು ದಿನಗಳಷ್ಟೇ ನಡೆದಿರುವುದರಿಂದ ಪಠ್ಯಕ್ರಮವು ಸಂಪೂರ್ಣವಾಗಿ ಮುಗಿದಿರುವುದಿಲ್ಲ. ಆದ್ದರಿಂದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ಎಲ್ಲಾ ಪಿಯು ವಿದ್ಯಾರ್ಥಿಗಳನ್ನು ಕೊರೋನಾ ವಿಶೇಷ ಸಂದರ್ಭದಲ್ಲಿ ತೇರ್ಗಡೆ ಮಾಡಿರುವ ಕಾರಣ ಸಾಮಾನ್ಯವಾಗಿ ಪದವಿ ತರಗತಿಗಳಿಗೆ ಪ್ರವೇಶಾತಿ ಬೇಡಿಕೆ ಹೆಚ್ಚಿದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಅಗತ್ಯ ಇರುವ ಎಲ್ಲಾ ಪದವಿ ಕಾಲೇಜುಗಳಿಗೆ ಹೆಚ್ಚಿನ ಪ್ರವೇಶಾತಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ಧನುಷ್ ಗೌಡ, ಅಭಿಷೇಕ್, ಸ್ವಾತಿ, ರಂಜಿತ, ಶಿಲ್ಪ, ಚಂದ್ರಶೇಖರ್, ಶ್ರೀಪಾದ, ಲೋಹಿತ್, ಪ್ರವೀಣ, ಅಕ್ಷಯ್ ಸೇರಿದಂತೆ ಹಲವರಿದ್ದರು.

Ad Widget

Related posts

ಸಿದ್ದರಾಮಯ್ಯ, ಜಮೀರ್ ಪಾಕಿಸ್ತಾನ ಪರ ಎಂದ ಈಶ್ವರಪ್ಪ

Malenadu Mirror Desk

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರ ಪ್ರತಿಭಟನಾ ಧರಣಿ

Malenadu Mirror Desk

ಬಸ್ ಪಾಸ್ ನೀಡಲು ಆಗ್ರಹಿಸಿ ಜಿಲ್ಲಾ ಎನ್.ಎಸ್.ಯು.ಐ. ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.