Malenadu Mitra
ರಾಜ್ಯ ಶಿವಮೊಗ್ಗ

ಸಹ್ಯಾದ್ರಿ ವಿಜ್ಞಾನ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಮಾಗಮ

ಸಂಘದ ಗೌರವ ಅಧ್ಯಕ್ಷ ಡಿ.ಎಚ್.ಶಂಕರಮೂರ್ತಿ ವಿವರಣೆ


ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅ.೯ ರಂದು ಬೆಳಿಗ್ಗೆ ೧೧ ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಕ್ರಿಯಾಶೀಲವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ನಾಡಿನ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಸಹ್ಯಾದ್ರಿ ಕಾಲೇಜಿಗೆ ಮಹತ್ವದ ಸ್ಥಾನವಿದೆ. ೧೯೪೧ರಲ್ಲಿ ಆರಂಭವಾದ ಸಹ್ಯಾದ್ರಿ ಕಾಲೇಜಿಗೆ ಈಗ ೮೦ರ ಹರೆಯ. ಅಂದಿನ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ ದಿವ್ಯ ಹಸ್ತದಿಂದ ಆರಂಭವಾದ ಕಾಲೇಜು ಇಂದಿನವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಗಮನಾರ್ಹ ಕೊಡುಗೆ ನೀಡಿದೆ ಎಂದರು.
೧೯೫೬ ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿ ಪರಿವರ್ತನೆಗೊಂಡು ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಆಡಳಿತಾತ್ಮಕ ಕಾರಣದಿಂದಾಗಿ ೧೯೮೪ರಲ್ಲಿ ಕಲಾ ಮತ್ತು ವಿಜ್ಞಾನ ಕಾಲೇಜು ಎಂದು ಬೇರೆ ಬೇರೆ ಕಾಲೇಜುಗಳಾಗಿ ವಿಭಜನೆಗೊಂಡಿತ್ತು. ಕುವೆಂಪು ವಿಶ್ವವಿದ್ಯಾನಿಲಯ ಈ ೨ ಕಾಲೇಜನ್ನು ತನ್ನ ಘಟಕ ಕಾಲೇಜುಗಳನ್ನಾಗಿ ಪರಿವರ್ತಿಸಿಕೊಂಡಿದೆ. ಇಂದಿಗೂ ವಿಜ್ಞಾನ ಕಾಲೇಜು ತನ್ನ ಗುಣಮಟ್ಟದಲ್ಲಿ ಸಾಕಷ್ಟು ಬೆಳೆದು ರಾಜ್ಯ ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಇಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡುವುದರ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು ಹಲವರಿದ್ದಾರೆ ಎಂದರು.
ಭಾರತ ರತ್ನ ಪ್ರೊ.ಸಿ.ಎನ್.ರಾವ್, ದಿ.ಡಾ.ಕೆ.ಅಶೋಕ್ಪೈ., ಡಾ.ಬಿ.ಎನ್.ಸುರೇಶ್, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನಿಸಾರ್‌ಅಹಮ್ಮದ್, ಪ್ರೊ.ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ ಸೇರಿದಂತೆ ನಾಡಿನ ಅನೇಕ ಗಣ್ಯರು ಈ ಕಾಲೇಜಿನಲ್ಲಿ ಕಲಿತಿದ್ದಾರೆ. ಈಗಲೂ ದೇಶ ವಿದೇಶದಲ್ಲಿ ಅನೇಕ ಉನ್ನತ ಹುದ್ದೆಯಲ್ಲಿದ್ದಾರೆ. ಎಲ್ಲರೂ ಕಾಲೇಜಿಗಾಗಿ ಪ್ರತಿಸ್ಪಂದಿಸುವ ಅವಶ್ಯತೆಯಿದೆ, ಈ ದಿಸೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಕೆಲಸ ಮಾಡಲಿದೆ ಎಂದು ಶಂಕರಮೂರ್ತಿ ಹೇಳಿದರು.


ಸಂಘದ ಅಧ್ಯಕ್ಷೆ ಹಾಗೂ ಪ್ರಾಂಶುಪಾಲೆ ಪ್ರೊ.ಹೆಚ್.ಎಂ.ವಾಗ್ದೇವಿ ಮಾತನಾಡಿ, ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ಅನೇಕರು ಉನ್ನತ ಹುದ್ದೆಯಲ್ಲಿದ್ದು ಹಾಗೂ ಸ್ವಂತ ಉದ್ಯಮವನ್ನು ನಡೆಸುತ್ತಿರುವವರ ಒತ್ತಾಸೆಯಂತೆ ಹಿರಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ತಮ್ಮ ಹಳೆಯ ನೆನಪುಗಳನ್ನು ಸವಿಯುವುದರ ಜೊತೆಗೆ ವಿದ್ಯೆ ಕಲಿಸಿ ನಿವೃತ್ತರಾದ ಗುರುಗಳಿಗೆ ಗೌರವ ಸಲ್ಲಿಸುವುದರರೊಂದಿಗೆ ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸಹಕಾರ ನೀಡುವ ನಿಟ್ಟಿನಲ್ಲಿ ಈ ಸಮಾಗಮ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ನಾಗರಾಜ್ ಪರಿಸರ, ಉಮೇಶ್ ಶಾಸ್ರ್ತಿ, ಡಾ.ಕೆ.ಪಿ.ಲತಾ, ಡಾ.ಕೆ.ಎಲ್.ನಾಯಕ್, ನಾಗರಾಜ್ ನೇರಿಗೆ ಪಿ.ಜೇಸುದಾಸ್ ಉಪಸ್ಥಿತರಿದ್ದರು.

Ad Widget

Related posts

ಪಾಲಿಕೆ ಸದಸ್ಯರು ಮಧ್ಯವರ್ತಿಗಳಲ್ಲ: ಮೇಯರ್ ಸುನೀತ ಅಣ್ಣಪ್ಪ

Malenadu Mirror Desk

ಬಿಜೆಪಿ ಅಭ್ಯರ್ಥಿಗಳ ಘೋಷಣೆ, ದಕ್ಷಿಣ ಕನ್ನಡಕ್ಕೆ ಪೂಜಾರಿ, ಶಿವಮೊಗ್ಗಕ್ಕೆ ಅರುಣ್, ಚಿಕ್ಕಮಗಳೂರಿಗೆ ಪ್ರಾಣೇಶ್

Malenadu Mirror Desk

ಸಿದ್ದರಾಮಯ್ಯ ಕಾಲದಲ್ಲಿ ರಸ್ತೆಯಲ್ಲಿ ವಜ್ರ ವೈಡೂರ್ಯ: ಈಶ್ವರಪ್ಪ ಟೀಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.