Malenadu Mitra
ರಾಜ್ಯ

ಶರಾವತಿ ಸಂತ್ರಸ್ತ ರಿಂದ ಶರಾವತಿ ಚಳುವಳಿ :ಆರ್. ಎಂ. ಮಂಜುನಾಥ್ ಗೌಡ


ರಿಪ್ಪನ್ ಪೇಟೆ : ಶರಾವತಿ,ವರಾಹಿ,ಚಕ್ರ ಮತ್ತು ಸಾವೇಹಕ್ಲು ಮುಳುಗಡೆ ಸಂತ್ರಸ್ತರ ಹಾಗೂ ಬಗರ್ ಹುಕುಂ ರೈತರ ಹೋರಾಟ ಸಮಿತಿಯ ವತಿಯಿಂದ ಹಲವಾರು ದಶಕಗಳಿಂದ ಸೂಕ್ತ ಪರಿಹಾರ ನೀಡದೇ ವಂಚಿಸುತ್ತಿರುವ ಸರ್ಕಾರವು ಕೂಡಲೇ ಅವರಿಗೆ ಪರಿಹಾರ ನೀಡಬೇಕೆಂದು ಸೆಪ್ಟೆಂಬರ್ 26.27.28ರಂದು 45 ಕಿ. ಮೀ.3 ದಿನಗಳ ಬೃಹ ತ್ ಪಾದಯಾತ್ರೆ ನಡೆಸಲಾಗುವುದು ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ್ ಗೌಡ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು 59 ವರ್ಷಗಳ ಹಿಂದೆ 1962 ರಲ್ಲಿ ಲಿಂಗನಮಕ್ಕಿ ಜಲಾಶಯಕ್ಕಾಗಿ ಶರಾವತಿ ನದಿ ಪಾತ್ರದ 504 ಹಳ್ಳಿಗಳು ಮುಳುಗಡೆಯಾಗಿ ಇಪ್ಪತೈದು ಸಾವಿರ ಕುಟುಂಬಗಳ ಮೂರು ಲಕ್ಷ ರೈತರು ನಿರಾಶಿತರಾಗಿದ್ದು ಐದು ಸಾವಿರ ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿತ್ತು.

ಶಿವಮೊಗ್ಗ ಜಿಲ್ಲೆಯಲ್ಲಿನ ಸಾವಿರಾರು ರೈತ ಕುಟುಂಬಗಳು ಹೊಸನಗರ,ಸಾಗರ,ಶಿವಮೊಗ್ಗ, ಶಿಕಾರಿಪುರ, ಹೊಳೆಹೊನ್ನೂರು,ಭದ್ರಾವತಿ ಮತ್ತು ತೀರ್ಥಹಳ್ಳಿ ಭಾಗಗಳಲ್ಲಿ ಹೋಗಿ ಇನ್ನೂ ಸಹಜ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ
ಈ ಸಂತ್ರಸ್ತ ರೈತರಿಗೆ ಇಲ್ಲಿಯವರೆಗೂ ಸರ್ಕಾರ ನ್ಯಾಯಯುತ ಪರಿಹಾರ ನೀಡಿಲ್ಲ ತಕ್ಷಣವೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ನ್ಯಾಯಬದ್ದ ಪರಿಹಾರವನ್ನು ನೀಡಬೇಕು.

ಸಂತ್ರಸ್ತರು ಉಳುಮೆ ಮಾಡುತ್ತಿರುವ ಕೃಷಿ ಭೂಮಿಯನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯವರು ಅಭಯಾರಣ್ಯ,ಅಕ್ರಮ ಭೂಕಬಳಿಕೆ ಕೇಸಿನ ಮೂಲಕ ದಬ್ಬಾಳಿಕೆ ಮಾಡುತ್ತಿದ್ದು ಇದು ನಿಲ್ಲಬೇಕು ಹಾಗೂ ಎಲ್ಲಾ ಮುಳುಗಡೆ ಸಂತ್ರಸ್ತರಿಗೆ ಮತ್ತು ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಶರಾವತಿ ಚಳವಳಿ ನಡೆಸಲಾಗುವುದು ಎಂದರು.

ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಸೆಪ್ಟೆಂಬರ್ 26 ರಿಂದ ಕಲ್ಲುಕೊಪ್ಪ ದಿಂದ ಹೊರಟು ಸೆಪ್ಟೆಂಬರ್ 28 ರ ವರೆಗೆ ತೀರ್ಥಹಳ್ಳಿಯ ತಾಲೂಕ್ ಕಛೇರಿಯ ತನಕ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗುವುದು. ಪಾದಯಾತ್ರೆ ಉದ್ಘಾಟನೆಗೆ ಕಲ್ಲು ಕೊಪ್ಪ ದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಲಿದ್ದಾರೆ ಎಂದರು.

Ad Widget

Related posts

ಅಮೃತ ವೃತ್ತಕ್ಕೆ ನಿವೃತ್ತ ಪ್ರಾಚಾರ್ಯ ಗಣೇಶ್‍ಮೂರ್ತಿ ಹೆಸರು

Malenadu Mirror Desk

ಆರ್ಟ್ ಆಫ್ ಲಿವಿಂಗ್‍ನಿಂದ ಜಿಲ್ಲಾಡಳಿತಕ್ಕೆ ಆಕ್ಸಿಜನ್ ಕಾನ್ಸನ್‍ಟ್ರೇಟರ್ ಹಸ್ತಾಂತರ

Malenadu Mirror Desk

ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಈಶ್ವರಪ್ಪ ಮನೆ ಮುಂದೆ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.