ಶಿವಮೊಗ್ಗ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ನಾಪತ್ತೆಯಾಗಿದ್ದ ಎಫ್‍ಡಿಎ ಗಿರಿರಾಜ್ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿ ಒಂದು ವಾರದ ಬಳಿಕ ಗಿರಿರಾಜ್ ಅವರು ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೇಲಧಿಕಾರಿಗಳ ಕಿರುಕುಳದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಶಿವಮೊಗ್ಗ ಡಿಸಿ ಸೇರಿದಂತೆ ಹಲವರಿಗೆ ವಾಟ್ಸ್‍ಪ್ ಸಂದೇಶ ಕಳಿಸಿದ್ದ ಗಿರಿರಾಜ್ ಮನೆಯ ಸಮೀಪದ ಎಟಿಎಂನಲ್ಲಿ 15 ಸಾವಿರ ಹಣ ಬಿಡಿಸಿಕೊಂಡು ನಾಪತ್ತೆಯಾಗಿದ್ದರು.
ಗಿರಿರಾಜ್ ಪತ್ರದಿಂದ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಕೊಟ್ಟಿತ್ತು ಮಾತ್ರವಲ್ಲದೆ, ನಾಪತ್ತೆಯಾಗಿದ್ದ ಗಿರಿರಾಜ್ ಹುಡುಕಾಟಕ್ಕೆ ಕಂದಾಯ ಹಾಗೂ ಪೊಲಿಸ್ ಇಲಾಖೆ ಅವಿರತ ಶ್ರಮ ಹಾಕಿತ್ತು. ಗುರುವಾರ ಅವರು ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.
previous post
next post