ಸಾಗರ ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಅವರು ಪುತ್ರಿ ಡಾ.ಸುಶ್ಮಿತಾ ಅವರ ವಿವಾಹವು ನಿತಿನ್ ಅವರೊಂದಿಗೆ ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಅನೇಕ ಸಚಿವರು, ಶಾಸಕರು ಗಣ್ಯರು ವಿವಾಹದಲ್ಲಿ ಭಾಗವಹಿಸಿ ನೂತನ ವಧುವರರಿಗೆ ಶುಭಕೋರಿದರು.
ವರ ನಿತಿನ್ ಅವರು ಡಾ.ಪಾರ್ವತಮ್ಮ ರಾಜ್ ಕುಮಾರ್ ಸೋದರಿಯ ಪುತ್ರನಾಗಿರುವುದರಿಂದ ದೊಡ್ಮನೆ ಕುಟುಂಬದ ಹಲವರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಗರದಲ್ಲಿ ಅ.೨೩ ರಂದು ಸಾಗರದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ.
previous post