Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಗಾಂಜಾ ಪ್ರಕರಣ ಹೆಚ್ಚಿವೆ, ಹಂಗಂತ ಈಶ್ವರಪ್ಪರನ್ನು ಡ್ರಗ್ಸ್ ಪೆಡ್ಲರ್ ಅನ್ನೊಕಾಗತ್ತಾ ?

ಶಿವಮೊಗ್ಗ ನಗರದಲ್ಲಿ ಅವ್ಯಾಹತವಾಗಿ ಗಾಂಜಾ ಮಾರಾಟ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಗಂಭೀರ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನ ಸಭೆಯ ಚುನಾವಣೆಯ ನಂತರ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮಿತಿ ಮೀರಿವೆ. ಇದರ ಬಗ್ಗೆ ಗೊತ್ತಿದ್ದರೂ ಕೂಡ ಸ್ಥಳೀಯ ಶಾಸಕರಾದ ಈಶ್ವರಪ್ಪನವರು ಯಾವುದೇ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಡ್ರಗ್ ಪೆಡ್ಲರ್, ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಎಂದು ಟೀಕಿಸುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪನವರ ಕ್ಷೇತ್ರದಲ್ಲಿಯೇ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹಾಗಂತ ಅವರನ್ನು ಗಾಂಜಾ ಪೆಡ್ಲರ್ ಎಂದು ಕರೆಯಲು ಬರುವುದಿಲ್ಲ ಎಂದು ಕುಟುಕಿದರು.
ಸರ್ಕಾರದ ಯಾವುದೇ ಕಚೇರಿಗಳಲ್ಲಿಯೂ ಕೆಲಸಗಳು ಆಗುತ್ತಿಲ್ಲ. ಜನಸಾಮಾನ್ಯ ದಿನನಿತ್ಯ ಅಲೆಯುವಂತಾಗಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಕಾಲಮಿತಿಯಲ್ಲಿ ಮುಗಿಯಬೇಕಾದ ಕೆಲಸಗಳು ಮುಗಿಯುತ್ತಿಲ್ಲ. ಚೆನ್ನಾಗಿರುವ ಡೆಕ್ ಸ್ಲ್ಯಾಬ್‌ಗಳನ್ನು ಒಡೆದು ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದಾಗಿ ಇಡೀ ನಗರದ ಜನ ಮಾತ್ರವಲ್ಲ ಹೊರಗಿನಿಂದ ಬರುವವರೂ ಕೂಡ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.


ಜೆ ನರ್ಮ್ ಯೋಜನೆಯಡಿ ೩೫ ಸಿಟಿ ಬಸ್ಗ್‌ಳನ್ನು ತರಲಾಗಿತ್ತು. ಇನ್ನೂ ೩೦ ಬಸ್ಗ್‌ಗಳನ್ನು ತರುವುದು ಬಾಕಿ ಇದೆ. ಈಗಾಗಲೇ ಬಂದಿರುವ ಒಂದೇ ಒಂದು ಬಸ್ ಕೂಡ ನಗರದಲ್ಲಿ ಸಂಚಾರ ನಡೆಸುತ್ತಿಲ್ಲ. ಅವು ಯಾವ ಮಾರ್ಗದಲ್ಲಿ ಓಡಾಡುತ್ತಿವೆ ಎಂಬುದು ಕೂಡ ಗೊತ್ತಿಲ್ಲ. ಬಾಕಿ ಬಸ್ಗ್‌ಳನ್ನು ತರುವಲ್ಲಿ ಸಚಿವರು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.


 RTOಕಚೇರಿಯಲ್ಲಿ ಸಿಬ್ಬಂದಿಗಳೇ ಇಲ್ಲ. ಇರುವ ಸಿಬ್ಬಂದಿಗಳು ಮೂರು ಮೂರು ಜಿಲ್ಲೆಗಳನ್ನು ನೋಡಿಕೊಳ್ಳುವ ಸ್ಥಿತಿ ಇದೆ.ಇದರ ಬಗ್ಗೆ ಸಚಿವರು ಚಕಾರ ಎತ್ತುತ್ತಿಲ್ಲ. ತಾಲೂಕು ಕಚೇರಿಯಲ್ಲಿಯೂ ಯಾವುದೇ ಕೆಲಸ ಆಗುತ್ತಿಲ್ಲ. ಇದೆಲ್ಲವನ್ನು ಸರಿಪಡಿಸಬೇಕಾದ ಸಚಿವರು ಕೇವಲ ರಾಜಕೀಯ ಪ್ರೇರಿತ ಟೀಕೆ ಮಾಡುವುದರಲ್ಲಿಯೇ ನಿರತರಾಗಿದ್ದಾರೆ ಎಂದು ದೂರಿದರು.
ಪ್ರಮುಖರಾದ ಬೊಮ್ಮನಕಟ್ಟೆ ಮಂಜುನಾಥ, ಎನ್.ಕೆ. ಶಾಮಸುಂದರ್, ಆರ್.ಕೆ. ಉಮೇಶ್, ದೀಪಕ್ ಸಿಂಗ್, ಶಾಮೀರ್ ಖಾನ್ ಇದ್ದರು.

Ad Widget

Related posts

ಹಳ್ಳಿಗಳಲ್ಲಿ ಇಂಟರ್‌ನೆಟ್ ಸೇವೆ ಯೋಜನೆಗೆ ಸಾಗರ ತಾಲೂಕು ಆಯ್ಕೆ : ಬಿ.ವೈ.ರಾಘವೇಂದ್ರ

Malenadu Mirror Desk

ಸಿಗಂದೂರು ಧರ್ಮದರ್ಶಿಗಳಿಗೆ ವಿವೇಕಾನಂದ ಎಕ್ಸಲೆನ್ಸಿ ಅವಾರ್ಡ್

Malenadu Mirror Desk

ಶಿರಸಿ ಜಿಲ್ಲೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.