Malenadu Mitra
ರಾಜ್ಯ ಶಿವಮೊಗ್ಗ

ಪಠ್ಯ ಕಡಿತಗೊಳಿಸುವ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ: ಸಚಿವ ಬಿ.ಸಿ. ನಾಗೇಶ್

ಈ ಬಾರಿ ಪಠ್ಯವನ್ನು ಕಡಿತಗೊಳಿಸುವ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
  ಶಿವಮೊಗ್ಗ ನಗರದ ಮಲವಗೊಪ್ಪ ಸರ್ಕಾರಿ ಶಾಲೆಯಲ್ಲಿ 1-5ನೇ ತರಗತಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಠ್ಯವನ್ನು ಕಡಿತಗೊಳಿಸುವ ಯಾವುದೇ ಯೋಚನೆ ಇಲಾಖೆಗೆ ಇಲ್ಲ. ಮುಂದಿನ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದರು.
ದಸರಾ ರಜೆ ಕಡಿತಗೊಳಿಸಿರುವುದರಿಂದ ಪಠ್ಯ ಪೂರ್ಣಗೊಳಿಸಲು ಬೇಕಾದ ಕ್ರಮವನ್ನು ಶಿಕ್ಷಕರ ಸಹಕಾರದೊಂದಿಗೆ ಈಗಾಗಲೇ ಮಾಡಲಾಗಿದೆ. ಪ್ರಾಥಮಿಕ ಶಿಕ್ಷಕರ ಸಂಘದ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ೩ ಸುತ್ತಿನ ಮಾತುಕತೆ ನಡೆದಿದೆ. ಕೆಲವೊಂದು ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯವಿದ್ದು, ಅದನ್ನು ಕೂಡ ಬಗೆಹರಿಸಲಾಗುವುದು ಎಂದರು.
ತಜ್ಞರ ಸಲಹೆ ಮೇರೆಗೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭಿಸಲಾಗಿದೆ. 1 ರಿಂದ 5ನೇ ತರಗತಿ ಪ್ರಾರಂಭಕ್ಕೆ ಪೋಷಕರು ಕಾಯುತ್ತಿದ್ದರು, ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಶಾಲೆ ಆರಂಭಿಸಲು ನಿರ್ಧರಿಸಿ ಮೊದಲ ಹಂತದಲ್ಲಿ ಅರ್ಧ ದಿನ ಶಾಲೆ, ಮುಂದಿನ ತಿಂಗಳಿಂದ ಪೂರ್ತಿ ದಿನ ಶಾಲೆ ನಡೆಸಲು ತೀರ್ಮಾನಿಸಲಾಯಿತು ಎಂದರು.ಇಂದು ಶಾಲೆಯಲ್ಲಿ ನೋಡಿದರೆ ಪೋಷಕರೇ ಖುಷಿಯಿಂದ ಮಕ್ಕಳನ್ನು ತಂದು ಶಾಲೆಗೆ ಬಿಡುತ್ತಿದ್ದಾರೆ. ಆಯಾ ಶಾಲಾ ಬಡಾವಣೆ ಜನರು ಸಹ ಶಾಲೆ ಆರಂಭಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅನೇಕ ಕಡೆ ಶಾಲೆ ಆರಂಭ ಹಬ್ಬದ ರೀತಿಯಲ್ಲಿ ನಡೆಯುತ್ತಿದ್ದು, ಇದು ಸಮಾಜ ಶಿಕ್ಷಣಕ್ಕೆ ನೀಡಿರುವ ಆದ್ಯತೆಯನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ 48ಸಾವಿರ ಶಾಲೆಗಳಿವೆ, ಈ ಪೈಕಿ 28900 ಶಾಲೆಗಳು ವ್ಯವಸ್ಥಿತವಾಗಿವೆ, 7 ಸಾವಿರ ಶಾಲೆಗಳ ದುರಸ್ಥಿಯಾಗಬೇಕು. ಇದರಿಂದ ಇಂತಹ ಶಾಲೆಗಳಲ್ಲಿ ಮಕ್ಕಳನ್ನು ಹೊಂದಾಣಿಕೆ ಮಾಡಿಕೊಂಡು ೨ ಪಾಳಿಯಲ್ಲಿ ಶಾಲೆ ನಡೆಸಲು ತಿಳಿಸಲಾಗಿದೆ ಎಂದರು.
ಶಾಲೆಗಳ ಅಭಿವೃದ್ಧಿಗೆ ದತ್ತು ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಆ?ಯಪ್ ತರುತ್ತಿದ್ದು ನನ್ನ ಶಾಲೆ ನನ್ನ ಕೊಡುಗೆ ಹೆಸರಿನಲ್ಲಿ ಸಾರ್ವಜನಿಕರು, ದಾನಿಗಳು  ಸರ್ಕಾರಿ ಶಾಲೆಗಳ ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಕೊಡುಗೆ ನೀಡಬಹುದಾಗಿದೆ ಎಂದು ತಿಳಿಸಿದರು.
ಮುಂದಿನ ವಾರದಿಂದ 1 ರಿಂದ 5 ನೇ ತರಗತಿ ಪೂರ್ಣಪ್ರಮಾಣದಲ್ಲಿ ನಡೆಯಲಿದ್ದು, ಬಿಸಿಯೂಟ ಆರಂಭಿಸಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಡಿಡಿಪಿಐ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ದ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಸಡಗರ ಸಂಭ್ರಮದಿಂದ ಮಕ್ಕಳನ್ನು ಬರಮಾಡಿಕೊಂಡರು.


Ad Widget

Related posts

ಸಮುದಾಯ ಹಂತ ಸಿಬ್ಬಂದಿಗಳಿಗೂ ಸುರಕ್ಷತಾ ಕಿಟ್ಟುಗಳನ್ನು ವಿತರಿಸಲು ಸೂಚನೆ

Malenadu Mirror Desk

ಆಯನೂರು ಮಂಜುನಾಥ ಗೆಲುವು, ಪಕ್ಷದ ಗೆಲುವು’

Malenadu Mirror Desk

ಶ್ರೀಕಾಂತ್‌ಗೆ ಜನ್ಮದಿನ ಸಂಭ್ರಮ, ಆಟೋ ಕಾಂಪ್ಲೆಕ್ಸ್‌ನಲ್ಲಿ ಅಭಿಮಾನಿಗಳಿಂದ ಸನ್ಮಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.