Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಬಡವರ ಬಂಧು ಬಂಗಾರಪ್ಪ ಸ್ಮರಣೆ ಜಿಲ್ಲೆಯಾದ್ಯಂತ ಮೇರುನಾಯಕನ ಜನ್ಮದಿನಾಚರಣೆ

ಮಾಜಿ ಮುಖ್ಯ ಮಂತ್ರಿ, ಬಡವರ ಬಂಧು ಈ ನಾಡು ಕಂಡ ಬಹುಮುಖ ವ್ಯಕ್ತತ್ವದ ಅಪರೂಪದ ಜನನಾಯಕ ಎಸ್.ಬಂಗಾರಪ್ಪ ಅವರ ೮೮ ನೇ ಜನ್ಮದಿನವನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ಆಚರಿಸಲಾಯಿತು. ಸೊರಬದ ಬಂಗಾರಧಾಮದಲ್ಲಿ ಪುತ್ರ ಹಾಗೂ ಮಾಜಿ ಶಾಸಕ ಮಧುಬಂಗಾರಪ್ಪ ಅವರು ಸಮಾಧಿ ಪೂಜೆ ಸಲ್ಲಿಸಿದರು. ಬಳಿಕ ಅವರ ಅಭಿಮಾನಿಗಳು ಸರಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಮಧು ಬಂಗಾರಪ್ಪ ಅವರು, ಬಂಗಾರಪ್ಪಾಜಿ ಅವರ ಬಡವರ ಹಾಗೂ ದೀನ ದಲಿತರ ಪರವಾಗಿ ತಮ್ಮ ಅಧಿಕಾರವಧಿಯಲ್ಲಿ ಯೋಜನೆಗಳು ರೂಪಿಸಿ ಜನಮಾನಸದಲ್ಲಿ ಉಳಿದಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿ ಜನರ ಕಷ್ಟಗಳನ್ನು ಅರಿತು ಉನ್ನತ ಸ್ಥಾನಕ್ಕೇರಿದ ಬಂಗಾರಪ್ಪ ಅವರು, ಜನರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡಿದ್ದರಿಂದ ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಅವರ ಅಭಿಮಾನಿಗಳಿದ್ದಾರೆ. ಗ್ರಾಮೀಣ ಕೃಪಾಂಕ, ರೈತರ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ತಳ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಅವರ ಸಾಮಾಜಿಕ ಚಿಂತನೆಗಳನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಮೈಗೂಡಿಸಿಕೊಂಡು ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ ಎಂದು ತಿಳಿಸಿದರು.
ಕಲೆ,ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿದ್ದ ಬಂಗಾರಪ್ಪ ಅವರ ಜನ್ಮ ದಿನಾಚರಣೆ ಅಂಗವಾಗಿ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಕಬ್ಬಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು ಖುಷಿ ನೀಡಿದೆ ಎಂದರು.ಬಂಗಾರಪ್ಪ ಸ್ಮಾರಕ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ. ಆನವಟ್ಟಿ ಬ್ಲಾಕ್ ಅಧ್ಯಕ್ಷ ಆರ್.ಸಿ.ಪಾಟೀಲ್, ಕಾರವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ್, ಮುಖಂಡರಾದ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ, ಕೆ.ವಿ.ಗೌಡ, ಎಚ್.ಗಣಪತಿ, ಲಕ್ಷ್ಮೀಕಾಂತ್ ಚಿಮಣೂರು, ನೆಹರೂ ಕೊಡಕಣಿ, ನಾಗರಾಜ ಚಂದ್ರಗುತ್ತಿ, ಪ್ರಭಾಕರ್ ಶಿಗ್ಗಾ, ಜೆ.ಪ್ರಕಾಶ್, ಪರಶುರಾಮ ಸಣಬೈಲ್, ಫಯಾಜ್ ಅಹಮದ್ ರಾಜಶೇಖರಗೌಡ ತ್ಯಾವಗೋಡು ಸೇರಿದಂತೆ ಬಂಗಾರಪ್ಪ ಅಭಿಮಾನಿಗಳು ಇದ್ದರು.

ಕುಮಾರ್‌ಬಂಗಾರಪ್ಪರಿಗೆ ಅಧಿಕಾರದ ಮದ

ಕುಮಾರ್ ಬಂಗಾರಪ್ಪ ಅವರಿಗೆ ಅಧಿಕಾರದ ಮದ ತಲೆಗೇರಿದ್ದರಿಂದ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಇದರಿಂದ ಅಭಿವೃದ್ಧಿ ಕುಂಠಿತಗೊಳ್ಳಲಿದೆ ಎನ್ನುವ ಕಿಂಚಿತ್ತೂ ಜ್ಞಾನವಿಲ್ಲ ಎಂದು ಮಧುಬಂಗಾರಪ್ಪ ಟೀಕಿಸಿದರು.
ಜೆಡಿಎಸ್‌ನ ತುಣುಕು ಕಾಂಗ್ರೆಸ್ ಸೇರಿದ್ದರಿಂದ ಯಾವ ಲಾಭ ಆ ಪಕ್ಷಕ್ಕಿಲ್ಲ ಎಂದು ಶಾಸಕ ಕುಮಾರ್ ಬಂಗಾರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಅವರು, ಸಿದ್ದರಾಮಯ್ಯ ಅವರ ಮನೆಯಲ್ಲಿ ನಾನು ಅವರನ್ನು ನೋಡಿಲ್ಲ ಆದರೂ ತಮ್ಮ ಮಧು ಬಂಗಾರಪ್ಪ ಅವರನ್ನು ನೋಡಿ ತುಂಬ ಖುಷಿಯಾಗಿದೆ ಎಂದು ಹೇಳುವ ಅವರಿಗೆ ಅಂತರಂಗ, ಬಹಿರಂಗದ ವ್ಯತ್ಯಾಸ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಬಂಗಾರಪ್ಪ ಪುತ್ಥಳಿಗೆ ಮಾಲಾರ್ಪಣೆ:

ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಶಾಸಕ ಕುಮಾರ್ ಬಂಗಾರಪ್ಪ ಅವರು, ಸೊರಬದ ಬಸ್ ನಿಲ್ದಾಣ ಸಮೀಪ ಇರುವ ಬಂಗಾರಪ್ಪ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಎಂ.ಡಿ.ಉಮೇಶ್, ಅಶೋಕ್ ಶೇಟ್ ವಿನಾಯಕ ಕಾನಡೆ, ಕೃಷ್ಣಮೂರ್ತಿ, ಪ್ರಭಾಕರ ಮತ್ತಿತರರಿದ್ದರು.

.

ಈಡಿಗ ಸಂಘದಿಂದ ಜನ್ಮದಿನಾಚರಣೆ

ಶಿವಮೊಗ್ಗ ಈಡಿಗ ಭವನದಲ್ಲಿ ಜಿಲ್ಲಾ ಆರ್ಯಈಡಿಗ ಸಂಘದಿಂದ ಬಂಗಾರಪ್ಪ ಅವರ ಜನ್ಮದಿನ ಆಚರಿಸಲಾಯಿತು. ಈ ಸಂದರ್ಭ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಕಾರ್ಯದರ್ಶಿ ಎಸ್. ಸಿ. ರಾಮಚಂದ್ರ ನಿರ್ದೇಶಕರುಗಳಾದ ಸುರೇಶ್ ಕೆ. ಬಾಳೆಗುಂಡಿ, ಜಿ.ಡಿ. ಮಂಜುನಾಥ್, ಎನ್.ಪಿ. ಧರ್ಮರಾಜ್, ಕಾಗೋಡು ರಾಮಪ್ಪ, ಎಸ್.ಎಂ. ಮಹೇಶ್, ತೇಕಲೆ ರಾಜಪ್ಪ, ನಾಗರಾಜ್ ತಡಗಣಿ, ಎಚ್.ಎನ್. ಮಹೇಂದ್ರ ಕೆ.ಎಲ್. ಉಮೇಶ್, ಪರುಶರಾಮ್, ಸುದರ್ಶನ್, ಟಿ.ಕುಪ್ಪಯ್ಯ, ಕೆ. ಈಶ್ವರಪ್ಪ ,ಎಚ್. ಸಿದ್ದಪ್ಪ , ಎಚ್.ಜಿ. ವಿರೂಪಾಕ್ಷಿ, ಆರ್. ರಾಜಶೇಖರ್. ಬಸವರಾಜು ಕಲ್ಲಿ, ನಾಗೇಶ್, ಶಿವಮೂರ್ತಿ, ಜಿನ್ನಾ ಮೂರ್ತಿ ಮತ್ತಿತರರಿದ್ದರು.

ಹಾವೇರಿ ಜಿಲ್ಲೆ ಅಕ್ಕಿ ಆಲೂರು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ನಾರಾಯಣಗುರು ವಿಚಾರವೇದಿಕೆಯಿಂದ ಮಾಜಿಸಿಎಂ ಬಂಗಾರಪ್ಪ ಜಯಂತಿ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ಈ ಸಂದರ್ಭ, ರಾಘವೇಂದ್ರನಾಯ್ಕ, ಪ್ರಕಾಶ್ ಈಳಿಗೇರ, ಮಾಲತೇಶ ಈಳಿಗೇರ,ಪರಶುರಾಮ, ರಾಕೇಶ ಮತ್ತಿತರರಿದ್ದರು.

ತೀರ್ಥಹಳ್ಳಿ ತಾಲೂಕು ನಾರಾಯಣಗುರು ವಿಚಾರ ವೇದಿಕೆಯಿಂದ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ರಾಜ್ಯ ಸಂಚಾಲಕ ಮುಡುಬರಾಘವೇಂದ್ರ, ಹೊದಲ ಶಿವು,ಉಮೇಶ್, ವಿಶಾಲಕುಮಾರ್, ಅನಿಲ್ ಕುಮಾರ್, ಪೂರ್ಣೇಶ ಸೇರಿದಂತೆ ಹಲವರಿದ್ದರು.

Ad Widget

Related posts

ಶಿವಮೊಗ್ಗ ಜಿಲ್ಲೆ ಕೃಷಿ ಕ್ಲಸ್ಟರ್ ಆಗಿ ಹೊರಹೊಮ್ಮಬೇಕು : ಬಿ.ವೈ.ರಾಘವೇಂದ್ರ

Malenadu Mirror Desk

ಗ್ರಾಪಂಗಳಿಗೆ ಬಲ ತುಂಬಬೇಕಿದೆ :ಸಂವಾದದಲ್ಲಿ ನೂತನ ಎಂಎಲ್‌ಸಿ ಡಿ. ಎಸ್.ಅರುಣ್ ಹೇಳಿಕೆ

Malenadu Mirror Desk

ಪತ್ರಕರ್ತರು ಸಮಾಜಮುಖಿಯಾಗಿ ಚಿಂತಿಸಬೇಕು,ಕ್ರಾಂತಿದೀಪ ಮುದ್ರಣವಿಭಾಗ ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.