Malenadu Mitra
ರಾಜ್ಯ ಶಿವಮೊಗ್ಗ

ಜಿಲ್ಲಾ ಉಪ್ಪಾರ ಸಂಘದ ದುರ್ಬಳಕೆ: ಹೋರಾಟಕ್ಕೆ ಜಯ

ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯವರು ಬೈಲ ಉಲ್ಲಂಘನೆಯ ಜೊತೆಗೆ ಹಣಕಾಸು ದುರ್ಬಳಕೆ ಮಾಡಿಕೊಂಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆಡಳಿತ ಮಂಡಳಿಯನ್ನು ಸೂಪರ್ ಸಿಡ್ ಮಾಡಬೇಕು ಎಂಬ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಂಘದ ಉಪಾಧ್ಯಕ್ಷ ಎನ್.ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಆರ್.ಸತ್ಯನಾರಾಯಣ ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ ಮತ್ತು ಅವರ ಹಿಂಬಾಲಕ ನಿರ್ದೇಶಕರುಗಳು ಸೇರಿಕೊಂಡು ಜಿಲ್ಲಾ ಉಪ್ಪಾರ ಸಂಘವನ್ನೇ ದುರುಪಯೋಗ ಪಡಿಸಿಕೊಂಡಿದ್ದರು. ಕಳೆದ ೨೧ವರ್ಷದಿಂದ ಸರ್ವ ಸದಸ್ಯರ ಸಭೆ ನಡೆಸಲಿಲ್ಲ. ಲೆಕ್ಕ ಪತ್ರ ಮಂಡಿಸಿ ಅನುಮೋಧನೆ ಪಡೆಯಲಿಲ್ಲ. ಸಂಘದ ನವೀಕರಣೆ ಮಾಡಿಲ್ಲ. ಸದಸ್ಯರ ಶುಲ್ಕವನ್ನು ಬಾಂಕಿಗೆ ತುಂಬಿಲ್ಲ. ಆಡಳಿತಮಂಡಳಿ ಸಭೆಯಲ್ಲಿ ಅನುಮೋಧನೆ ಪಡೆಯದೇ ಕಾಮಗಾರಿ ನಡೆಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.
ಈ ಎಲ್ಲಾ ವಿಷಯಗಳನ್ನು ಇಟ್ಟುಕೊಂಡು ಉಪ್ಪಾರ ಸಂಘದ ಉಪಾಧ್ಯಕ್ಷ ಮತ್ತು ಸಂಘದ ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕರಿಗೆ ತನಿಖೆ ನಡೆಸುವಂತೆ ದುರುಸಲ್ಲಿಸಿದ್ದವು. ಈ ದೂರಿನ ಆದಾರದಲ್ಲಿ ಸಂಘಗಳ ನೊಂದಾಣಾಧಿಕಾರಿಗಳು ಸಂಘಕ್ಕೆ ದಾಖಲೆಗಳು ಮತ್ತು ವಿವರಗಳನ್ನು ಕೇಳಿ ನಮ್ಮ ದೂರು ಅರ್ಜಿಯನ್ನು ಮಾನ್ಯ ಮಾಡಿದ್ದಾರೆ. ನಮ್ಮೇಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು. ೩೦ದಿನದ ಒಳಗೆ ವಿಚಾರಣಾ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಯ್ಯದ್ ಜುನೇಕ್ ಪಾಷಾ ಅವರನ್ನು ವಿಚಾರಣಾ ಅಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಇದು ನಮಗೆ ಸಿಕ್ಕ ಜಯವಾಗಿದೆ ಎಂದರು.

ಪ್ರಭಾರ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಉಪ್ಪಾರ ಸಮಾಜದಲ್ಲಿ ದಬ್ಬಾಳಿಕೆ ನಡೆಯುತ್ತಿದೆ. ಕೆಲವೇ ಕೆಲವರು ಸೇರಿಕೊಂಡು ಲೆಕ್ಕಪತ್ರ ಕೇಳಿದವರನ್ನು ಬೆದರಿಸುತ್ತಿದ್ದಾರೆ. ಸಂಘದ ಚಟುವಟಿಕೆ ಸರಿಯಾಗಿ ನಡೆಯುತ್ತಿಲ್ಲ. ೩೫ರಿಂದ ೪೦ ಸಾವಿರ ದಷ್ಟು ಜನಸಂಖ್ಯೆ ಇದ್ದರೂ ಕೂಡ ಸಮಾಜದ ವ್ಯಕ್ತಿಗಳ ಮಾತಿಗೆ ಬೆಲೆ ಕೊಡದೆ ಉತ್ಸವ ಮೂರ್ತಿಯಂತೆ ಅಧ್ಯಕ್ಷರನ್ನು ಇಟ್ಟುಕೊಂಡು ಅವ್ಯವಹಾರ ಮಾಡಿಕೊಂಡು ಉಪ್ಪಾರ ಸಮಾಜವನ್ನೇ ನಾಶ ಮಾಡಲು ಹೊರಟಿದ್ದಾರೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರುವುದಿಲ್ಲ. ಅಲ್ಲದೆ ನಿಯಮಬಾಹಿರವಾಗಿ ಮಾಜಿ ಅಧ್ಯಕ್ಷ ಎಸ್.ಟಿ.ಹಾಲಪ್ಪ ಮತ್ತು ಸತ್ಯನಾರಾಯಣ ಸೇರಿಕೊಂಡು ತಮ್ಮ ಸಂಬಂಧಿಕರನ್ನೇ ಸದಸ್ಯರನ್ನಾಗಿ ಮಾಡಲು ಹೊರಟಿದ್ದಾರೆ. ಉಪ್ಪಾರ ಸಮಾಜದವರು ಯಾರು ಹೊಸದಾಗಿ ಸದಸ್ಯತ್ವ ಪಡೆಯಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೃಷ್ಣಪ್ಪ ಭದ್ರಾವತಿ, ಓಂಕಾರಮೂರ್ತಿ, ನಾಗರಾಜ್, ರಮೇಶ್ ಸೇರಿದಂತೆ ಹಲವರಿದ್ದರು.

Ad Widget

Related posts

ಮಲೆನಾಡಿನ ಹೆಮ್ಮೆಯ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಅಮೃತ ಮಹೋತ್ಸವ ಸಂಭ್ರಮ: ಎನ್‌ಇಎಸ್‌ ವಿಶೇಷ ಅಂಚೆ ಲಕೋಟೆ ಬಿಡುಗಡೆ, ಡಾ.ಶಿವನ್‌ರಿಂದ ಉಪನ್ಯಾಸ

Malenadu Mirror Desk

ಸಾಮಾಜಿಕ ಸಮಸ್ಯೆಗಳ ಮುಕ್ತಿಗೆ ಉನ್ನತ ಶಿಕ್ಷಣ ಮದ್ದು

Malenadu Mirror Desk

ಶಿಕ್ಷಣ ನೀತಿ ಖಾಸಗೀಕರಣಕ್ಕೆ ನಾಂದಿ : ಕಿಮ್ಮನೆ ರತ್ನಾಕರ್ ಅಭಿಪ್ರಾಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.