ಮಗಳೆ..ಧೃತಿ …. ನಿನ್ನ ಪಪ್ಪನ ನಿಧನ ಇಡೀ ಕರುನಾಡಿಗೇ ಆಘಾತ ನೀಡಿದೆ. ದೂರದ ಅಮೇರಿಕಾದಿಂದ ನೀ ಅದೆಷ್ಟು ದುಃಖ ಹೊತ್ತು ಬರುತ್ತಿರುವೆ ತಾಯಿ. ಧೈರ್ಯ ತಂದುಕೊ… ಇದು ಅಗಲಿದ ಅಪ್ಪನ ಅಂತಿಮ ದರ್ಶನಕ್ಕೆ ಬರುತ್ತಿರುವ ಪುನೀತ್‌ರಾಜ್‌ಕುಮಾರ್ ಅವರ ಮಗಳು ದೃತಿಗೆ ಅವರ ಅಭಿಮಾನಿಗಳು ಮನಸಲ್ಲಿಯೇ ಹೇಳುತ್ತಿರುವ ಧೈರ್ಯದ ಮಾತುಗಳು….ಹೌದು. ದೂರದೂರಿಂದ ಬರುತ್ತಿರುವ ಆ ಮಗಳ ದುಃಖ ಎಂತವರಿಗಾದರೂ ಕರಳು ಕಿವುಚುವಂತಿದೆ. ಈ ಹೊತ್ತಿನಲ್ಲಿ ಧೈರ್ಯ ತಂದುಕೊ ಎಂದು ಹೇಳಬಹುದೇ ಹೊರತೂ ಸಾಂತ್ವನ ಹೇಳಲು ಬೇರೆ ಪದಗಳಿಲ್ಲ.
ಕರುನಾಡ ರಾಜರತ್ನ ನಿನ್ನ ಅಪ್ಪನ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ. ಅಪ್ಪನ ಅಂತಿಮ ದರ್ಶನಕ್ಕೆ ಅಮೇರಿಕಾದಿಂದ ಬರುತ್ತಿರುವ ನಿನಗೆ ದೇವರು ಶಕ್ತಿ ನೀಡಲಿ. ಬರುವ ಹಾದಿಯಲ್ಲಿ ನಿನ್ನೊಳಗೆ ಅದೆಷ್ಟು ದುಃಖ ಮಡುಗಟ್ಟಿದೆ ಎಂದು ಊಹಿಸುವುದು ಕೂಡಾ ಕಷ್ಟ. ಕರುನಾಡಿನ ಕೋಟ್ಯಂತರ ಹೃದಯಗಳಿಗೆ ಸಾಂತ್ವನದ ಸೂಜಿಗಲ್ಲಾಗಿದ್ದ ಪುನೀತ್ ರಾಜ್‌ಕುಮಾರ್ ಇಂದು ಭೌತಿಕವಾಗಿ ಇಲ್ಲ. ಆದರೆ ಅವರು ಮಾಡಿದ ಕೆಲಸಗಳು, ಜೀವ ಚೈತನ್ಯ ನೀಡುವ ಸಿನೆಮಾ ಮತ್ತು ಅವುಗಳ ಸಂದೇಶ ಅಜರಾಮರ.
ಮಗಳೇ ಧೃತಿ…ನಿನ್ನ ಪಪ್ಪಾ. ನಾಡನ್ನೇ ಪ್ರೀತಿಸಿದ್ದರು. ನಾಡಿನ ಕೋಟಿ ಜನ ಅಪ್ಪುವಿಗೆ ಪವರ್ ಸ್ಟಾರ್ ಎಂಬ ಬಿರುದನ್ನೇ ಕೊಟ್ಟು ತಮ್ಮ ಎದೆಯೊಳಗಿಟ್ಟುಕೊಂಡಿದ್ದಾರೆ. ಆ ಕೋಟಿ ಜನರ ಪ್ರೀತಿ ಸದಾ ನಿನ್ನಪರಿವಾರದ ಮೇಲಿದೆ. ಧೈರ್ಯ ತಂದುಕೊ ಮಗಳೇ…….ದೇವರು ನಿನಗೆ ಶಕ್ತಿ ಕೊಡಲಿ…
ಇರುವಾಗ ನಿನ್ನ ಪಪ್ಪಾ ಕರುನಾಡಿನ ಕಣ್ಮಣಿಯಾಗಿದ್ದರು…. ಆ ಪ್ರೀತಿ ಅವರ ಮೇಲೆ ಯಾವತ್ತೂ ಇರುತ್ತದೆ. ಅನಾಥಾಶ್ರಮ, ವೃದ್ಧಾಶ್ರಮ, ಶಾಲೆ, ನೊಂದ ರೈತರ, ಬಡವರ, ದೀನರ ಕಣ್ಣೊರೆಸಿದ್ದ ಅಪ್ಪನ ಕಾರ್ಯ ನಿಮ್ಮನ್ನು ಸದಾ ಕಾಯಲಿದೆ….ನಿನ್ನ ಪಪ್ಪನ ಅಗಲಿಕೆಯಿಂದ ಇಡೀ ನಾಡೇ ಶೋಕಸಾಗರದಲ್ಲಿದೆ.. ಆದರೆ ಕರುಳ ಕುಡಿ ನಿನ್ನ ನೋವು ಹೇಳುವಂತದಲ್ಲ…..ಧೃತಿ ಅಪ್ಪ ಎಲ್ಲೂ ಹೋಗಿಲ್ಲ.. ಇಲ್ಲೇ ಇದಾರೆ……ನೋವು ನುಂಗಿಕೊ……