ಪತ್ನಿ ಹಾಗೂ ಆಕೆಯ ಪೋಷಕರೊಂದಿಗೆ ವಿಡಿಯೊ ಕಾಲ್ ನಲ್ಲಿ ಮಾತನಾಡುತ್ತಲೇ ಶಿವಮೊಗ್ಗ ಕೇಂದ್ರ ಕಾರಾಗೃಹದ ವಾರ್ಡರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಅಸ್ಪಾಕ್ ತಗಡಿ(24)ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೆಎಸ್ಆರ್ಪಿ ಪೇದೆಯಾಗಿದ್ದ ಅಸ್ಪಾಕ್ ಎರಡು ವರ್ಷಗಳ ಹಿಂದೆ ಜೈಲ್ ವಾರ್ಡರ್ ಆಗಿ ನೇಮಕವಾಗಿದ್ದರು.
ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಪತಿಯೊಂದಿಗೆ ಮುನಿಸಿಕೊಂಡಿದ್ದ ಪತ್ನಿ ತವರು ಮನೆಗೆ ಹೋಗಿದ್ದರು. ಬುಧವಾರ ರಾತ್ರಿ ಎಂಟು ಗಂಟೆಗೆ ಪತ್ನಿಗೆ ವಿಡಿಯೊ ಕಾಲ್ ಮಾಡಿದ್ದ ಅಸ್ಪಾಕ್, ಮಾತಾಡಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಜಗಳವಾಗಿದೆ. ಪತ್ನಿಯ ತಂದೆಯೊಂದಿಗೆ ವಾಗ್ವಾದ ನಡೆದಿದೆ. ಈ ಸಂದರ್ಭ ಹತಾಶ ಭಾವನೆಗೊಳಗಾದ ಅಸ್ಪಾಕ್, ಕಿಟಕಿಯ ಮೇಲೆ ಮೊಬೈಲ್ ಇಟ್ಟು ಅವರಿಗೆ ಕಾಣುವಂತೆ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾವ ಹಾಗೂ ಪತ್ನಿ ಜೈಲಿನ ಅಧೀಕ್ಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.ತಕ್ಷಣ ಜೈಲು ಸಿಬ್ಬಂದಿ ಬಾಗಿಲು ಒಡೆದು ನೋಡುವಷ್ಟರಲ್ಲಿ ಅಸ್ಪಾಕ್ ಪ್ರಾಣಪಕ್ಷಿ ಹಾರಿಹೋಗಿತ್ತು. ಅಸ್ಪಾಕ್ ಪತ್ನಿ ಒಂದೂವರೆ ತಿಂಗಳ ಹಿಂದಷ್ಟೆ ಹೆರಿಗೆಯಾಗಿತ್ತು. ತುಂಗಾ ನಗರ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.