Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಕರೂರು ಹೋಬಳಿ ನೆಟ್ವರ್ಕ್ ಸಮಸ್ಯೆ ಇತ್ಯರ್ಥಕ್ಕೆ30 ಲಕ್ಷ ಅನುದಾನ, ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆಲಸ: ಶಾಸಕ ಹಾಲಪ್ಪ

ಸಾಗರ ತಾಲ್ಲೂಕಿನ ಮೂರ್‍ನಾಲ್ಕು ಹೋಬಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು, ಕರೂರು ಹೋಬಳಿಯಲ್ಲಿ ನೆಟ್‌ವರ್ಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ಹಾಗೂ ಸಂಸದರ ಅನುದಾನದಲ್ಲಿ 20 ಲಕ್ಷ ರೂ. ಹಣ ನೀಡಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಸೋಮವಾರ ಪತ್ರಕರ್ತರು ನೆಟ್‌ವರ್ಕ್ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರೂರು ಭಾರಂಗಿ ಹೋಬಳಿಯ ೧೫ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್, ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಲು ಟ್ಯಾಬ್ ಮತ್ತು ಇಂಟರ್‌ನೆಟ್ ಸೌಲಭ್ಯ ಒದಗಿಸಲು ಪ್ರತಿ ಕಿ.ಮೀ.ಗೆ ಒಂದು ಲಕ್ಷ ರೂ.ನಂತೆ ಹಣ ಮಂಜೂರು ಮಾಡಲಾಗಿದೆ ಎಂದರು.

ಕರೂರು ಭಾರಂಗಿ ಹೋಬಳಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದೆ. ಈ ಭಾಗದ ಜನರು ಪ್ರತಿಭಟನೆ, ಪಾದಯಾತ್ರೆ ಇನ್ನಿತರೆ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದು, ಇದಕ್ಕೆ ನಾನೂ ಬೆಂಬಲ ವ್ಯಕ್ತಪಡಿಸಿದ್ದೇನೆ. ವಿಧಾನಸಭಾ ಅಧಿವೇಶನದಲ್ಲಿ ಸಹ ಈ ಭಾಗದ ಜನರ ಸಮಸ್ಯೆ ಎತ್ತಿಹಿಡಿದು ಸರ್ಕಾರದ ಗಮನ ಸೆಳೆದಿದ್ದೇನೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಳಿ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 5 ಕೋಟಿ ರೂ. ಮಂಜೂರು ಮಾಡುವಂತೆ ನಾನು ಮತ್ತು ಸಂಸದರು ಮನವಿ ಸಹ ಮಾಡಿದಾಗ ಅವರು ಮೌಖಿಕವಾಗಿ ಒಪ್ಪಿಕೊಂಡಿದ್ದರು. ಈಗಿನ ಮುಖ್ಯಮಂತ್ರಿಗಳ ಬಳಿ ಸಹ ಸದ್ಯದಲ್ಲಿಯೆ ಹಣ ಮಂಜೂರು ಮಾಡುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಬಿಎಸ್‌ಎನ್‌ಎಲ್‌ನಿಂದ ಎರಡು ಹೋಬಳಿಗಳ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಸಹ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ಆಸಕ್ತಿ ತೋರಿಸಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಟವರ್ ಅಳವಡಿಸಿ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಪ್ರಯತ್ನ ನಡೆಸಲಾಗಿದೆ. ಈಗಾಗಲೆ ಜಿಲ್ಲಾಧಿಕಾರಿಗಳ ಖಾತೆಗೆ ಒಟ್ಟು 30 ಲಕ್ಷ ರೂ. ಹಣ ಬಿಡುಗಡೆಯಾಗುವ ಹಂತದಲ್ಲಿದ್ದು, ಆಯಾಯ ಶಾಲೆಯ ಎಸ್.ಡಿ.ಎಂ.ಸಿ. ಮೂಲಕ ಯೋಜನೆ ಅನುಷ್ಟಾನಕ್ಕೆ ಬರಲಿದೆ. ಇದರಿಂದಾಗಿ ನೆಟ್‌ವರ್ಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗುವ ಭರವಸೆ ಇದೆ ಎಂದರು.

ರಿಫ್ಲಕ್ಟರ್ ಕಳವು:

ನಗರದ ಕೆ.ಎಂ. ಲಿಂಗಪ್ಪ ಅವರ ಮನೆಯಿಂದ ಗುಡ್ಡೆಕೌತಿವರೆಗೆ ಚತುಷ್ಪಥ ರಸ್ತೆ ನಿರ್ಮಿಸಿ ಮಧ್ಯೆ ಡಿವೈಡರ್ ಅಳವಡಿಸಿ ರಿಫ್ಲಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಕೆಲವು ಕಿಡಿಗೇಡಿಗಳು ಡಿವೈಡರ್ ಮಧ್ಯೆ ಅಳವಡಿಸಿದ್ದ ಸುಮಾರು 300 ರಿಫ್ಲೆಕ್ಟರ್‌ಗಳನ್ನು ಕಳ್ಳತನ ಮಾಡಿದ್ದಾರೆ. ರಿಫ್ಲೆಕ್ಟರ್‌ಗಳನ್ನು ಕಳ್ಳತನ ಮಾಡಿದ್ದಾರೋ, ಇನ್ಯಾವುದೋ ಉದ್ದೇಶಕ್ಕೆ ಕಿತ್ತುಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಕಳ್ಳತನ ಮಾಡಿರುವ ಬಗ್ಗೆ ನಗರ ಠಾಣೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ ದೂರು ನೀಡಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸದಸ್ಯ ಕೆ.ಆರ್.ಗಣೇಶಪ್ರಸಾದ್, ಸರೋಜ ಭಂಡಾರಿ, ಆಶ್ರಯ ಸಮಿತಿ ಸದಸ್ಯ ಯು.ಎಚ್.ರಾಮ್ಪಪ್ಪ, ಚಂದ್ರಶೇಖರ್ ಹಾಜರಿದ್ದರು.

Ad Widget

Related posts

ಶಿವಮೊಗ್ಗದಲ್ಲಿ 20 ಸಾವು, 705ಮಂದಿ ಡಿಸ್ಚಾರ್ಜ್

Malenadu Mirror Desk

ಸಿಗರೇಟ್ ಕೊಡದಿದ್ದಕ್ಕೆ ಕೊಲೆ

Malenadu Mirror Desk

ಸುರಿವ ಮಳೆಯಲ್ಲೇ ಸ್ವಾತಂತ್ರ್ಯ ನಡಿಗೆ ಆರತಿ ಬೆಳಗಿ ,ರಾಖಿ ಕಟ್ಟಿ ಮಧುಬಂಗಾರಪ್ಪರಿಗೆ ಶುಭ ಹಾರೈಸಿದ ಮಹಿಳೆಯರು, ವಿದ್ಯಾರ್ಥಿನಿಯರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.