ಮಲೆನಾಡಿನ ಅಮೃತ್ ನೋನಿ ಖ್ಯಾತಿಯ ವ್ಯಾಲ್ಯು ಪ್ರಾಡಕ್ಟ್ ಪ್ರವೇಟ್(ಲಿ) ಸಂಸ್ಥೆಗೆ ಕೇಂದ್ರ ಸರಕಾರವು ಪ್ರತಿಷ್ಠಿತ ಪ್ಲಾಂಟ್ ಜೀನೋಮ್ ಸೇವಿಯರ್ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸ್ ಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶಿಷ್ಟ ಗಿಡಗಳನ್ನು ಬೆಳೆಸಿದ ಹಾಗೂ ಸಂರಕ್ಷಿಸಿದ ದೇಶದ ಕೇವಲ ೨೫ ಜನರಿಗೆ ಪ್ಲಾಂಟ್ ಜೀನೋಮ್ ಸೇವಿಯರ್ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಈ ವರ್ಷ ನೀಡಿದ್ದು ನ.೧೧ರಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ೧ ಲಕ್ಷ ರೂ. ನಗದು ಬಹುಮಾನ ,ಫಲಕ ಮತ್ತು ಶ್ರಶಸ್ತಿ ಪತ್ರ ಒಳಗೊಂಡಿದೆ ಎಂದು ಹೇಳಿದರು.
ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆಯು ಅಮೃತ್ ನೋನಿ ಉತ್ಪನ್ನಗಳ ಮೂಲಕ ಇಂದು ದೇಶದಾದ್ಯಂತ ಲಕ್ಷಾಂತರ ಜನರ ಆರೋಗ್ಯ ಸುಧಾರಣೆಗೆ ಕಾರಣವಾಗಿದ್ದು, ನೋನಿ ಅಂಡ್ ಹರ್ಬ್ ಫಾರ್ಮರ್ ಅಸೋಸಿಯೇಷನ್ ಮೂಲಕ ನೋನಿ ಹಣ್ಣನ್ನು ಬೆಳೆದು ಬೇರೆ ಬೇರೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆಸಿ ಅವರ ಬದುಕಿಗೂ ಆಸರೆಯಾಗಿದೆ ಎಂದರು.
೧೬೪ ಕ್ಕೂ ಹೆಚ್ಚು ಪೋಷಕಾಂಶವಿರುವ ಏಕೈಕ ವಿಶಿಷ್ಟವಾದ ನೋನಿ ಹಣ್ಣನ್ನು ಜನರಿಗೆ ಪರಿಚಯಿಸಿ, ನಮ್ಮ ದೇಶದಲ್ಲಿ ಪ್ರಪ್ರಥಮ ಬಾರಿಗೆ ಜನಪ್ರಿಯಗೊಳಿಸಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ, ನೂರಾರು ಎಕರೆ ನೋನಿ ತೋಟವನ್ನು ಬೆಳೆಸಿದ ಕೀರ್ತಿ ನಮ್ಮ ಸಂಸ್ಥೆಗೆ ಸಲ್ಲುತ್ತದೆ ಎಂದರು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಂಜುನಾಥ್ ನಾಯ್ಕ್ ಮಾತನಾಡಿ, ಔಷಧಿ ಗುಣವುಳ್ಳ ಸಸ್ಯಗಳನ್ನು ಸಂರಕ್ಷಿಸಿ ಬೆಳೆಸಿದವರಿಗೆ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ವಿಶ್ವವಿದ್ಯಾನಿಲಯದಿಂದ ಔಷಧಿ ಸಸ್ಯಗಳ ಸಂಶೋಧನೆ ಹಾಗೂ ತಂತ್ರಜ್ಞಾನಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಔಷಧಿ ಗುಣವುಳ್ಳ ಹಣ್ಣುಗಳು ಯಾವುದೇ ಉಪಯೋಗಕ್ಕೆ ಬರುತ್ತದೆ ಎಂಬುದರ ಬಗ್ಗೆ ವಿವಿ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಅದೇ ರೀತಿ ಡಾ. ಶ್ರೀನಿವಾಸ್ ಮೂರ್ತಿ ಅವರು ಬೆಳೆದ ನೋನಿ ಹಣ್ಣುಗಳ ಸಂಶೋಧನೆಗೆ ಮಾರ್ಗದರ್ಶನ ನೀಡಿದೆ. ಇದೀ ರೀತಿಯ ಸಾಧನೆಗಾಗಿ ನಮ್ಮ ವಿವಿಯ ಮಾರ್ಗದರ್ಶನದಲ್ಲಿ ಸಾಗರ, ಚಿತ್ರದುರ್ಗ ,ಕೊಡಗಿನ ರೈತರು ಹಲವು ಸಂಶೋಧನೆ ಮಾಡಿದ್ದಾರೆ. ಇವರಿಗೂ ಕೇಂದ್ರ ಸರಕಾರ ಪುರಸ್ಕಾರ ನೀಡಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಂಬುಜಾಕ್ಷಿ ಡಾ.ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು.
ಮೂರು ಜನರಿಂದ ಆರಂಭವಾಗಿರುವ ಅಮೃತ್ ನೋನಿ ಸಂಸ್ಥೆ ಇಂದು ರಾಮಿನಕೊಪ್ಪದಲ್ಲಿ ನೂರು ಜನರಿಗೆ ಉದ್ಯೋಗ ನೀಡಿದೆ. ಈಗಿನ ಮಾರುಕಟ್ಟೆ ಅನುಸಾರ ಪರೋಕ್ಷವಾಗಿ ೧೦೦೦ ಉದ್ಯೋಗಿಗಳು ಸಂಸ್ಥೆಯನ್ನು ಆಶ್ರಯಿಸಿದ್ದಾರೆ. ಅಡಕೆ,ಕಾಫಿ ಬೆಳೆದು ಎಲ್ಲರಂತೆ ನಾನೂ ಇರಬಹುದಿತ್ತು. ಆದರೆ ಅಮೃತ್ ನೋನಿ ಉತ್ಪನ್ನಗಳ ಮೂಲಕ ಹೊಸ ಸಾಹಸಕ್ಕೆ ಕೈಹಾಕಿದೆ. ಸಮುದಾಯದ ಆರೋಗ್ಯದ ಕಾಳಜಿ ಮಾಡುವುದು ಹೆಮ್ಮೆಯ ಸಂಗತಿ
—ಶ್ರೀನಿವಾಸಮೂರ್ತಿ ,
ವ್ಯವಸ್ಥಾಪಕ ನಿರ್ದೇಶಕ