Malenadu Mitra
ರಾಜ್ಯ ಶಿವಮೊಗ್ಗ

ಎನ್‌ಎಸ್‌ಎಸ್ ಸೇವೆಯ ಪ್ರತೀಕ: ಕುಲಸಚಿವೆ ಅನುರಾಧ ಅಭಿಪ್ರಾಯ

ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೂಡುವ ಸೇವಾ ಮನೋಭಾವ ಅವರಿಗೊಂದು ಮಾದರಿ ಜೀವನ ಶೈಲಿಯನ್ನು ನೀಡುತ್ತದೆ. ಎನ್.ಎಸ್‌ಎಸ್‌ನಲ್ಲಿ ಪರಿಸರ, ದೇಶ ಹಾಗೂ ಸಮಾಜದ ಬಗ್ಗೆ ಜಾಗೃತಿ ಮೂಡುತ್ತದೆ ಮಕ್ಕಳು ಇಲ್ಲಿ ಕಲಿತದ್ದನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕುವೆಂಪು ವಿವಿ  ಕುಲಸಚಿವೆ ಜಿ. ಅನುರಾಧ ಹೇಳಿದರು.
ಕುವೆಂಪು ವಿ. ವಿ. ಮಟ್ಟದ ಎನ್. ಎಸ್. ಎಸ್. ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ಸಮಾಜದಲ್ಲಿನ ನ್ಯೂನತೆಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ಹೇಳಿದರು.  ಕುಲಸಚಿವೆ ಶ್ರೀಮತಿ ಅನುರಾಧ ಜಿ. ಇವರು ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸಮಾಜದಲ್ಲಿನ ನ್ಯೂನ್ಯತೆ ಗಳನ್ನು ಹೋಗಲಾಡಿಸಲು ಬಳಸಿಕೊಳ್ಳಬೇಕು ಎಂದರು.


    ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ  ಎಸ್. ಷಡಾಕ್ಷರಿ ಮಾತನಾಡಿ,  ಎನ್. ಎಸ್. ಎಸ್. ಸ್ವಯಂ ಸೇವಕರಾಗಿದ್ದ ದಿನಗಳನ್ನು  ಸ್ಮರಿಸಿದರಲ್ಲದೆ, ಶಿಬಿರದ ದಿನಗಳಲ್ಲಿ  ನಮಗೆ ಮಾನಸಿಕ ಬೌದ್ಧಿಕ ಹಾಗೂ ಆಂತರಿಕ ಆರೋಗ್ಯವನ್ನು ನೀಡಿತ್ತು. ಜೀವನದ ಯಶಸ್ಸಿಗೆ ಬೇಕಾದ ಮೂಲ ಅಂಶಗಳನ್ನು ಎನ್. ಎಸ್. ಎಸ್. ಕಲಿಸುತ್ತದೆ. ನಮ್ಮಲ್ಲಿ ಸೇವಾ ಮನೋಭಾವನೆ ಮೂಡಿಸುವುದೇ ಎನ್‌ಎಸ್ ಎಸ್ ಎಂದರು. ನಟ ಪುನೀತ್‌ರಾಜ್‌ಕುಮಾರ್ ಅವರು ತಮ್ಮ ಸಮಾಜ ಸೇವಾ ಕಾರ್ಯದಿಂದ ಇಂದು ಕೋಟ್ಯಂತರ ಜನರ ಹೃದಯದಲ್ಲಿ ನೆಲೆನಿಂತಿದ್ದಾರೆ. ಇದು ಯುವಜನರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.


 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಮಾತನಾಡಿ,  ಪದವಿ ಅಂಕಗಳು ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಅವುಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ಕೌಶಲಗಳಿಂದ  ಜೀವನ ರೂಪಿಸಿಕೊಳ್ಳಲು ಮಕ್ಕಳಿಗೆ ಶಿಬಿರಗಳು ಅನುಕೂಲ ಎಂದರು.
   ಕುವೆಂಪು ವಿವಿ ಎನ್‌ಎಸ್‌ಎಸ್ ಕೋ ಆರ್ಡಿನೇಟರ್ ಡಾ.ನಾಗರಾಜ್ ಪರಿಸರ ಏಳು ದಿನಗಳ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಕುವೆಂಪು ವಿ. ವಿ. ಸಿಂಡಿಕೇಟ್ ಸದಸ್ಯರಾದ  ಸಂತೋಷ್ ಬಳ್ಳೇಕೆರೆ, ಪ್ರಾಂಶುಪಾಲರಾದ ಡಾ. ಹೆಚ್. ಎಂ. ವಾಗ್ದೇವಿ, ಡಾ. ಕೆ. ಬಿ. ಧನಂಜಯ, ಪ್ರಭಾರ ಪ್ರಾಂಶುಪಾಲರಾದ ಡಾ.ಸರಳ, ಎನ್. ಎಸ್. ಎಸ್. ಅಧಿಕಾರಿಗಳಾದ ಡಾ. ಶುಭ ಮರವಂತೆ, ಡಾ. ಹಾಲಮ್ಮ, ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಗಣೇಶ್ ಆರ್. ಕೆಂಚನಾಲ್, ಡಾ. ಪರಶುರಾಂ, ಡಾ. ಹಾ. ಮಾ. ನಾಗಾರ್ಜುನ, ಡಾ. ವೆಂಕಟೇಶ್ ಪಿ. ಉಪಸ್ಥಿತರಿದ್ದರು.

Ad Widget

Related posts

ಶಿವಮೊಗ್ಗದಲ್ಲಿ ಗಲಾಟೆ ಮಾಡ್ಸೋದೆ ಈಶ್ವರಪ್ಪ: ಸಿದ್ದರಾಮಯ್ಯ ಆರೋಪ

Malenadu Mirror Desk

17 ಮನೆ ಕುಸಿತ,9 ಕಾಳಜಿ ಕೇಂದ್ರ, ಅಧಿಕಾರಿಗಳೊಂದಿಗೆ ಶೀಘ್ರ ಸಭೆ ಸ್ಥಳ ಪರಿಶೀಲಿಸಿದ ನಂತರ ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

ಬಿಜೆಪಿಯಿಂದ ಹರಿಕೃಷ್ಣ, ಕಾಂಗ್ರೆಸ್ ಹುರಿಯಾಳು ಯೋಗಿಶ್, ಜೆಡಿಎಸ್‌ನಿಂದ ಶ್ರೀಕಾಂತ್ ಅಖಾಡಕ್ಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.