Malenadu Mitra
ರಾಜ್ಯ ಶಿವಮೊಗ್ಗ

ಯವಜನೋತ್ಸವದಲ್ಲಿ ಜಾನಪದ ಸುಗ್ಗಿ , ಜನಮನ ಗೆದ್ದ ಕಲಾ ತಂಡಗಳು

ಸೋಬಾನೆ, ಗೀಗೀಪದ, ಪದ, ಜೋಗಿ ಪದ, ಷರೀಫರ ತತ್ವಪದ, ಮಲೆ ಮಹಾದೇಶ್ವರನಿಗೆ ಉಘೇ..ಉಘೇ ಹೀಗೆ ತಾಳ,ತಂಬೂರಿ, ಕಹಳೆ ಕಂಸಾಳೆಗಳ ಕಲರವ ಒಟ್ಟಾರೆ ಹೇಳಬೇಕೆಂದರೆ ಅಲ್ಲೊಂದು ಜಾನಪದ ಲೋಕವೇ ಸೃಷ್ಟಿಯಾಗಿತ್ತು,
ಇದು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಡೆದ ಜಿಲ್ಲಾ ಯುವಜನೋತ್ಸವದಲ್ಲಿ ಕಂಡು ಬಂದ ಜಾನಪದ ಸುಗ್ಗಿ ಸಂಭ್ರಮ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಶಿವಮೊಗ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಯುವಜನೋತ್ಸವದಲ್ಲಿ ಭಾಗವಹಿಸಿದ ಯುವ ಕಲಾವಿದರೂ ನಾಡಿನ ಆದಿಮ ಕಲೆಯಾದ ಜಾನಪದ ಹಾಡು ನೃತ್ಯಗಳನ್ನು ಪ್ರಸ್ತುತ ಪಡಿಸಿದ್ದ ರೀತಿಯ ರಂಗಮಂದಿರದಲ್ಲಿ ಹೇಮಾಂಗಣದಲ್ಲಿ ಚೈತನ್ಯದ ಚಿಲುಮೆ ಪುಟಿದೆದ್ದಂತೆ ಭಾಸವಾಗುತಿತ್ತು.

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರಗಳ ಯುವಜನರು ಉತ್ಸವದಲ್ಲಿ ಪಾಲ್ಗೊಂಡು ಪ್ರತಿಭಾ ಪ್ರದರ್ಶನ ಮಾಡಿದರು. ಯುವಜನೋತ್ಸವದ ಎಲ್ಲಾ ಸ್ಪರ್ಧೆಗಳಲ್ಲಿ ಈ ಬಾರಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಸಹ್ಯಾದ್ರಿ ಕಾಲೇಜು, ಶಿಕಾರಪುರ ,ಸೊರಬ, ಹೊಸನಗರ, ಗರತೀಕೆರೆ, ತುಮರಿ ಬ್ರಾಹ್ಮಣ ಕೆಪ್ಪಿಗೆ, ಭದ್ರಾವತಿಯಿಂದ ಬಂದಿದ್ದ ಯುವಕರ ತಂಡ ತಮ್ಮ ಗಾಯನದಿಂದಾಗಿ ಜನಮನ ಗೆದ್ದಿತು.

ಜಿಲ್ಲೆಗೆ ಉತ್ತಮ ಹೆಸರು ತರುವಂತೆ ಹಾರೈಕೆ

ಇದಕ್ಕೂ ಮೊದಲು ಉತ್ಸವ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು, ಯುವ ಸ್ಪರ್ಧಿಗಳು ತಮ್ಮಲ್ಲಿರುವ ವಿವಿಧ ಪ್ರತಿಭೆಯನ್ನು ಅನಾವರಣಗೊಳಿಸಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದ್ದು, ಉತ್ತಮ ಸ್ಪರ್ಧೆ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾತನಾಡಿ, ಇಂದಿನ ಪೀಳಿಗೆಯಲ್ಲಿ ದೇಶದ ಮುಂದಿನ ಭವಿಷ್ಯ ಅಡಗಿದ್ದು, ಯುವಜನತೆ ಓದಿನೊಂದಿಗೆ ಇತರೆ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇತರೆ ಸಾಂಸ್ಕೃತಿಕ, ಜಾನಪದ, ಶಾಸ್ತ್ರೀಯ ಚಟುವಟಿಕೆಗಳನ್ನು ಉತ್ತೇಜಿಸಲು ಇಂತಹ ಯುವಜನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇದು ಯುವಜನತೆಯ ಜೀವನದ ಸರ್ವತೋಮುಖ ಬೆಳವಣಿಗೆಗೆ ಕೂಡ ಸಹಕರಿಸುತ್ತದೆ ಎಂದರು.
ಕುವೆಂಪು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅಭಿವ್ಯಕ್ತಿಗೊಳಿಸಲು ಇದೊಂದು ಒಳ್ಳೆಯ ವೇದಿಕೆಯಾಗಿದ್ದು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಪಾಲ್ಗೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ತರಬೇಕೆಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ.ಮಂಜುನಾಥಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಗಳನ್ನು ಕುವೆಂಪು ರಂಗಮಂದಿರ ಮತ್ತು ಸರ್ಕಾರಿ ನೌಕರರ ಭವನ ಈ ಎರಡು ವೇದಿಕೆಗಳಲ್ಲಿ ೧೫ ರಿಂದ ೨೯ ವರ್ಷದೊಳಗಿನ ಯುವಜನತೆಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ನೆಹರು ಯುವ ಕೇಂದ್ರದ ಸಂಯೋಜಕ ಉಲ್ಲಾಸ್ ಕೆ.ಟಿ.ಕೆ ಹಾಗೂ ತೀರ್ಪುಗಾರರು ಹಾಜರಿದ್ದರು.

ಯುವಜನೋತ್ಸವದಲ್ಲಿ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಗ್ರಾಮೀಣ ಕಲೆಗಳನ್ನು ವಿದ್ಯಾರ್ಥಿಗಳ ಬಗ್ಗೆ ಆಸಕ್ತಿವಹಿಸಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ

ಎಂ.ಟಿ.ಮಂಜುನಾಥ ಸ್ವಾಮಿ, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

Ad Widget

Related posts

ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಂಘದ ಸರ್ವಸದಸ್ಯರ ಸಭೆ

Malenadu Mirror Desk

ನನ್ನ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಕಾರಣ ; ಹರತಾಳು ಹಾಲಪ್ಪ

Malenadu Mirror Desk

ಮದುವೆ ದಿನವೇ ಕೊರೊನಕ್ಕೆ ವರ ಬಲಿ ಮಲೆನಾಡಿನಲ್ಲಿ ಮುಂದುವರಿದ ಮಹಾಮಾರಿ ಅಟ್ಟಹಾಸ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.