Malenadu Mitra
ರಾಜ್ಯ ಶಿವಮೊಗ್ಗ

ಯಶಸ್ಸಿನ ಮೆಟ್ಟಿಲು ಹತ್ತುವುದು ಸವಾಲು :ಕೆ.ಎ.ದಯಾನಂದ ಅವರ “ಹಾದಿಗಲ್ಲು” ಕೃತಿಯ ಬಿಡುಗಡೆಗೊಳಿಸಿ ಪ್ರೊ. ಚೆನ್ನಿ ಹೇಳಿಕೆ

ಬಡಕುಟುಂಬದಲ್ಲಿ ಜನಿಸಿ ಕಷ್ಟದಲ್ಲಿಯೇ ಜೀವನ ನಡೆಸುವ ಜತೆಯಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುವುದು ಸವಾಲು. ಆದರೆ ಇವರು ನಡೆದುಬಂದ ಹಾದಿಯು ಅನೇಕ ಸವಾಲುಗಳನ್ನು ದಾಟಿದ ಸಾಹಸಯಾತ್ರೆಯ ಸಾಧ್ಯತೆಯನ್ನು “ಹಾದಿಗಲ್ಲು” ಕೃತಿ ತೆರೆದಿಡುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಐಎಎಸ್ ಅಧಿಕಾರಿ ಕೆ. ಎ. ದಯಾನಂದ ಅವರ ಆತ್ಮವೃತ್ತಾಂತ “ಹಾದಿಗಲ್ಲು” ಪುಸ್ತಕದ ೭ನೇ ಮುದ್ರಣ ಲೋಕಾರ್ಪಣೆ ಹಾಗೂ ಕೃತಿ ಕುರಿತು “ಸಮಾನ ಮನಸ್ಕರೊಂದಿಗೆ ಸಂವಾದ”ದಲ್ಲಿ ಅವರು ಮಾತನಾಡಿದರು.
ಯುವ ಸಮುದಾಯದವರಲ್ಲಿ ಪ್ರೇರಣೆ ತುಂಬಬಲ್ಲ ಸ್ಫೂರ್ತಿಯುತ ಅಂಶಗಳ ಶಕ್ತಿಯ ಸಾಧನವಾಗಿ ಮೂಡಿಬಂದಿದೆ. ಏನೇ ಅಡೆತಡೆ ಬಂದರೂ ಅದನ್ನೆಲ್ಲಾ ಮೀರಿ ಸಾಧಿಸುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಎಲ್ಲರೂ ಕೃತಿಯನ್ನು ಓದುವ ಮೂಲಕ ಪ್ರೇರಣೆ ಪಡೆದುಕೊಳ್ಳಬೇಕು ಎಂದರು.

ಕೆಲವು ಯಶಸ್ವಿ ವ್ಯಕ್ತಿಗಳ ಆತ್ಮಕಥೆಯು ಹುಟ್ಟಿದಾಗಲೇ ಯಶಸ್ಸು ದೊರೆಯುವುದು ನಿಶ್ಚಿತ ಎಂಬಂತೆ ವರ್ಣಿಸುವ, ವೈಭವಿಕರಿಸುವ ರೀತಿಯಲ್ಲಿರುತ್ತದೆ. ಆದರೆ ದಯಾನಂದ ಅವರ ಹಾದಿಗಲ್ಲು ಕೃತಿಯಲಿ ಬಾಲ್ಯ, ವಿದ್ಯಾರ್ಥಿ ಹಂತದಿಂದ ಹಿಡಿದು ಜೀವನದಲ್ಲಿ ಹಂತ ಹಂತವಾಗಿ ನೋವಿನ ಸರಮಾಲೆ ಎದುರಿಸಿ ಗೆಲುವಿನ ದಾರಿಗೆ ಬರುವ ಕಥನವನ್ನು ಹಾದಿಗಲ್ಲು ಕೃತಿಯಲ್ಲಿ ಕಾಣಬಹುದಾಗಿದೆ. ಪ್ರಾಮಾಣಿಕತೆ, ಕ್ರಿಯಾತ್ಮಕ ಆಲೋಚನೆಗಳ ಬಗ್ಗೆ ಪ್ರೇರಣೆ ಒದಗಿಸುತ್ತದೆ ಎಂದರು.

ಬಿಬಿಎಂಪಿ ಆಡಳಿತ ವಿಶೇಷ ಅಧಿಕಾರಿ ಕೆ.ಎ.ದಯಾನಂದ ಮಾತನಾಡಿ, ಯುವಜನರಿಗೆ ಆತ್ಮಸ್ಥೈರ್ಯ ತುಂಬಲು ಸ್ಫೂರ್ತಿಯುತ ಅಂಶಗಳನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆ ನಡೆಸಿದೆ.ಕೊರೊನಾ ಲಾಕ್‌ಡೌನ್‌ಆರಂಭದಲ್ಲಿ ಪುಸ್ತಕ ಪೂರ್ಣಗೊಳಿಸಿದೆ. ಇದೀಗ ೭ನೇ ಮುದ್ರಣ ಕಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಪ್ರೆಸ್ ಟ್ರಸ್ಟ್ ಅಧ್ಯಕ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾನ್ಯ ಜನರನ್ನು ಒಬ್ಬ ಅಧಿಕಾರಿ ಹೇಗೆ ತಲುಪಬಹುದು ಎನ್ನುವುದಕ್ಕೆ ದಯಾನಂದ ಉತ್ತಮ ಉದಾಹರಣೆಯಾಗಿದ್ದಾರೆ. ಮಂಗನ ಕಾಯಿಲೆಯಂತಹ ಗಂಭೀರ ಸಮಸ್ಯೆಯನ್ನು ಜನರ ವಿಶ್ವಾಸದಿಂದ, ಸ್ಥಳೀಯರ ಸಕಾರದೊಂದಿಗೆ ನಿಯಂತ್ರಣಕ್ಕೆ ತರುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಸಹ್ಯಾದ್ರಿ ಉತ್ಸವವನ್ನು ಅತಿ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ಗಾಂಜಾ ವಿರುದ್ಧ ಯುವಜನರನ್ನು ಜಾಗೃತಿಗೊಳಿಸಲು ಹೈಸ್ಕೂಲು ಮಟ್ಟದಲ್ಲೇ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಇಂತಹ ಸರಳ, ಸಜ್ಜನ ಅಧಿಕಾರಿ ಮಾತ್ರ ಜನರನ್ನು ತಲುಪಬಲ್ಲರು ಎಂದರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಸ್ವಾಗತಿಸಿದರು. ಅಭಿ ನಿರೂಪಿಸಿದರು.

Ad Widget

Related posts

ಜೆಪಿಎನ್ ಎಲ್ಲರಿಗೂ ಸ್ಫೂರ್ತಿ : ರಾಜಪ್ಪ

Malenadu Mirror Desk

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಜ್ಞಾನ, ಶಕ್ತಿ ಇದೆ

Malenadu Mirror Desk

ಬಿಜೆಪಿ ಜಿಲ್ಲಾ ಸಮಿತಿಯಲ್ಲಿ ಈಡಿಗರಿಗಿಲ್ಲ ಸ್ಥಾನ, ಚುನಾವಣೆಗೆ ಈಡಿಗರು ಬೇಕು, ಹುದ್ದೆಗೆ ಬೇಡವೇ ಎಂಬ ಪ್ರಶ್ನೆ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.