ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಅಭ್ಯಸಿಸಲು ಒತ್ತು ನಿಡಲಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಹೇಳಿದರು.
ಶಿವಮೊಗ್ಗ ಪಿಇಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಹೊಸಶಿಕ್ಷಣ ನೀತಿ ಸಂಬಂಧ ಕಾರ್‍ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ದೇಶಗಳಲ್ಲಿ ಒಂದೇ ಭಾಷೆ ಇದೆ. ಆದರೆ ಭಾರತದಲ್ಲಿ ನೂರಾರು ಭಾಷೆಗಳಿವೆ. ಪ್ರತಿ ೫೦ ಕಿ. ಮೀಗೆ ಭಾಷೆ ಬದಲಾಗುತ್ತದೆ. ಇದನ್ನು ಗಮನಿಸಿ ಎಲ್ಲಾ ಮಾಧ್ಯಮದಲ್ಲೂ ಶಿಕ್ಷಣ ಕೊಡುವುದಕ್ಕೆ ಆದ್ಯತೆ ಕೊಡಲಾಗಿದೆ ಎಂದ ಅವರು, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ಕೊಡಲಾಗಿದೆ. ಗಣಿತದಲ್ಲಿನ ಶೂನ್ಯದ ಕೊಡುಗೆ ಭಾರತದ್ದು. ನಲಂದಾ ವಿಶ್ವವಿದ್ಯಾಲಯ ಪುರಾತನಾದುದು ಮತ್ತು ಅ ದಕ್ಕೆ ಉತ್ತಮ ಹೆಸರಿದೆ ಎಂದರು.
ಇನ್ನು ಮುಂದೆ ಎಲ್ಲಾ ಭಾಷೆಯಲ್ಲೂ ಓದಲು ಅವಕಾಶ ಸಿಗಲಿದೆ. ಕರ್ನಾಟಕದಲ್ಲಿ ಕನ್ನಡೆ ಅಗ್ರಸ್ಥಾನ ಪಡೆದಿದೆ. ಈ ರಾಜ್ಯ ಎಲ್ಲಾ ರಾಜ್ಯಗಳಿಗಿಂತ ಮೊದಲು ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಕೀರ್ತಿಯನ್ನು ಹೊಂದಿದೆ ಎಂದ ರಾಜ್ಯಪಾಲರು, ದೇಶಭಕ್ತಿ, ಗುರು- ಶಿಷ್ಯರ ಸಂಬಂಧದ ಶಿಕ್ಷಣದ ವಿಷಯ ಇದರಲ್ಲಿ ಅಡಕವಾಗಿದೆ ಎಂದರು.
ತಾನು ಮಧ್ಯಪ್ರದೇಶದವನಾದರೂ ಕನ್ನಡದದ ಬಗ್ಗೆ ಹೆಮ್ಮೆ ಇದೆ. ಕನ್ನಡವನ್ನು ಕಲಿಯುತ್ತಿದ್ದೇನೆ. ಹೊಸ ಶಿಕ್ಷಣ ನೀತಿ ಬಗ್ಗೆ ಈಗ ವೆಬ್ ಸೈಟ್‌ನಲ್ಲಿ ಸಾಕಷ್ಟು ಮಾಹಿತಿಯನ್ನು ಹಾಕಲಾಗಿದೆ. ಇದನ್ನು ಚೆನ್ನಾಗಿ ಓದಿಕೊಂಡು ಅದರ ಲಾಭ ಪಡೆಯಬೇಕೆಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಸಂದದ ಬಿ ವೈ ರಾಘವೇಂದ್ರ ಮಾತನಾಡಿದರು. ಸಂಸ್ಥೆಯ ಟ್ರಸ್ಟಿಗಳಾದ ಅರುಣಾದೇವಿ, ಬಿ. ಆರ್. ಸುಭಾಷ್ ಮತ್ತು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್‍ಯ ಪ್ರೊ. ಚೈತನ್ಯಕುಮಾರ್, ಆಡಳಿತಾಧಿಕಾರಿ ಪ್ರೊ. ನಾಗರಾಜ್ ಹಾಜರಿದ್ದರು.