Malenadu Mitra
ರಾಜ್ಯ ಶಿವಮೊಗ್ಗ

ರಾಜ್ಯಪಾಲರ ಮಲ್ನಾಡ್ ಟೂರ್ ಹೇಗಿತ್ತು ಗೊತ್ತಾ ? ಮಳೆನಾಡಿನ ಸಿರಿ ಸವಿದ ಥಾವರ್‌ಚಂದ್ ಗೆಹ್ಲೋಟ್

ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಅಧಿಕೃತ ಕಾರ್ಯಕ್ರಮದ ಮೇಲೆ ಬಂದಿದ್ದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ಅವರು, ವಿವಿಯ ೬ ನೇ ಘಟಿಕೋತ್ಸವದಲ್ಲಿ ಪದವಿಪ್ರದಾನ ಮಾಡುವ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಎರಡು ದಿನಗಳ ಈ ಈ ಪ್ರವಾಸದಲ್ಲಿ ಅವರು ಪಾದರಸದಂತೆ ತಿರುಗಾಡಿ ಮಲೆನಾಡಿನ ಪ್ರವಾಸಿಗಳ ತಾಣಗಳ ಬಗ್ಗೆ ವಿಶೇಷವಾಗಿ ಆಕರ್ಷಿತರಾದರು. ಬುಧವಾರ ಪಿಇಎಸ್ ಕಾಲೇಜಿನ ಕಾರ್ಯಕ್ರಮದಲಿ ಭಾಗವಹಿಸಿದ ಬಳಿಕ ಸೀದಾ ಸಮೀಪದಲ್ಲಿಯೇ ಇರುವ ತಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಹುಲಿ, ಸಿಂಹಗಳಿರುವ ಆವರಣಕ್ಕೆ ಸಾರ್ವಜನಿಕರು ಬಳಸುವ ವಾಹನದಲ್ಲಿಯೇ ಸಫಾರಿ ಮಾಡಿ ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು.
ರಾತ್ರಿ ವಿಶ್ವ ವಿಖ್ಯಾತ ಜೋಗಜಲಪಾತ ವೀಕ್ಷಣೆಗೆ ಹೋಗಿದ್ದ ರಾಜ್ಯಪಾಲರು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಮುಂಜಾನೆ ಜೋಗದ ಸಿರಿಯನ್ನು ಕಣ್ತುಂಬಿಕೊಂಡರು. ಮಾತ್ರವಲ್ಲದೆ, ಜಲಪಾತದ ಎದುರು ಫೋಟೋ ತೆಗೆಸಿಕೊಂಡರು. ರಾಜ್ಯದ ಘನತೆವೆತ್ತ ರಾಜ್ಯಪಾಲರು ಮಲೆನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದ ಚಿತ್ರಗಳು ಎಲ್ಲರ ಗಮನ ಸೆಳೆದವರು.


ಈ ಸಂದರ್ಭ ಮಾತನಾಡಿದ ಅವರು, ಕರ್ನಾಟಕ ಇಲ್ಲಿನ ಪ್ರಕೃತಿ ಸೌಂದರ್ಯದಿಂದ ಉತ್ತಮ ಪ್ರವಾಸಿ ತಾಣವಾಗಿದೆ. ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಜೋಗಜಲಪಾತ ವೀಕ್ಷಣೆ ಬಳಿಕ ಶಿವಮೊಗ್ಗ ಕೃಷಿವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಅವರು, ಕಾಲೇಜ್ ಸಾಧನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭ ವಿವಿಯ ಕುಲಪತಿ ಡಾ.ಎಂ.ಕೆ.ನಾಯ್ಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Ad Widget

Related posts

ಸಿಗಂದೂರಲ್ಲಿ ಗುರು ಪೂರ್ಣಿಮೆ

Malenadu Mirror Desk

ನಿರ್ಮಲ ತುಂಗಾಭದ್ರಾ ಅಭಿಯಾನ : ನಾಳೆ ಶಿವಮೊಗ್ಗದಲ್ಲಿ ‘ತುಂಗಾ ಆರತಿ’

Malenadu Mirror Desk

ಸಂಭ್ರಮದ ನಾರಾಯಣಗುರು ಜಯಂತಿ, ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಈಡಿಗ ಸಂಘ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.