ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಮಾನತೆಯಿಲ್ಲದ ಪ್ರಸ್ತುತ ಬೈಲಾದಲ್ಲಿ ಬದಲಾವಣೆ ತಂದು ಮಹಾಸಭಾವನ್ನು ಸದೃಢಗೊಳಿಸಿ ಅಭಿವೃದ್ಧಿಪಡಿಸುವ ಉದ್ದೇಶವನಿಟ್ಟುಕೊಂಡು ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಎಸ್.ರಘುನಾಥ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಪ್ರಸ್ತುತ ಇರುವ ಬೈಲಾದ ಲೋಪದೋಷಗಳನ್ನು ಸಂಪೂರ್ಣವಾಗಿ ತಿದ್ದುಪಡಿಯ ಮೂಲಕ ಬದಲಾವಣೆ, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜ್ಯದ ವಿವಿಧ ವಲಯಗಳಿಂದ ಆಯ್ಕೆಯಾಗುವುದಕ್ಕೆ ಅವಕಾಶ, ಅಧಿಕಾರ ವಿಕೇಂದ್ರಿಕರಣ ಮಹಿಳೆಯರಿಗೆ ಹೆಚ್ಚನ ಅವಕಾಶ, ಕಚೇರಿಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗಣಕೀರಣ ಸೇರಿದಂತೆ ಹಲವಾರು ಬದಲಾವಣೆ ತರಲು ಬಯಸಿದ್ದೇನೆ ಎಂದರು.
ಮಹಾಸಭಾ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಮಹಾಸಭಾದ ಅಭಿವೃದ್ಧಿಗಾಗಿ ಸಮಾಜದ ಅನುಭವಿ ತಜ್ಞರ ಹಾಗೂ ಮಾರ್ಗದರ್ಶಕರ ಸಲಹಾ ಸಮಿತಿ ನೇಮಕ, ಸದಸ್ಯರ ಸಂಖೈ ೩ಲಕ್ಷಕ್ಕೆ ಹೆಚ್ಚಿಸಿ ಸಂಘಟನೆಯನ್ನು ಸಡೃಢಗೊಳಿಸುವುದು. ವಿವಿಧ ಸಮಿತಿಗಳ ರಚನೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ, ಯುವಕ
ಮತ್ತು ಯುವತಿಯರ ಉದ್ಯೋಗಕ್ಕಾಗಿ ಉಚಿತ ತರಬೇತಿ ಶಿಬಿರ ಹಾಗೂ ಉದ್ಯೋಗಮೇಳ ಆಯೋಜಿಸುವುದು. ಸಮಾಜದ ಪ್ರತಿಭಾನ್ವಿತರಿಗೆ ಸನ್ಮಾನಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದರು.
ಸುಮಾರು ೧೦ಸಾವಿರ ಬ್ರಾಹ್ಮಣ ದಾನಿಗಳಿಂದ 1ಲಕ್ಷ ರೂ.ನಂತೆ ದೇಣಿಗೆ ಸಂಗ್ರಹಿಸಿ 100 ಕೋಟಿ.ರೂ. ಸಂಗ್ರಹಿಸುವುದು. ವೇದಾ ಪಾಠಶಾಲೆ, ಪ್ರಾರ್ಥಮಿಕ ಪ್ರೌಢಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸುವುದು. ಪದವಿ, ಬಿಇ, ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು. ವೃದ್ದಾಶ್ರಮಗಳ ಸ್ಥಾಪನೆ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಮಹಾಸಭಾದ ಸಂಘಟನೆಗೆ ಹಾಗೂ ಅಭಿವೃದ್ಧಿಗೆ ದಿನಕ್ಕೆ 6ಗಂಟೆ ಮೀಸಲಿಡುತ್ತೇನೆ. ಮಹಾಸಭಾ ಹಾಗೂ ಬ್ರಾಹ್ಮಣರ ಅಭ್ಯುಧಯಕ್ಕೆ ಸಮರ್ಪಕವಾಗಿ ಸೇವೆಸಲ್ಲಿಸುತ್ತೇನೆಂದು ಭರವಸೆ ನೀಡಿದ ಅವರು, ಮತದಾರರು ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದಾರೆ. ಚುನಾವಣೆಯಲ್ಲಿ 41ಸಾವಿರ ಮತದಾರರು ಮತಚಲಾಯಿಸಲಿದ್ದು, ಡಿ.12 ರಂದು ಮೈಸೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ರಾಯಚೂರು ಕೇಂದ್ರದಲ್ಲಿ ಮತ್ತು 19 ರಂದು ಬೆಂಗಳೂರು ಕೇಂದ್ರದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರಿಗೆ ಚುನಾವಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ದತ್ತಾತ್ರಿ, ಜಗದೀಶ್ ಆಚಾರ್, ಸುದರ್ಶನ್, ಗುರುನಾಥ್, ರಾಘವೆಂದ್ರ, ಸುರೇಶ್, ಡಾ.ಸುಧಾಕರ್, ಸುಬ್ರಹ್ಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.