Malenadu Mitra
ರಾಜ್ಯ ಶಿವಮೊಗ್ಗ

ಕನ್ನಡ ಉಳಿಸಿ ಬೆಳೆಸುವ ಹೊಣೆಗಾರಿಕೆ ಕನ್ನಡಿಗರ ಮೇಲಿದೆ

ಕನ್ನಡ ನಾಡು. ನುಡಿ, ನೆಲ, ಜಲದ ಪ್ರಶ್ನೆ ಎದುರಾದಾಗ ಕನ್ನಡಿಗರು ಮಡಿವಂತಿಕೆ ತೊರೆದು ಒಕ್ಕೋರಲಿನಿಂದ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಕ್ರಾಂತಿರಂಗದ ರಾಜ್ಯಾಧ್ಯಕ್ಷ ಬಿ.ಎಚ್.ಮಂಚೇಗೌಡ ಟಿ.ಜಿ.ಕೊಪ್ಪ ಹೇಳಿದರು.
ಸೊರಬ ಪಟ್ಟಣದ ಹೊಸಪೇಟೆ ಹಕ್ಕಲು ಬಡಾವಣೆಯ ಶ್ರೀ ನಾರಾಯಣಗುರು ವೃತ್ತದಲ್ಲಿ ಕರ್ನಾಟಕ ಕ್ರಾಂತಿರಂಗ ಸೊರಬ ವತಿಯಿಂದ ಮಂಗಳವಾರ ಹಮ್ಮಿಕೊಂಡ ೬೬ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನಿತ್ ರಾಜಕುಮಾರ್ ಸ್ಮರಣಾರ್ಥ ರಕ್ತದಾನ ಮತ್ತು ನೇತ್ರದಾನ ಶಪಥ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಮಾತೃಭಾಷೆಯಾಗಿದ್ದು ಅದನ್ನು ಉಳಿಸಿಬೆಳೆಸುವ ಹೊಣೆಗಾರಿಕೆ ಕನ್ನಡಿಗರ ಮೇಲಿದೆ. ಕನ್ನಡಪರ ಹೋರಾಟಗಳಲ್ಲಿ ಕರ್ನಾಟಕ ಕ್ರಾಂತಿರಂಗ ಮುಂಚೂಣಿಯಲ್ಲಿದೆ ಎಂದ ಅವರು ಚಲನಚಿತ್ರನಟ ಪುನಿತ್ ರಾಜಕುಮಾರ್ ನಿಧನ ಅರಗಿಸಿಕೊಳ್ಳಲಿಕ್ಕಾಗದ್ದು. ಅವರ ಹೆಸರಿಯಲ್ಲಿ ನಾಡಿನಾದ್ಯಂತ ಅಭಿಮಾನಿಗಳು ರಕ್ತದಾನ ಶಿಬಿರ ಹಾಗೂ ನೇತ್ರದಾನಕ್ಕೆ ನೋಂದಣಿಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದು ಶ್ಲಾಘನೀಯ ಎಂದರು.
ಹಳೇಸೊರಬ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಮೋಹನಪ್ಪ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ತಾಲೂಕು ಎಸ್‌ಎನ್‌ಜಿವಿ ಅಧ್ಯಕ್ಷ ಶಿವಕುಮಾರ್ ಬಿಳವಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಮಕ್ಕಳು ನಾಡಗೀತೆ ಹಾಡಿ, ಕರ್ನಾಟಕ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಸಂದೇಶ್ ಕುಪ್ಪಗಡ್ಡೆ ವಂದಿಸಿ, ತಾಲೂಕು ಯುವ ಘಟಕದ ಅಧ್ಯಕ್ಷ ನಾಗರಾಜ್ ಹಳೇಸೊರಬ ನಿರೂಪಿಸಿದರು.
ಕರ್ನಾಟಕ ಹೋರಾಟಗಾರರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಆನಂದ್ ಕುಮಾರ್, ಎಸ್‌ಎನ್‌ಜಿವಿ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ಕರ್ನಾಟಕ ಕ್ರಾಂತಿರಂಗದ ತಾಲೂಕು ಅಧ್ಯಕ್ಷ ಚಂದ್ರಪ್ಪ ಮಾಸ್ತರ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಉಪ್ಪಳ್ಳಿ, ಖ್ಯಾತ ವೈದ್ಯ ಡಾ.ಎಂ.ಕೆ.ಭಟ್, ಕರ್ನಾಟಕ ಕ್ರಾಂತಿರಂಗದ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ದ್ರಾಕ್ಷಾಯಿಣಿ, ತಾಲೂಕು ಈಡಿಗ(ದೀವರ) ಸಂಘದ ಅಧ್ಯಕ್ಷ ಕೆ.ಅಜ್ಜಪ್ಪ, ತಾ.ಪಂ ಮಾಜಿ ಅಧ್ಯಕ್ಷರಾದ ಜೆ.ಶಿವಾನಂದಪ್ಪ, ಎಚ್.ಗಣಪತಿ, ಕೊಡಕಣಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣಪ್ಪ ಯಂಕೇನ್, ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಮಂಜಪ್ಪ ಸೇರಿದಂತೆ ಎಸ್‌ಎನ್‌ಜಿವಿ ಪದಾಧಿಕಾರಿಗಳು, ಕ್ರಾಂತಿರಂಗದ ಪದಾಧಿಕಾರಿಗಳು ಸೇರಿದಂತೆ ಕನ್ನಡ ಅಭಿಮಾನಿಗಳಿದ್ದರು.
ಪುನಿತ್ ರಾಜಕುಮಾರ್ ಸ್ಮರಣಾರ್ಥ ರಕ್ತದಾನ ಮತ್ತು ನೇತ್ರದಾನ ಶಪಥ ನೋಂದಣಿ ಕಾರ್ಯಕ್ರಮ ನಡೆಯಿತು.

Ad Widget

Related posts

ಸಮಗ್ರ ಅಭಿವೃದ್ಧಿಗೆ ನನ್ನ ಜತೆಗೆ ಅಧಿಕಾರಿಗಳು ಕೈಜೋಡಿಸಬೇಕು: ಮಧು ಬಂಗಾರಪ್ಪ

Malenadu Mirror Desk

ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ

Malenadu Mirror Desk

ಗೋಕರ್ಣ ದೇವಸ್ಥಾನ ಉಸ್ತುವಾರಿ ಶ್ರೀಕೃಷ್ಣ ಸಮಿತಿಗೆ : ಸ್ವಾಗತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.