Malenadu Mitra
ರಾಜ್ಯ ಶಿವಮೊಗ್ಗ

ಭದ್ರಾವತಿ 24 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನ ಬಂದಿದ್ದು ಹೇಗೆ ಗೊತ್ತಾ ?

ಭದ್ರಾವತಿ ಹಳೇನಗರದ ನಿರ್ಮಲಾ ಆಸ್ಪತ್ರೆಯ 24 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿರುವುದರಿಂದ ಆಸ್ಪತ್ರೆ ಮತ್ತು ನರ್ಸಿಂಗ್ ಹಾಸ್ಟೆಲ್ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಸೋಕಿತರನ್ನು ಆಸ್ಪತ್ರೆಯಲ್ಲಿ ಐಸೋಲೇಷನಲ್ಲಿರಿಸಲಾಗಿದೆ.
ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನಲ್ಲಿ ಭದ್ರಾವತಿಯ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಕಳೆದ ವಾರ ಶಿವಮೊಗ್ಗದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದ್ದರಿಂದ ಅಲ್ಲಿಯೇ ಪರೀಕ್ಷೆ ಬರೆದಿದ್ದ ಭದ್ರಾವತಿ ವಿದ್ಯಾರ್ಥಿಗಳಿಗೂ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೊದಲ ಹಂತದಲ್ಲಿ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು.
ಜಿಲ್ಲಾಡಳಿತ ಎರಡನೇ ಹಂತದಲ್ಲಿ ಕೊರೊನಾ ಸೋಂಕು ಪರೀಕ್ಷೆ ಮಾಡಿದಾಗ 24 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ ಪಟ್ಟಿರುವುದು ಸಾಬೀತಾಗಿದೆ. ಡಿಹೆಚ್‌ಒ ಮಾರ್ಗದರ್ಶನದಲ್ಲಿ ಗುರುವಾರ ತಹಸೀಲ್ದಾರ್ ಆರ್.ಪ್ರದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ನಗರಸಭಾ ಪೌರಾಯುಕ್ತ ಪರಮೇಶ್ ಮತ್ತು ಸಿಬ್ಬಂದಿಗಳು ಪೋಲೀಸ್ ಬಂದೋಬಸ್ತ್ ನೊಂದಿಗೆ ತೆರಳಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿದ್ದಾರೆ.

ಸೋಂಕಿತರೆಲ್ಲರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ಆಸ್ಪತ್ರೆಯನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತದೆ. ಆಸ್ಪತ್ರೆಯ ವೈದ್ಯರನ್ನು ಮತ್ತು ಸಿಬ್ಬಂದಿಗಳನ್ನು ಪರೀಕ್ಷಿಸಲಾಗುತ್ತಿದೆ. ಒಳ ರೋಗಿಗಳ ಬಗ್ಗೆ ಎಚ್ಚರ ವಹಿಸಲಾಗಿದೆ. ಓಮಿಕ್ರಾನ್ ಸೋಂಕಿನ ಪರೀಕ್ಷೆಗೂ ಕಳುಹಿಸಿಕೊಡಲಾಗಿದೆ

ಡಾ ಅಶೋಕ್, ತಾಲೂಕು ಆರೋಗ್ಯಾಧಿಕಾರಿ

ಉಪವಿಭಾಗಾಧಿಕಾರಿ ಡಾ.ಟಿ.ವಿ.ಪ್ರಕಾಶ್ ಸ್ಪಷ್ಟನೆ

ಶಿವಮೊಗ್ಗದ ನಂಜಪ್ಪ ಲೈಫ್‌ಕೇರ್ ಆಸ್ಪತ್ರೆಯಲ್ಲಿ 172ಮಂದಿ ನರ್ಸಿಂಗ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರೆಲ್ಲರನ್ನು ಪರೀಕ್ಷಿಸಲಾಗಿ ಓರ್ವ ವಿದ್ಯಾರ್ಥಿನಿಗೆ ಸೋಂಕು ಕಂಡು ಬಂದಿತ್ತು. 2 ನೇ ಬಾರಿ ಪರೀಕ್ಷಿದಾಗ ಯಾರಲ್ಲೂ ಸೋಂಕು ಕಂಡು ಬಂದಿಲ್ಲ. ನಂತರ 3 ಮತ್ತು 4 ನೇ ಅವಧಿಯಲ್ಲಿ ಪರೀಕ್ಷಿಸಿದಾಗ 24 ಮಂದಿಗೆ ಸೋಂಕಿರುವುದು ಕಂಡು ಬಂದಿದೆ. ಇದರಿಂದಾಗಿ ನರ್ಸಿಂಗ್ ಕಾಲೇಜು, ಹಾಸ್ಟೆಲ್, ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ 165 ಮಂದಿ ಒಳ ರೋಗಿಗಳನ್ನು ಮತ್ತು ವೈದ್ಯರನ್ನು ಹಾಗು ಸಿಬ್ಬಂದಿಗಳನ್ನು ಸಹ ಪರೀಕ್ಷೆಗೆ ಒಳ ಪಡಿಸಲಾಗಿದೆ. 24 ಗಂಟೆಗಳ ಕಾಲ ಯಾರನ್ನು ಒಳ ಹೋಗಲು ಬಿಡಲ್ಲ. ಇವರಲ್ಲಿ ಯಾರಿಗಾದರೂ ಪಾಸಿಟಿವ್ ಕಂಡು ಬಂದಲ್ಲಿ ಅವರೆಲ್ಲರ ಟ್ರಾವೆಲ್ ಹಿಸ್ಟರಿ ಪಡೆಯಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಡಾ: ಟಿ.ವಿ.ಪ್ರಕಾಶ್ ತಿಳಿಸಿದರು.

Ad Widget

Related posts

ಪ್ರತಿಭಟನೆ ವೇಳೆ ಉಪನ್ಯಾಸಕಿ ಅಸ್ವಸ್ಥ : ಎಂಎಲ್ಸಿ ಡಾ.ಧನಂಜಯ ಸರ್ಜಿರಿಂದ ಚಿಕಿತ್ಸೆ

Malenadu Mirror Desk

ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡಲ್ಲ; ಡಿ ಕೆ ಶಿವಕುಮಾರ್

Malenadu Mirror Desk

ಹಾಸ್ಟೆಲ್‌ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ, ಆಡಳಿತ ವ್ಯವಸ್ಥೆ ವಿರುದ್ದ ಹರಿಹಾಯ್ದ ವಿದ್ಯಾರ್ಥಿನಿಯರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.