Malenadu Mitra
ರಾಜ್ಯ ಶಿವಮೊಗ್ಗ

ಶಿಸ್ತು ಬದ್ಧ ಜೀವನಕ್ಕೆ ಕಾನೂನಿನ ಅರಿವು ಅವಶ್ಯಕ : ಹಿರಿಯ ಸಿವಿಲ್ ನ್ಯಾಯದೀಶೆ ಸರಸ್ವತಿ ಕೆ.ಎನ್

ವಿಶ್ವ ಮಾನವ ಹಕ್ಕು ದಿನಾಚರಣೆ

ಶಿವಮೊಗ್ಗ: ಶಿಸ್ತು ಬದ್ಧವಾಗಿ ಜೀವನ ನಡೆಸಲು ಕಾನೂನಿನ ಅರಿವು ಅತ್ಯವಶ್ಯಕ.
ಮನುಷ್ಯ ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನರು, ಪ್ರತಿಯೊಬ್ಬರು ಯಾವುದೇ ರೀತಿ ತಾರತಮ್ಯವಿಲ್ಲದ ಸ್ವಾತಂತ್ರ್ಯವನ್ನು ಹೊಂದುವ ಕಾನೂನು ಬದ್ಧ ಹಕ್ಕು ಹೊಂದಿರುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯದೀಶೆ ಸರಸ್ವತಿ ಕೆ.ಎನ್ ತಿಳಿಸಿದರು.

ಅವರು ಶುಕ್ರವಾರ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ ಇವರ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅವರು 1933 ರ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮವು ಮಾನವ ಹಕ್ಕುಗಳನ್ನು ಭಾರತದ ಸಂವಿಧಾನದಲ್ಲಿ ಅಥವಾ ಅಂತರರಾಷ್ಟ್ರೀಯ ಒಡಂಬಡಿಕೆಯಲ್ಲಿ ಖಾತ್ರಿಗೊಳಿಸಿರುವ ಹಾಗೂ ಭಾರತದ ನ್ಯಾಯಾಲಯಗಳಲ್ಲಿ ಜಾರಿಗೊಳಿಸುವಂತಹ ವ್ಯಕ್ತಿಗಳ ಬದುಕಿನ, ಸ್ವಾತಂತ್ರ್ಯದ, ಸಮಾನತೆಯ ಹಾಗೂ ಘನತೆಯ ಹಕ್ಕುಗಳು ಎಂದು ಗುರುತಿಸಲಾಗಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಮಾನವ ಹಕ್ಕುಗಳ ತತ್ವಗಳು ಹಾಗೂ ಮಾನದಂಡಗಳಿಗೆ ಭಾರತದಲ್ಲಿ ಒಂದು ವಿಶೇಷ ಹಾಗೂ ಮಹತ್ವದ ಸ್ಥಾನವಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಧ್ಯಕ್ಷರು, ಜಿಲ್ಲಾ ನ್ಯಾಯವಾದಿಗಳ ಸಂಘ ಎನ್.ದೇವೆಂದ್ರಪ್ಪ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ವರದಿಗಾರ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಶಿವಮೊಗ್ಗ ರಾಮಚಂದ್ರ ವಿ. ಗುಣಾರಿ ಹಾಜರಿದ್ದರು.
ಅಧ್ಯಕ್ಷತೆಯನ್ನು ಡಾ. ಎಂ.ಕೆ ವೀಣಾ ಪ್ರಾಚಾರ್ಯರು, ಸಹ್ಯಾದ್ರಿ ವಾಣಿಜ್ಯ ಕಾಲೇಜು ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಚಾಲಕ, ಮಾನವ ಹಕ್ಕು ಸಮಿತಿ ಡಾ.ಪ್ರಕಾಶ್ ಬಿ.ಎನ್, ಸಂಯೋಜಕ, ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ವಿಭಾಗ ಡಾ.ಅವಿನಾಶ್ ಟಿ, ಪಾಚಾರ್ಯರು, ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಡಾ. ಹೆಚ್ ಎಂ. ವಾಗ್ದೇಹಿ, ಡಾ. ಕೃಪಾಲಿನಿ ಹೆಚ್.ಎಸ್, ಲವ ಜೆ.ಆರ್ ಮತ್ತಿತರರು ಹಾಜರಿದ್ದರು.

Ad Widget

Related posts

ಸೊರಬದಲ್ಲಿ ವಿವಿಧ ಸಂಘಟನೆಗಳಿಂದ ಬಂದ್‍ಗೆ ಬೆಂಬಲ

Malenadu Mirror Desk

ಬೇಳೂರು ಬರೀ ಕೈ ಫಕೀರ, ವಿಜಯೇಂದ್ರರಿಗೆ 126 ಕೋಟಿ ರೂ.ಆಸ್ತಿ
ಆಯೋಗಕ್ಕೆ ಸಲ್ಲಿಸಿದ ಅಭ್ಯರ್ಥಿಗಳ ಆಸ್ತಿ ವಿವರ

Malenadu Mirror Desk

ಅಗತ್ಯ ವಸ್ತು ಬಿಟ್ಟು ಉಳಿದ ಮಳಿಗೆ ಬಂದ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.