Malenadu Mitra
ರಾಜ್ಯ ಶಿವಮೊಗ್ಗ

ಭರದ ಮತದಾನ, ಭರವಸೆಯಲ್ಲಿ ಅಭ್ಯರ್ಥಿಗಳು

ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆ

ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರದಲ್ಲಿ ಮತದಾನ ಭರದಿಂದ ಸಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಶೇ ೭೫ ಕ್ಕೂ ಹೆಚ್ಚು ಮತದಾನವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ಪುರಸಭೆಯ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದರೆ,ಸಂಸದ ಬಿ.ವೈ. ರಾಘವೇಂದ್ರ ಅವರು ಕೂಡಾ ಅದೇ ಬೂತ್‌ನಲ್ಲಿ ಮತದಾನ ಮಾಡಿದರು.

ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪಕ್ಷದ ಕಾರ್ಪೋರೇಟರ್‌ಗಳೊಂದಿಗೆ ಬಂದು ಮತಚಲಾಯಿಸಿದರು. ವಿಧಾನ ಪರಿಷತ್ ಸದಸ್ಯರ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ ಅವರು ಮತದಾನ ಮಾಡಿದರು. ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ, ಶಾಸಕ ಹಾಲಪ್ಪ ಹರತಾಳು ಅವರು ಸಾಗರ ಹಾಗೂ ಶಾಸಕ ಕುಮಾರ ಬಂಗಾರಪ್ಪ ಸೊರಬದಲ್ಲಿ ಮತಚಲಾವಣೆ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮತ ಹಾಕಿದರು. ಅವರಿಗೆ ಪಕ್ಷದ ಕಾರ್ಪೊರೇಟರ್‌ಗಳು ಸಾಥ್ ನೀಡಿದರು.

ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದ್ದು, ರಾಜ್ಯದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಿದೆ. ಶಿವಮೊಗ್ಗದಲ್ಲಿ ಅರುಣ್ ಅವರು ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ಗೆಲ್ಲಿಲಿದ್ದಾರೆ. ಪ್ರತಿಪಕ್ಷದವರ ಟೀಕೆಗಳಿಗೆ ಉತ್ತರಿಸುವುದಿಲ್ಲ. ಈ ಚುನಾವಣೆಯ ಫಲಿತಾಂಶವೇ ಅವರಿಗೆ ಉತ್ತರ ನೀಡಲಿದೆ

ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಗೆಲುವು ಖಚಿತ. ವಿಧಾನ ಪರಿಷತ್‌ನಲ್ಲಿ ಈ ಬಾರಿ ನಮಗೆ ಬಹುಮತ ಸಿಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಗ್ರಾಮ ಪಂಚಾಯಿತಿ ಸದಸ್ಯರು ಸರಕಾರದ ಪರ ನಿಂತು ಮತಚಲಾಯಿಸಿದ್ದಾರೆ

-ಕೆ.ಎಸ್.ಈಶ್ವರಪ್ಪ, ಸಚಿವ

Ad Widget

Related posts

ದುಡಿಮೆಗೆ ತಕ್ಕ ಪ್ರತಿಫಲ ದೊರಕಿಸಲು ಶಾಸನ ಸಭೆಯಲ್ಲಿ ಪ್ರಸ್ತಾವನೆ : ಶಾಸಕ ಹರತಾಳು ಹಾಲಪ್ಪ

Malenadu Mirror Desk

ಜೋಕಾಲಿಯಲ್ಲಿದ್ದ ಜವರಾಯ, ಆಡುವ ಕಂದನ ಸಾವು ನ್ಯಾಯವೇ ?

Malenadu Mirror Desk

ಈಶ್ವರಪ್ಪ ಪತ್ರವೂ… ಬಿಜೆಪಿಯ ಸಂಚಲನವೂ…

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.