Malenadu Mitra
ರಾಜ್ಯ ಶಿವಮೊಗ್ಗ

ಮೋಸದಿಂದ ಜಾಗ ವಶ: ಮಂಡಲೇಶ್ವರ ಸಮಿತಿ ಹೇಳಿಕೆ

ಶಿವಮೊಗ್ಗನ್ಯೂ ಮಂಡ್ಲಿಯ ಸರ್ವೇ ನಂ. ೨೫೫ರಲ್ಲಿ ಹೂವಿನಕೊಪ್ಪಲು ಇದ್ದು, ಇದನ್ನು ಹೂವಿನಕೊಪ್ಪಲು ಯಾನೆ ಮುಸಲ್ಮಾನ್ ಖಬರ್‍ಸಸ್ತಾನ್ ಎಂದು ಕೈಬರವಣಿಗೆಯಲ್ಲಿ ತಿದ್ದಲಾಗಿದೆ. ಮೋಸದಿಂದ ಇದನ್ನು ಖಬರ್‌ಸ್ತಾನವನ್ನಾಗಿ ಮಾಡಿಕೊಳ್ಳಲಾಗಿದೆ. ಸ. ನಂ. 254ರ 1 ಎಕರೆ 7 ಗುಂಟೆ ಜಾಗ ಹಿಂದು ಸ್ಮಶಾನನವಾಗಿದೆ. ಇದನ್ನೂ ಸಹ ಮುಸಲ್ಮಾನರ ಖಬರಸ್ತಾನ ಎಂದು ಮಾಡಿಕೊಳ್ಳಲಾಗಿದೆ ಎಂದು ಮಂಡ್ಲಿಯ ಮಂಡಳೇಶ್ವರ ಸ್ವಾಮಿ ಕಮಿಟಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿಯ ಕಾರ್‍ಯದರ್ಶಿ ಎಂ, ಸಣ್ಣಯ್ಯ, ಈ ಬಗ್ಗೆ ತಾವು ಸದ್ಯದಲ್ಲೇ ನ್ಯಾಯಾಲಯದ ಮೊರೆ ಹೋಗಲಿದ್ದೇವೆ. ಕಂದಾಯ ಇಲಾಖೆಯಲ್ಲಿ ನಡೆದಿರುವ ಕೆಲವು ಕೈಚಳಕದ ಬಗ್ಗೆ ಜಿಲ್ಲಾಧಿಕಾರಿ ತನಿಖೆ ಮಾಡಬೇಕು. ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಶಾಂತಿಭಂಗ ತರುವ ಉದ್ದೇಶದಿಂದ ಕೆಲವರು ಅನವಶ್ಯಕವಾಗಿ ಆಧಾರವಿಲ್ಲದ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಆ ಸ್ಥಳಕ್ಕೆ ಹೋಗಿ ನಮಾಜ್ ಮಾಡುತ್ತಿದ್ದಾರೆ. ಕೆಲವು ರಾಜಕಾರಣಿಗಳು ಇದಕ್ಕೆ ಬೆಂಬಲವಾಗಿದ್ದಾರೆ. ಈ ಜಾಗದ ಪಕ್ಕದಲ್ಲಿ ಹಿಂದು ಮನೆಗಳಿವೆ. ಮಂಡಲೇಶ್ವರ ದೇವಾಲಯವಿದೆ. ಇದು ಹಿಂದು ಅರಸರ ಸ್ಥಳ ಎನ್ನುವುದಕ್ಕೆ ಬಲವಾದ ಕುರುಹಾಗಿದೆ ಎಂದರು.

ಜಿಲ್ಲಾಧಿಕಾರಿ ಕೂಡಲೆ ಈ ಜಾಗಕ್ಕೆ ಫೆನ್ಸಿಂಗ್ ಹಾಕಿ ಲೈಟ್ ವ್ಯವಸ್ಥೆ ಮಾಡಬೇಕು. ಈ ಜಾಗವನ್ನು ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು.
1961ರಲ್ಲಿ ಗುಂಡುತೋಪು ಯಾನೆ ಖಬರ್‌ಸ್ತಾನ್ ಎಂದು ಕೈಬರವಣಿಗೆಯಲ್ಲಿ ತಿದ್ದಿರುವುದು ಮತ್ತು ಹಿಂದಿನ ಪಹಣಿಯಲ್ಲಿ ಗುಂಡುತೋಪು ಎಂದಿರುವುದುನ್ನು ಪರಿಶೀಲಿಸಿ ಪ್ರಾಚ್ತುವಸ್ತು ಇಲಾಖೆಯವರು ಇದನ್ನು ಸಂರಕ್ಷಿಸಲು ಆದೇಶಿಸಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಮಿಟಿಯ ಉಪಾಧ್ಯಕ್ಷ ಶಂಕರ್ ನಾಯ್ಕ್,ಮುಖಂಡರಾದ, ಮಂಜಪ್ಪ, ಶ್ರೀನಿವಾಸ , ಶಾಂತರಾಜ್, ರೇವಣ್ಣ, ಮಂಜಪ್ಪ ಮತ್ತಿತರರು ಇದ್ದರು..

Ad Widget

Related posts

ಶಿವಮೊಗ್ಗ ನಗರದಲ್ಲಿ ಕೊರೊನ ಹೆಚ್ಚಳ

Malenadu Mirror Desk

ಘನತ್ಯಾಜ್ಯ ತಿಂದು ಜಾನುವಾರು ಸಾವು, ಅವ್ಯವಸ್ಥೆಯ ಆಗರವಾಗಿರುವ ವಿಲೇವಾರಿ ಘಟಕ

Malenadu Mirror Desk

ನನ್ನ ಮೇಲೆ ಯಾವುದೇ ಪೋಕ್ಸೋ ಕೇಸ್ ಇಲ್ಲ, ನಾನು ಶುಭ್ರ : ಕೆ.ಎಸ್.ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.