Malenadu Mitra
ರಾಜ್ಯ ಶಿವಮೊಗ್ಗ

ನಾಳೆ ರಂಗಮಂದಿರದಲ್ಲಿ ದತ್ತಿ ಉಪನ್ಯಾಸ


ಶರಣ ಸಂಗಮ ಮತ್ತು ಹುಣಸಘಟ್ಟದ ಎಚ್.ಎಂ. ಮಲ್ಲಿಕಾರ್ಜುನಪ್ಪ, ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶಾರದಾ ಚಂದ್ರಶೇಖರಪ್ಪ ಇವರ ದತ್ತಿ ಉಪನ್ಯಾಸವನ್ನು ಕುವೆಂಪು ರಂಗಮಂದಿರದಲ್ಲಿ ಡಿ. ೨೦ರಂದು ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಶಾಸಕ ಎಚ್. ಎಂ. ಚಂದ್ರಶೇಖರಪ್ಪ, ಈ ಕಾರ್‍ಯಕ್ರಮದ ಸಾನಿಧ್ಯವನ್ನು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಬಸವಕೇಂದ್ರದ ಬಸವಮರುಳಸಿದ್ದರು ವಹಿಸುವರು. ಅಧ್ಯಕ್ಷತೆಯನ್ನು ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ವಹಿಸುವರೆಂದರು.
ಮೂಲತಃ ಶಿವಮೊಗ್ಗದವರಾದ ಹಾಲಿ ಇನ್ಫೋಸಿಸ್‌ನ ಶಿಕ್ಷಣ ತರಬೇತಿ ಮತ್ತು ಮೌಲ್ಯಮಾಪನ ಕೇಂದ್ರದ ಪ್ರಾಂಶುಪಾಲರಾಗಿರುವ ಡಿ.ಎಲ್. ಲಕ್ಮೀ ಅವರು ಮುಖ್ಯ ಅತಿಥಿಯಾಗಿರುವರು ಮತ್ತು ಅವರನ್ನು ಸನ್ಮಾನಿಸಲಾಗುವುದು. ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ ಯಡಗೆರೆ ಮತ್ತು ಕೆ. ವಿ. ಶಿವಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ರವಿ ಆಗಮಿಸುವರೆಂದರು.
ದತ್ತಿಯ ವಿಶೇಷ ಉಪನ್ಯಾಸವನ್ನು ಚಿಕ್ಕಮಗಳೂರಿನ ಸಾಹಿತಿ ಚಟ್ನಳ್ಳಿ ಮಹೇಶ್ ನೆರೇವೇರಿಸುವರು. ಎಧಂರು.
ಪತ್ರಿಕಾಗೋಷ್ಟಿಯಲ್ಲಿ ಪಾಲಿಕೆ ಸದಸ್ಯ ಎಚ್. ಸಿ. ಯೋಗೇಶ್ ಮತ್ತು ಕಾಂಗ್ರೆಸ್ ಮುಖಂಡ ಎಚ್.ಎಂ ಮಧು, ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಹಾಜರಿದ್ದರು.


ಮೂರು ತಿಂಗಳ ಹಿಂದೆ ನಗರದ ವಿನೋಬನಗರದ ಶಿವಾಲಯದ ಬಳಿ ಸ್ಮಾರ್ಟ್ ಸಿಟಿಯ ಅವೈಜಾನಿಕ ರಸ್ತೆ ಕಾಮಗಾರಿಗೆ ಬಲಿಯಾದ ಗೋಪಾಳದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರಂಗನಾಥ ಅವರ ಪುತ್ರಿ ಯು. ಆರ್. ಶ್ರೀನಿಧಿ ಬೆಂಗಳೂರಿನಲ್ಲಿ ಇಂಜಿನೀಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಅವಳ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಎಚ್.ಎಂ. ಮಲ್ಲಿಕಾರ್ಜುನಪ್ಪ ಟ್ರಸ್ಟ್ ಭರಿಸಲಿದೆ. ಈ ವಿದ್ಯಾರ್ಥಿನಿ ಸಮಾರಂಭದಲ್ಲಿ ಹಾಜರಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿನಿ ಶಿಕ್ಷಣ ದಾಸೋಹದ ಸನ್ಮಾನ ಪಡೆಯುವರು.

ಎಚ್. ಎಂ ಚಂದ್ರಶೇಖರಪ್ಪ.

Ad Widget

Related posts

ಯಡಿಯೂರಪ್ಪ ಕುಟುಂಬ ಸೋಲಿಸುತ್ತೇವೆ: ಶಾಂತವೀರಪ್ಪಗೌಡ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂಡಾಯ ಅಭ್ಯರ್ಥಿ ಪರ ನಿಂತ ಹಿರಿಯ ನಾಯಕ

Malenadu Mirror Desk

ತಡರಾತ್ರಿ ಅಥವಾ ನಾಳೆ ಶಿವಮೊಗ್ಗ ಕ್ಷೇತ್ರ ಅಭ್ಯರ್ಥಿ ಘೋಷಣೆ : ಯಡಿಯೂರಪ್ಪ ಹೇಳಿಕೆ

Malenadu Mirror Desk

ಬಡವರ ಭೂಮಿ ತೆರವಿಗೆ ಕಾರಣರಾದ ಶಾಸಕರನ್ನು ಸೋಲಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.