Malenadu Mitra
ರಾಜ್ಯ ಶಿವಮೊಗ್ಗ

ವ್ಯಕ್ತಿತ್ವ ಇರುವವರಿಂದ ಮಾತ್ರ ಕಟ್ಟುವ ಕೆಲಸ ಸಾಧ್ಯ

ಸುಂದರೇಶ್ ಸ್ಮರಣೆಯಲ್ಲಿ ಜಾನಪದ ವಿದ್ವಾಂಸ ಪ್ರೊ. ರಾಮಚಂದ್ರೇಗೌಡ ಹೇಳಿಕೆ

20ನೆಯ ಶತಮಾನ ಕಟ್ಟುವ ಕಾಲಘಟ್ಟವಾಗಿತ್ತು. ಈಗ ಉಳಿಸಿಕೊಳ್ಳುವ ಕಾಲಮಾನವಾಗಿದೆ. ಈ ಕಟ್ಟುವ ಕ್ರಿಯೆ ವ್ಯಕ್ತಿತ್ವ ಇರುವವರಿಂದ ಮಾತ್ರ ಸಾಧ್ಯ ಎಂದು ಜಾನಪದ ವಿದ್ವಾಂಸ, ಮೈಸೂರಿನ ಪ್ರೊ. ಹಿ. ಶಿ. ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.
ಶಿವಮೊಗ್ಗದ ನ್ಯಾಷನಲ್  ಬಿ. ಇಡಿ ಕಾಲೇಜಿನಲ್ಲಿ ರೈತ ಸಂಘದ ರೂವಾರಿ ಆಗಿದ್ದ ಎನ್. ಡಿ. ಸುಂದರೇಶ್ ಅವರ ಸ್ಮರಣಾರ್ಥ ಮಂಗಳವಾರ ಏರ್ಪಡಿಸಲಾಗಿದ್ದ ಕಾರ್‍ಯಕ್ರಮವನ್ನು ಜ್ಯೋತಿ ಬೆಳಗಿಸಿ, ಸುಂದರೇಶ್ ಭಾವಚಿತ್ರಕ್ಕೆ ಪುಷ್ಪಾರ್ಚನ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು.
 ನಾವು ಹಿರಿಯರನ್ನು ಅಧರ್ಶವಾಗಿಟ್ಟುಕೊಳ್ಳಬೇಕು.  ಇಲ್ಲವಾದಲ್ಲಿ ಸಾಂಸ್ಕೃತಿಕತೆ ಉಳಿಯುವುದಿಲ್ಲ.  ಭೌತಿಕವಾಗಿ ಅವರು ಮಾದರಿಯಾಗುತ್ತಾರೆ. ಯಾವತ್ತೂ ನಮ್ಮ ಕೆಲಸದಲ್ಲಿ ಅವರ ಛಾಯೆ, ಇರುತ್ತದೆ. ಮತ್ತೆ ಮತ್ತೆ ಕಟ್ಟುವ ಪ್ರಕ್ರಿಯೆಯನ್ನು ಮಾಡುತ್ತೇವೆ.  ಸಮಗ್ರ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಲೂ ಸಹ ಇದು ಕಾರಣವಾಗುತ್ತದ ಎಂದರು.
ಸುಂದರೇಶ್ ಅವರು ಸಾತ್ವಿಕ, ನಿಷ್ಕಲ್ಮಶ, ದ್ವೇಷರಹಿತ ವ್ಯಕ್ತಿಯಾಗಿದ್ದರು. ಕಟ್ಟುವ ಕ್ರಿಯೆ ಬಗ್ಗೆ ಸದಾ ಎಚ್ಚರವಿದ್ದರು. ಗೋಪಾಲಗೌಡ, ಕಾಗೋಡು ಚಳವಳಿ ಮೂಲಕ ಈ ಜಿಲ್ಲೆಯಲ್ಲಿ ಹಲವರು ರೈತ ಚಳವಳಿ ಮಾದರಿಯಲ್ಲೇ ಹೋರಾಟ ಮತ್ತು  ಸಂಸ್ಕೃತಿಯನ್ನು ಕಟ್ಟಿದ್ದಾರೆ. ಅದೇ ರೀತಿ ರಾಜಕೀಯ ಮತ್ತು ಸಾಹಿತ್ಯದಲ್ಲಿಲ್ಲಿಯೂ ಮಾದರಿಯಾಗಿದೆ.  ಸುಂದರೇಶ್ ಅವರ ಬಗ್ಗೆ ತಾನು ಸಹ್ಯಾದ್ರಿಯ ಸಿರಿ ಎಂಬ ಪುಸ್ತಕನ್ನು ಸಂಗ್ರಹಿಸಿ ಕೊಟ್ಟಿದ್ದನ್ನು ಈ ವೇಳೆ ಅವರು ನೆನೆಪಿಸಿದರು.  ಮರೆಯಲಾಗದ ವ್ಯಕ್ತಿತ್ವ ಅವರದ್ದಾಗಿತ್ತು, ಇನ್ನೊಬ್ಬ ರೈತ ಮುಖಂಡ ನಂಜುಂದಸ್ವಾಮಿ ಮತ್ತು ಎಚ್.ಎಸ್. ರುದ್ರಪ್ಪ ಸಹ ರೈತ ಚಳವಳಿಯ ಮಾದರಿ ನಾಯಕರು ಎಂದು ವರ್ಣಿಸಿದ ರಾಮಚಂದ್ರೇಗೌಡ, ಈಗ ಕಟ್ಟುವವರು ಒಬ್ಬರಾದರೆ ಬಳಸಿಕೊಳ್ಳುವವರು ಇನ್ನೊಬ್ಬರಾಗಿದ್ದರೆ. ಬಹುರಾಷ್ಟ್ರೀಯ ಕಂಪನಿಗಳು ಈಗ ಬಳಕೆದಾರರಾಗಿದ್ದಾರೆ.  ಅವರು ನಮ್ಮ ಸಂಪನ್ಮೂಲ ಖಾಲಿಯಾಗುವಷ್ಟು ಬಳಸಿಕೊಳ್ಳುತ್ತಿದ್ದಾರೆಂದರು.
 ಹಿಂದಿನ ನಾಯಕರು ಕಟ್ಟಿಕೊಟ್ಟ ಚಳವಳಿ ಈಗಿಲ್ಲ. ಈಗ ವ್ಯಕ್ತಿತ್ವವನ್ನೇ ಒಡೆಯುವ ಕಾಲ ಎದುರಾಗಿದೆ.  ರೈತ ಶಕ್ತಿಯಾಗಿದ್ದ ಈ ನಾಯಕರೆಲ್ಲ ಇಂದಿಗೂ ಮಾರ್ಗದರ್ಶಿಯಾಗಿದ್ದಾರೆ  ಎಂದರು.
 ಅತಿಥಿಗಳಾಗಿ ಎನ್ ಇ ಎಸ್ ಉಪಾಧ್ಯಕ್ಷ ಅಶ್ವತ್ಥನಾರಾಯಣ ಶ್ರೇಷ್ಠಿ , ಶೋಭಾ ಸುಂದರೇಶ್,  ಬಿ. ಇಡಿ ಕಾಲೇಜಿನ ಪ್ರಾಚಾರ್‍ಯ ಪ್ರೊ. ಚಿದಾನಂದ ಹಾಜರಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೊ. ರಾಮಚಂದ್ರೇಗೌಡ  ಮತ್ತು ಶೋಭಾ ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು.  ನಂತರ ಸುಂದೃಸ್ ಕುಇರತಿಉ ಕವನ ವಾಚನ ನಡೆಯಿತು. ಇದರಲ್ಲಿ ಆರ್.ಎನ್. ಈಶ್ವರಪ್ಪ, ಮಂಜುನಾಥ ಬುಳ್ಳಾಪುರ, ಲೋಕೇಶ್ ಮಕರಿ, ಪ್ರೊ. ಸತ್ಯನಾರಾಯಣ, ನಾಗರತ್ನಾ, ಸುಜಾತಾ ಮೊದಲಾದವರು ಪಾಲ್ಗೊಂಡರು.

ನಾಡಿನಲ್ಲಿ ಈಗ ವಿಗ್ರಹಗಳಿಗೆ ಮಸಿ ಬಳಿಯುವ ಕಾಲ ಎದುರಾಗಿದೆ. ಪಂಪ, ವಚಕಾರರು, ದಾಸರುನ್ನು ನೆನೆಪಿಸಿಕೊಂಡು ನಾವು ನಾಡನ್ನು ಕಟ್ಟಬೇಕಿದೆ. ಬಸವಣ್ಣ, ಅಲ್ಲಮರಂತಹವರನ್ನು  ಈ ಜನ್ಮದಲ್ಲಿ ನಮ್ಮಿಂದ ಅರ್ಥ ಮಾಡಿಕೊಳ್ಳಲು ಸಾಧವಿಲ್ಲ.  ಅದಕ್ಕಾಗಿಯೇ ಎಲ್ಲವನ್ನೂ ಒಡೆಯುವ ಸ್ಥಿತಿ ಎದುರಾಗಿದೆ. ಭಾಷೆ, ಧರ್‍ಮದ ಹೆಸರಿನಲ್ಲಿ ವಿವಾದ ನಡೆದಿದೆ.

ರಾಮಚಂದ್ರೇಗೌಡ

Ad Widget

Related posts

ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಮಾಕ್ ಡ್ರಿಲ್ : ಬೆಂಕಿ ನಂದಿಸಿ, ಪ್ರಯಾಣಿಕರ ರಕ್ಷಣೆ

Malenadu Mirror Desk

ಮೂರು ಕ್ಷೇತ್ರಗಳ ಕಗ್ಗಂಟು, ಕಾಂಗ್ರೆಸ್ ಗೆ ಅನಿವಾರ್ಯವೆ ಆಯನೂರು ನಂಟು, ಶಿಕಾರಿಪುರ ನಿಗೂಢ, ಗ್ರಾಮಾಂತರಕ್ಕೆ ಯಾರು ಪಲ್ಲವಿ,ಯಾವುದು ಚರಣ ?

Malenadu Mirror Desk

ತಡರಾತ್ರಿ ಅಥವಾ ನಾಳೆ ಶಿವಮೊಗ್ಗ ಕ್ಷೇತ್ರ ಅಭ್ಯರ್ಥಿ ಘೋಷಣೆ : ಯಡಿಯೂರಪ್ಪ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.