Malenadu Mitra
ರಾಜ್ಯ ಶಿವಮೊಗ್ಗ

ಯುವಜನರು ದುಶ್ಚಟಗಳಿಂದ ದೂರ ಇರಬೇಕು: ಕಾರ್ತಿಕೇಯ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಯೋಗೇಂದ್ರ ಶ್ರೀಗಳು

ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಯುವಜನರು ಆಟೋಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ದುಶ್ಚಟಗಳಿಂದ ದೂರ ಇರಬೇಕೆಂದು ಸಾರಗನ ಜಡ್ಡು ಕಾರ್ತಿಕೇಯ ಕ್ಷೇತ್ರದ ಶ್ರೀ ಯೋಗೇಂದ್ರಗುರುಗಳು ಹೇಳಿದರು.
ಕಾರ್ತಿಕೇಯ ಕ್ಷೇತ್ರದಿಂದ ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕಲ್ಲುಹಳ್ಳ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಕಾರ್ತಿಕೇಯ ಕಪ್-೨೦೨೧ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಕ್ರೀಡೆಗಳು ಯುವ ಸಮುದಾಯದಲ್ಲಿ ಶಿಸ್ತಬದ್ಧ ಜೀವನವನ್ನು ರೂಪಿಸುತ್ತವೆ. ಪುನೀತ್ ರಾಜ್‌ಕುಮಾರ್ ಯುವಜನರಿಗೆ ಒಂದು ಆದರ್ಶವಾಗಿದ್ದಾರೆ. ಈ ಕಾರಣದಿಂದ ಈ ಗ್ರಾಮಾಂತರ ಪ್ರದೇಶದಲ್ಲಿ ಈ ಕ್ರಿಡಾಕೂಟ ಆಯೋಜಿಸಲಾಗಿದೆ ಎಂದು ಶ್ರೀಗಳು ಹೇಳಿದರು.

ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರ ದೇಗುಲದ ಧರ್ಮದರ್ಶಿಗಳಾದ ಡಾ.ಎಸ್.ರಾಮಪ್ಪ ಅವರು ಮಾತನಾಡಿ, ಪುನೀತ್ ರಾಜ್ ಕುಮಾರ್ ಒಂದು ಶಕ್ತಿಯಾಗಿದ್ದರು. ಅವರು ಮಾಡಿದ ಕೆಲಸ ಯುವಜನರಿಗೆ ಸ್ಫೂರ್ತಿದಾಯಕವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಯುವಜನರು ಹೆಚ್ಚು ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ಆರೋಗ್ಯವಾಗಿ ಚಟುವಟಿಕೆಯಿಂದ ಇರಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ರಾಮಚಂದ್ರ, ವಕೀಲರಾದ ಎನ್.ಪಿ.ಧರ್ಮರಾಜ್, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಭವಾನಿ ದಿವಾಕರ್,ರಾಜೇಶ್ ಬುಕ್ಕಿವರೆ,ವೀರೇಶ್, ರಘುಪತಿ,ಈಶ್ವರಪ್ಪ ಗೌಡ್ರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Ad Widget

Related posts

ಹರಿಗೆಯಲ್ಲಿ ಯುವಕನ ಕೊಲೆ

Malenadu Mirror Desk

ತುಂಗಾ ಸೇತುವೆಯಿಂದ ಹೊಳೆಗೆ ಹಾರಿದ ಯುವಕ, ಅದೃಷ್ಟವಶಾತ್ ಬದುಕುಳಿದ ಯುವಕನ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

Malenadu Mirror Desk

ಸಿಗಂದೂರು ಅದ್ಧೂರಿ ಜಾತ್ರೆಗೆ ತೆರೆ
ಗಾನಸುಧೆಯಲ್ಲಿ ಮಿಂದೆದ್ದ ಹಿನ್ನೀರು ಭಾಗದ ಭಕ್ತರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.