ರಿಪ್ಪನ್ ಪೇಟೆ ಸಮೀಪದ ಗರತಿ ಕೆರೆಯಲ್ಲಿ ಬುಧವಾರ ತಡರಾತ್ರಿ ತನ್ನ ಸ್ನೇಹಿತರಿಂದಲೇ ವ್ಯಕ್ತಿಯೊರ್ವ ಕೊಲೆಯಾಗಿ ಶವ ಗರತಿ ಕೆರೆ ಗ್ರಾಮದ ಆ ವುಕ ರಸ್ತೆಯ ಕೆರೆಯಲ್ಲಿ ಪತ್ತೆಯಾಗಿದೆ.
ಗರತಿ ಕೆರೆ ಗ್ರಾಮದ ಸತೀಶ್ ಶೆಟ್ಟಿ. ಕೋಳಿ ಪಯಾಜ್. ಕೃಷ್ಣ ಎಂಬ ಸ್ನೇಹಿತರುಗಳು ಸೇರಿ ಬುಧವಾರ ತಡರಾತ್ರಿ ಪಾರ್ಟಿ ಮಾಡುವಾಗ ಮೂವರ ನಡುವೆ ಜಗಳ ಉಂಟಾಗಿ ಕೋಳಿ ಪಯಾಜ್ ಹಾಗೂ ಕೃಷ್ಣ ಸೇರಿ ಸತೀಶ್ ಶೆಟ್ಟಿ ಗೆ ಕೊಲೆ ಮಾಡಿ ಗರತಿ ಕೆರೆ ಗ್ರಾಮದ ಮೂಲ ಮೋಹನ್ ಕುಮಾರ್ ಅವರಿಗೆ ಸೇರಿದ ವೈನ್ ಶಾಪ್ ಸಮೀಪದಲ್ಲಿರುವ ಕೆರೆಗೆ ಶವನ್ನು ಬಿಸಾಡಿ ಹೋಗಿದ್ದರು.
ಗ್ರಾಮಸ್ಥರು ಕೋಳಿ ಪಯಾಜ್ ನನ್ನು ಹಿಡಿದು ಸರಿಯಾಗಿ ರಿಪೇರಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೋರ್ವ ಆರೋಪಿ ಕೃಷ್ಣ ನಾಪತ್ತೆಯಾಗಿದ್ದು ಪೊಲೀಸರು ಹಾಗೂ ಗ್ರಾಮಸ್ಥರು ಆರೋಪಿಯ ಪತ್ತೆಗಾಗಿ ಹುಡುಕಾಡುತ್ತಿದ್ದಾರೆ. ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ