ಶಿವಮೊಗ್ಗ ತಾಲೂಕು ಪುರದಾಳು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 6 ಮಂದಿ ಮಹಿಳೆಯರೇ ಗೆಲುವು ಸಾಧಿಸುವ ಮೂಲಕ ಪ್ರಮೀಳೆಯರೇ ಸ್ಟಾಂಗ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಡಿಸೆಂಬರ್ 27 ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಯಿತು. ಪಂಚಾಯಿತಿ ಕೇಂದ್ರ ಸ್ಥಾನ ಪುರದಾಳು ಗ್ರಾಮದಲ್ಲಿ ತಲಾ ಎರಡು ಮಹಿಳೆ ಹಾಗೂ ಪುರುಷರಿಗೆ ಸ್ಥಾನ ಮೀಸಲಾಗಿತ್ತು. ಆದರೆ ಅಂತಿಮವಾಗಿ ಮೂವರು ಮಹಿಳೆಯರು ಗೆಲುವಿನ ನಗೆ ಬೀರಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರದೀಪ್ ಹೆಬ್ಬೂರು ಅತೀ ಹೆಚ್ಚು (504) ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರೆ, ಕುಸುಮಾ ಜಗದೀಶ್(೪೦೦) ಮಾನಸ (386) ಹಾಗೂ ಭಾರತೀ ನಾಗರಾಜ್ (339) ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ಚಿತ್ರಶೆಟ್ಟಿಹಳ್ಳಿ ಮಹಿಳಾ ಮೀಸಲು ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಮಲಾಕ್ಷಿ ಉಮಾಪತಿ ಜಯಶಾಲಿಯಾಗಿದ್ದು, ಪ್ರತಿಸ್ಪರ್ಧಿ ಅಕ್ಷತಾ ಸುಧಾಕರ್ ಅವರ ವಿರುದ್ಧ ಕೇವಲ 2 ಮತಗಳಿಂದ ವಿಜಯಿಯಾಗಿದ್ದಾರೆ.
ಗುಡ್ಡದ ಹರಕೆರೆಯಿಂದ ನಾಗವೇಣಿ ಶಾಂತ್‌ಕುಮಾರ್ ಹಾಗೂ ಗಿರೀಶ್ ಆಯ್ಕೆಯಾಗಿದ್ದಾ. ಅನುಪಿನಕಟ್ಟೆಯಿಂದ ರಾಮು ಹಾಗೂ ಲಕ್ಷಮೀಬಾಯಿ ಕೃಷ್ಣಾನಾಯ್ಕ ಆಯ್ಕೆಯಾಗಿದ್ದಾರೆ.