Malenadu Mitra
ರಾಜ್ಯ ಶಿವಮೊಗ್ಗ

ವಾಣಿಜ್ಯ ಮತ್ತುಕೈಗಾರಿಕಾ ಸಂಘದ ಸದಸ್ಯತ್ವ ಹೆಚ್ಚಳಕ್ಕೆ ಚಿಂತನೆ

ಸದಸ್ಯರ ಸಹಕಾರ ಹಾಗೂ ಹೊಸ ಸದಸ್ಯರ ಸದಸ್ಯತ್ವ ಹೆಚ್ಚಿಸುವಜತೆಯಲ್ಲಿ ಸಂಘ ಮುನ್ನಡೆಸಲುಅಗತ್ಯಕ್ರಮ ವಹಿಸಲಾಗುವುದುಎಂದು ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದ ನೂತನ ಅಧ್ಯಕ್ಷ ಮಥುರಾಎನ್.ಗೋಪಿನಾಥ್ ಹೇಳಿದರು.
ನಗರದ ಸಹ್ಯಾದ್ರಿ ಸ್ನೇಹ ಸಂಘದ ವತಿಯಿಂದ ಮಥುರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ಸಂಘ ಸಂಸ್ಥೆ ಸದೃಢವಾಗಿ ನಡೆಯಲು, ಪ್ರಾಮಾಣಿಕವಾಗಿ ಮುನ್ನಡೆಯಬೇಕಾದರೆ ಸದಸ್ಯರ ಸಹಕಾರ ಮತ್ತು ಹೊಸ ಹೊಸ ಸದಸ್ಯರ ಸೇರ್ಪಡೆಯು ಮುಖ್ಯಎಂದು ತಿಳಿಸಿದರು.

ಈಗಾಗಲೇ ಶಿವಮೊಗ್ಗ ನಗರದಅಭಿವೃದ್ಧಿಗೆ, ಉದ್ದಿಮೆದಾರ ಹಾಗೂ ಕೈಗಾರಿಕಾ ಸಮಸ್ಯೆಗಳ ಪರಿಹಾರಕ್ಕೆ ಆಡಳಿತ ಮಂಡಳಿಯ ಸಹಕಾರದಿಂದ ಸಂಪೂರ್ಣ ಪ್ರಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ಸಂಘದಎಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸೋಣಎಂದರು.

ಸೂಡಾಅಧ್ಯಕ್ಷಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದರಾಜ್ಯದಲ್ಲಿಯೇಒಂದು ಮಾದರಿ ಸಂಸ್ಥೆಯಾಗಿದೆ.ಮೂರು ವರ್ಷಗಳಲ್ಲಿ ಅತ್ತ್ಯುತ್ತಮ ಸೇವೆ ಮಾಡಿದನ್ನು ನಾವೆಲ್ಲರೂ ನೋಡಿದ್ದೇವೆ ಎಂದು ಹೇಳಿದರು.

ನೂತನ ಅಧ್ಯಕ್ಷಎನ್.ಗೋಪಿನಾಥ್‌ ಅವರಿಗೆ ಸಹ್ಯಾದ್ರಿ ಸ್ನೇಹ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕಗಣೇಶ್‌ಎಂ.ಅಂಗಡಿ, ಕಾರ್ಯಕ್ರಮದಲ್ಲಿ ಡಾ. ಪರಿಸರ ನಾಗರಾಜ್, ಮಲ್ಲಿಕಾರ್ಜುನ್, ಮರುಳೇಶ್, ಸುರೇಶ್, ಜೆಸಿ ಮತ್ತುರೋಟರಿ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

Ad Widget

Related posts

ಉಂಬ್ಳೆಬೈಲ್ ಬಳಿ ಬಸ್‌ಗಳ ಮುಖಾಮುಖಿ ಡಿಕ್ಕಿ: 40 ಕ್ಕೂ ಹೆಚ್ಚು ಮಂದಿಗೆ ಗಾಯ

Malenadu Mirror Desk

ಭಗವಾದ್ವಜ ಹೇಳಿಕೆಗೆ ಈಗಲೂ ಬದ್ಧ ಎಂದ ಈಶ್ವರಪ್ಪ , ಹೇಳಿಕೆ ವಿರುದ್ಧ ದೂರು ನೀಡಿರುವ ಆಪ್ ಸಂಸದ

Malenadu Mirror Desk

ಬಿಜೆಪಿ- ಜೆಡಿಎಸ್ ನಡುವೆಯೇ ಪೈಪೋಟಿ, ಅನುಕಂಪದ ಮುಂದೆ ಆರ್ಥಿಕ ಬಲದ ಸವಾರಿ 

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.