ಶಿವಮೊಗ್ಗ ಜಿಲ್ಲೆ ಭದ್ರಾವತಿ ಪಟ್ಟಣದಲ್ಲಿನ ಮಂಜುನಾಥ ಸಾಮಿಲ್ ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಬುಧವಾರ ರಾತ್ರಿ ಹೊತ್ತಿಕೊಂಡಿದ್ದ ಬೆಂಕಿ ಇಡೀ ಸಾಮಿಲ್ ಮತ್ತು ಸುತ್ತಲ ಪ್ರದೇಶಕ್ಕೆ ಆವಸಿದೆ. ನಾಗರಾಜ್ ಎಂಬುವವರಿಗೆ ಸೇರಿರುವ ಸಾಮಿಲ್ ಇದಾಗಿದ್ದು, ತರೀಕೆರೆ ಚೆನ್ನಗಿರಿ, ಶಿವಮೊಗ್ಗ, ಭದ್ರಾವತಿ ,ವಿಐಎಸ್‌ಎಲ್, ಎಂಪಿಎಂ ಹಾಗೂ ಕಡೂರಿನಿಂದ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟು ಹಾನಿಯ ಪ್ರಮಾಣವನ್ನು ಇನ್ನಷ್ಟೇ ಅಂದಾಜು ಮಾಡಬೇಕಿದೆ.
ಸುಮಾರು ೫೦ ಅಗ್ನಿ ಶಾಮಕದಳ ಸಿಬ್ಬಂದಿ ಸತತ ೬ ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಸಾಮಿಲ್ ನಿಂದ ಸ್ಕಂದ ಸ್ಯಾನಿಟರಿ, ಜಿಎಸ್ ಆಟೋಮೊಬೈಲ್, ಎಸ್ ಎಲ್ ವಿ ಪವರ್ ಸಿಸ್ಟಮ್, ಆಫ್ರಿನ್ ಪ್ಲೈ ವುಡ್ ಅಂಗಡಿ ಸೇರಿದಂತೆ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಹರಡಿತ್ತು. ರಾತ್ರಿ ಇಡೀ ಪ್ರದೇಶದಲ್ಲಿ ಕರೆಂಟ್ ಕಡಿತ ಮಾಡಲಾಗಿತ್ತು.