ತಮಿಳುನಾಡಿನ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ ಶಿವಮೊಗ್ಗದ ಆರು ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಸೋಂಕು ದೃಢವಾದ ಆರು ಮಂದಿ ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಮಿಳುನಾಡಿನ ಮೇಲ್ ಮರತ್ತೂರಿನಲ್ಲಿರುವ ಓಂ ಶಕ್ತಿ ದೇವಾಲಯಕ್ಕೆ ಶಿವಮೊಗ್ಗದಿಂದ 82 ಬಸ್ಸುಗಳಲ್ಲಿ 4300 ಕ್ಕೂ ಹೆಚ್ಚು ಮಹಿಳೆಯರು ತೆರಳಿದ್ದರು. ಯಾತ್ರೆ ಮುಗಿಸಿ ಬಂದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಯಾತ್ರೆಗೆ ತೆರಳಿದ್ದ ಎಲ್ಲರನ್ನೂ ಹೊಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಹೋಂ ಕ್ವಾರಂಟೈನ್‌ನಲ್ಲಿದ್ದವರನ್ನು ಇದೀಗ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಮೇಲ್ವಿಚಾರಣೆ ವೇಳೆ ಶುಕ್ರವಾರ ಬೆಳಗ್ಗೆ ಆರು ಜನರಲ್ಲಿ ಕೋವಿಡ್ ಪಾಸಿಟಿವ್ ದೃಢವಾಗಿದೆ. ಅವರಿಗೆ ಇದೀಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓಂ ಶಕ್ತಿ ಯಾತ್ರೆಗೆ ತೆರಳಿದ್ದ ಮಂಡ್ಯದ ಕೆಲವು ಮಹಿಳೆಯರಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡ ಬಗ್ಗೆ ಬಂದ ಸುದ್ದಿಯಿಂದ ಇಲ್ಲಿನ ಯಾತ್ರಿಕರಲ್ಲಿ ಆತಂಕ ಮೂಡಿದ್ದು, ಅದೀಗ ನಿಜವಾಗಿದೆ.