ಶಿವಮೊಗ್ಗ,ಜ.೭: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆಯಾಗಿರುವುದರಿಂದ ಸಾಗರ ತಾಲೂಕು ಸಿಗಂದೂರು ಚೌಡೇಶ್ವರಿ ದೇವಾಲಯವು ಶನಿವಾರ ಮತ್ತು ಭಾನುವಾರ ಸಂಪೂರ್ಣ ಸ್ಥಗಿತವಾಗಿರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ಈ ದಿನಗಳಲ್ಲಿ ದೇಗುಲ ಬಂದ್ ಇರುವುದರಿಂದ ಯಾವುದೇ ಭಕ್ತಾದಿಗಳಿಗೆ ಕ್ಷೇತ್ರಕ್ಕೆ ಪ್ರವೇಶ ಇರುವುದಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ಕೋವಿಡ್ ನಿಯಮಾನುಸಾರ ನಿತ್ಯ ಧಾರ್ಮಿಕ ವಿಧಿವಿದಾನಗಳು ನಡೆಯಲಿದ್ದು, ಭಕ್ತಾದಿಗಳ ಭೇಟಿಗೆ ಅವಕಾಶವಿದೆ, ಸಾರ್ವಜನಿಕರು ಸಹಕರಿಸಬೇಕೆಂದು ಶ್ರೀ ಕ್ಷೇತ್ರದ ಆಡಳಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
previous post