ಗೇಣಿದಾರರ ಪರ ಹೋರಾಟಗಾರ ಈಡೂರು ಪರಶುರಾಮಪ್ಪನವರ ಜನ್ಮ ದಿನೋತ್ಸವ ಸ್ಮರಣೆಯನ್ನು ಮಂಗಳವಾರ ತಾಲೂಕಿನ ಈಡೂರು ಶ್ರೀ ಕಾಳಿಕಾಂಬ ದೇವಸ್ಥಾನದ ಸಭಾಭವನದಲ್ಲಿ ಅಭಿಮಾನಿಗಳು ಸರಳವಾಗಿ ಆಚರಿಸಿದರು.
ಪ್ರತಿಯೊಬ್ಬರ ನೆನಪಿನಲ್ಲಿ ಉಳಿಯುವಂತ ವ್ಯಕ್ತಿತ್ವ ಹೊಂದಿದ್ದ ಈಡೂರು ಪರಶುರಾಮಪ್ಪ ಅವರು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ಜನಮನ್ನಣೆಯನ್ನು ಗಳಿಸಿದ್ದರ ಬಗ್ಗೆ ಅಭಿಮಾನಿಗಳು ನೆನಪಿಸಿಕೊಂಡರು.
ಪುತ್ರ ಡಿ.ಪಿ.ಶ್ರೀಧರ್ ಈಡೂರು, ಇ.ಆರ್.ನಾಯ್ಕ್, ಎಚ್.ಕೆ.ನಾಯ್ಕ್, ಸದಾನಂದಗೌಡ, ರಾಘವೇಂದ್ರ ನಾಯ್ಕ್, ಮಧುಕೇಶ್ವರ ನಾಯ್ಕ್, ಚಂದ್ರಪ್ಪ, ತೋಪಪ್ಪ, ವೀರೇಂದ್ರಗೌಡ, ರಾಜೇಶ್, ಉಮೇಶ್, ಸುನಿಲ್, ಅಮಿತ್ ಕುಮಾರ್, ಸಂದೀಪ್, ಸುನಿಲ್ ನಾಯ್ಕ್, ಕಾಳಿಂಗಪ್ಪ, ಅಶಿಕ್ ಸೇರಿದಂತೆ ಶ್ರೀ ಬಂಗಾರೇಶ್ವರ ಸೇವಾ ಅಭಿವೃದ್ಧಿ ಟ್ರಸ್ಟ್ ಗುಡ್ನಾಪುರ ಹಾಗೂ ಶ್ರೀ ಕಾಳಿಕಾಂಬಾ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಶ್ರೀಯುತರ ಹಲವಾರು ಅಭಿಮಾನಿಗಳು ಭಾಗವಹಿಸಿದ್ದರು.
previous post
next post