ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಅಬ್ಬರ ಮುಂದುವರಿದಿದ್ದು, ಬುಧವಾರವೂ 251ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಶಿವಮೊಗ್ಗ ನಗರವು ಕೊರೊನ ಹಾಟ್‌ಸ್ಪಾಟ್ ಆಗಿದ್ದು ಒಂದೇ ದಿನ141 ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ಶಿವಮೊಗ್ಗ ನಗರದಲ್ಲಿ ಕೆಲ ಶಾಲೆಗಳಲ್ಲಿ ಹಲವು ಮಕ್ಕಳಿಗೆ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ. ಭದ್ರಾವತಿಯಲ್ಲಿ 43 ,ತೀರ್ಥಹಳ್ಳಿ1, ಶಿಕಾರಿಪುರ10, ಸಾಗರ 19, ಹೊಸನಗರ 23, ಸೊರಬದಲ್ಲಿ 2 ಪ್ರಕರಣಗಳು ದಾಖಲಾಗಿದ್ದರೆ, ಹೊರಜಿಲ್ಲೆಗಳ 12ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ 747 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
next post