ಮಲೆನಾಡಿನಲ್ಲಿ ಕೊರೊನ ಆತಂಕದ ನಡುವೆಯೇ ಮಾಮೂಲಿ ಅತಿಥಿ ಮಂಗನ ಕಾಯಿಲೆಯೂ ಒಕ್ಕರಿಸಿದೆ. ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆ ಗ್ರಾಮದ ಮಹಿಳೆಯೊಬ್ಬರಲ್ಲಿ ಮಂಗನಕಾಯಿಲೆಯ ವೈರಾಣು ಪತ್ತೆಯಾಗಿದೆ. ಮಂಗನಕಾಯಿಲೆ ಲಕ್ಷಣ ಕಾಣಿಸಿಕೊಂಡಿರುವ ಮಹಿಳೆಗೆ ಸದ್ಯ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗನಕಾಯಿಲೆ ಪತ್ತೆಯಾದ ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಮಂಗಗಳು ಸತ್ತ ಬಗ್ಗೆ ವರದಿಯಾಗಿಲ್ಲ. ಮೊನ್ನೆಯಷ್ಟೇ ಮಂಗಗಳ ಉಣುಗು ಪರೀಕ್ಷೆಯಲ್ಲಿ ರೋಗದ ಲಕ್ಷಣಗಳು ಕಂಡಿದ್ದವು. ಇತ್ತೀಚೆನ ವರ್ಷಗಳಲ್ಲಿ ಮಂಗನಕಾಯಿಲೆ ಮಲೆನಾಡನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಾವುನೋವುಗಳಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗಾಗಲೇ ಕೊರೊನ ಮಹಾಮಾರಿಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗೃತಾ ಕ್ರಮವಹಿಸಬೇಕಾಗಿರುವ ಅಗತ್ಯವಿದೆ.
previous post
next post