ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಅಟ್ಟಹಾಸ ಮುಂದುವರಿದಿದ್ದು, ಭಾನುವಾರ ಒಟ್ಟು 518 ಮಂದಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2914 ಕ್ಕೇರಿದೆ. ಇದೇ ವೇಳೆ ಒಬ್ಬರು ಕೊರೋನ ಸೋಂಕಿನಿಂದ ಮೃತರಾಗಿದ್ದಾರೆ. ಶಿವಮೊಗ್ಗ ತಾಲೂಕಲ್ಲಿ 180 ಮಂದಿಗೆ ಸೋಂಕು ತಗುಲಿದ್ದರೆ, ಭದ್ರಾವತಿಯಲ್ಲಿ 78 ತೀರ್ಥಹಳ್ಳಿಯಲ್ಲಿ 42 ಶಿಕಾರಿಪುರ 79, ಸಾಗರ 68, ಹೊಸನಗರ 31 ಸೊರಬ 26 ಹಾಗೂ ಇತರೆ ಜಿಲ್ಲೆಯ 14 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ